Cricket news black armband Team India: ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಮೂರನೇ ದಿನವಾದ ಶನಿವಾರ, ಭಾರತೀಯ ಕ್ರಿಕೆಟ್ ತಂಡವು ಕಪ್ಪು ಬ್ಯಾಂಡ್‌ಗಳನ್ನು ಧರಿಸಿ ಮೈದಾನಕ್ಕೆ ಬಂದಿದೆ... ಇತ್ತೀಚೆಗೆ ನಿಧನರಾದ ಭಾರತದ ಹಿರಿಯ ಟೆಸ್ಟ್ ಕ್ರಿಕೆಟಿಗ ದತ್ತಾಜಿರಾವ್ ಗಾಯಕ್ವಾಡ್ ಅವರ ಸ್ಮರಣಾರ್ಥವಾಗಿ ಆಟಗಾರರು ಕೈಗೆ ಕಪ್ಪು ಪಟ್ಟಿ ಧರಿಸಿದ್ದರು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ದತ್ತಾಜಿರಾವ್ ಗಾಯಕ್ವಾಡ್ ಅವರು ತಮ್ಮ 95 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿದ ಇವರು ಕಳೆದ 12 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮಂಗಳವಾರ (ಫೆಬ್ರವರಿ 13, 2024) ಜಗತ್ತಿಗೆ ವಿದಾಯ ಹೇಳಿದರು.


ಇದನ್ನೂ ಓದಿ-IND vs ENG: ಸರ್ಫರಾಜ್ ಖಾನ್ ತಂದೆಗೆ ಭರ್ಜರಿ ಗಿಫ್ಟ್‌ ನೀಡಿದ ಆನಂದ್ ಮಹೀಂದ್ರ!


ದತ್ತಾಜಿರಾವ್ ಗಾಯಕ್ವಾಡ್ ಅವರ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ.. ದತ್ತಾಜಿರಾವ್ ಅವರು 1952 ಮತ್ತು 1961 ರ ನಡುವೆ ಭಾರತ ತಂಡಕ್ಕಾಗಿ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 1959ರಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುವ ಅವಕಾಶ ಸಿಕ್ಕಿತ್ತು. 1961 ರಲ್ಲಿ ಅವರು ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಚೆನ್ನೈ ಮೈದಾನದಲ್ಲಿ ಆಡಲು ಬಂದ್ದಿದ್ದರು.. 


ದತ್ತಾಜಿರಾವ್ ಗಾಯಕ್ವಾಡ್ ಅವರು ರಣಜಿ ಟ್ರೋಫಿಯಲ್ಲಿ ಬರೋಡಾ ತಂಡವನ್ನು ಪ್ರತಿನಿಧಿಸಿದ್ದು.. ಬರೋಡಾ ಪರ 1947 ರಿಂದ 1961 ರವರೆಗೆ ಕ್ರಿಕೆಟ್ ಆಡಿದರು. ಈ ಅವಧಿಯಲ್ಲಿ ಅವರು 36.40 ಸರಾಸರಿಯಲ್ಲಿ 5788 ರನ್ ಗಳಿಸಿದರು. ಇದರಲ್ಲಿ 17 ಶತಕಗಳು ಮತ್ತು 23 ಅರ್ಧ ಶತಕಗಳು ಸೇರಿವೆ. 


ಇದನ್ನೂ ಓದಿ-IND vs ENG: ಇತಿಹಾಸ ಸೃಷ್ಟಿಸಿದ ಅಶ್ವಿನ್.. ದಿಗ್ಗಜರ ದಾಖಲೆಳೆಲ್ಲ ಉಡೀಸ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.