ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ರಾ ಧೋನಿ ?
ವಿಶ್ವಕಪ್ ಟೂರ್ನಿಯ ನಂತರ ಧೋನಿ ನಿರಂತರವಾಗಿ ಕ್ರಿಕೆಟ್ ಟೂರ್ನಿಗಳಿಗೆ ಗೈರುಹಾಜರಾಗುತ್ತಿದ್ದಾರೆ. ಇನ್ನೊಂದೆಡೆಗೆ ನೂತನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಹಿತ ಈ ವಿಚಾರವಾಗಿ ಚರ್ಚಿಸುವುದಾಗಿ ಹೇಳಿದ್ದರು. ಆದಾಗ್ಯೂ ಧೋನಿ ಮಾತ್ರ ಬಹಿರಂಗವಾಗಿ ಮಾತನಾಡಿಲ್ಲ.
ನವದೆಹಲಿ: ವಿಶ್ವಕಪ್ ಟೂರ್ನಿಯ ನಂತರ ಧೋನಿ ನಿರಂತರವಾಗಿ ಕ್ರಿಕೆಟ್ ಟೂರ್ನಿಗಳಿಗೆ ಗೈರುಹಾಜರಾಗುತ್ತಿದ್ದಾರೆ. ಇನ್ನೊಂದೆಡೆಗೆ ನೂತನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಹಿತ ಈ ವಿಚಾರವಾಗಿ ಚರ್ಚಿಸುವುದಾಗಿ ಹೇಳಿದ್ದರು. ಆದಾಗ್ಯೂ ಧೋನಿ ಮಾತ್ರ ಬಹಿರಂಗವಾಗಿ ಮಾತನಾಡಿಲ್ಲ.
ಆದರೆ ಇಂದು ಟ್ವಿಟ್ಟರ್ ನಲ್ಲಿ #DhoniRetires ಎನ್ನುವ ಟ್ರೆಂಡಿಂಗ್ ಅಭಿಯಾನ ನಡೆಯುತ್ತಿರುವುದು ಈಗ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ವಿಶ್ವಕಪ್ ಟೂರ್ನಿಯ ನಂತರ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳಿಂದ ಹಿಂದುಳಿದ್ದರು, ಇನ್ನೂ ಅವರ ಹೆಸರನ್ನು ಬಾಂಗ್ಲದೇಶದ ವಿರುದ್ಧದ ಸರಣಿಗೂ ಕೂಡ ಪರಿಗಣಿಸಲಾಗಿಲ್ಲ. ಈ ಹಿನ್ನಲೆಯಲ್ಲಿ ಧೋನಿಯವರ ಮುಂದಿನ ನಡೆಯ ಕೂತುಹಲ ಕೆರಳಿಸಿದೆ.
ಸೌರವ್ ಗಂಗೂಲಿ ನೂತನ ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಧೋನಿ ವಿಚಾರವಾಗಿ ಮಾತನಾಡುತ್ತಾ ' ಚಾಂಪಿಯನ್ಸ್ ಗಳೂ ಬೇಗನೆ ನಿವೃತ್ತಿಯಾಗುವುದಿಲ್ಲ ಎಂದು ಹೇಳಿ ಅವರ ಮನಸ್ಸಿನಲ್ಲಿ ಏನು ಇದೆ ಎನ್ನುವುದನ್ನು ತಿಳಿಯಲು ಅವರ ಜೊತೆ ಮಾತನಾಡುವುದಾಗಿ ಹೇಳಿದ್ದರು.