India vs Bangladesh 2nd ODI-Weather Forecast: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯ ಇಂದು ಢಾಕಾದಲ್ಲಿ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಶೇರ್-ಎ-ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಸರಣಿ ಕಾಪಾಡಿಕೊಳ್ಳಬೇಕಿದೆ. ಟೀಂ ಇಂಡಿಯಾಗೆ ಈ ಪಂದ್ಯವು ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಈ ಪಂದ್ಯದಲ್ಲಿ ಗೆದ್ದರೆ, ಸರಣಿ ಆಸೆ ಜೀವಂತವಾಗಿರುತ್ತದೆ.


COMMERCIAL BREAK
SCROLL TO CONTINUE READING

ಈಗಾಗಲೇ ಮೊದಲ ಏಕದಿನ ಪಂದ್ಯವನ್ನು ಗೆದ್ದು ಮೂರು ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾದೇಶ 1-0 ಮುನ್ನಡೆ ಸಾಧಿಸಿದೆ. ಮೊದಲ ಏಕದಿನ ಪಂದ್ಯವನ್ನು ಬಾಂಗ್ಲಾದೇಶ ಒಂದು ವಿಕೆಟ್‌ನಿಂದ ಗೆದ್ದುಕೊಂಡಿತ್ತು.


ಇದನ್ನೂ ಓದಿ:  Team India 2023 schedule: 2023ರಲ್ಲಿ ಹೀಗಿರಲಿದೆ ಟೀಂ ಇಂಡಿಯಾದ ಕ್ರಿಕೆಟ್ ವೇಳಾಪಟ್ಟಿ


ಸರಣಿಯ ಮೊದಲ ಏಕದಿನ ಪಂದ್ಯವನ್ನು ಬಾಂಗ್ಲಾದೇಶ ಕೇವಲ ಒಂದು ವಿಕೆಟ್‌ನಿಂದ ಗೆದ್ದುಕೊಂಡಿತು. ಭಾರತದ ಬ್ಯಾಟಿಂಗ್ ವಿಫಲವಾಗಿ ತಂಡ 41.2 ಓವರ್‌ಗಳಲ್ಲಿ 186 ರನ್‌ಗಳಿಗೆ ಆಲೌಟ್ ಆಯಿತು. ವಿಕೆಟ್ ಕೀಪರ್ ಆಗಿದ್ದ ಕೆಎಲ್ ರಾಹುಲ್ ಬ್ಯಾಟಿಂಗ್ ನಲ್ಲಿ 73 ರನ್ ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ಬಾಂಗ್ಲಾ ಪರ ಅನುಭವಿ ಆಲ್ ರೌಂಡರ್ ಶಕೀಬ್ ಅಲ್ ಹಸನ್ 5 ವಿಕೆಟ್ ಪಡೆದರೆ, ಇಬಾದತ್ ಹುಸೇನ್ 4 ವಿಕೆಟ್ ಪಡೆದರು. ಇದಾದ ಬಳಿಕ ನಾಯಕ ಲಿಟನ್ ದಾಸ್ 41 ರನ್ ಗಳಿಸಿದರೆ, ಪಂದ್ಯ ಶ್ರೇಷ್ಠ ಮೆಹದಿ ಹಸನ್ ಮಿರಾಜ್ ಅಜೇಯ 38 ರನ್ ಗಳಿಸಿದ್ದರು. ವೇಗಿ ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆದಿದ್ದಾರೆ.


ಹವಾಮಾನ ಹೇಗಿದೆ?


ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮತ್ತೊಮ್ಮೆ ಢಾಕಾದಲ್ಲಿ ಮುಖಾಮುಖಿಯಾಗಲಿವೆ. ಹವಾಮಾನದ ಬಗ್ಗೆ ಮಾತನಾಡುವುದಾದರೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಇದೆ. ಹಗಲಿನಲ್ಲಿ ಢಾಕಾದಲ್ಲಿ ಹವಾಮಾನವು ಉತ್ತಮವಾಗಿರುತ್ತದೆ ಮತ್ತು ತಾಪಮಾನವು 24 ಡಿಗ್ರಿ ಸೆಲ್ಸಿಯಸ್‌ಗೆ ಏರಬಹುದು. ಮಧ್ಯಾಹ್ನ 1-3 ಗಂಟೆಯ ನಡುವೆ ತಾಪಮಾನ 28-29 ಡಿಗ್ರಿಯಲ್ಲಿ ಉಳಿಯುವ ಮುನ್ಸೂಚನೆ ಇದೆ. ಇನ್ನು ರಾತ್ರಿಯಲ್ಲಿ 21 ಡಿಗ್ರಿಗಳವರೆಗೆ ತಾಪಮಾನ ಇರಲಿದೆ. ಈ ಸಮಯದಲ್ಲಿ, ಗಾಳಿಯ ವೇಗ ಗಂಟೆಗೆ 7-11 ಕಿಮೀ ಇರಬಹುದು.  ಆರ್ದ್ರತೆಯ ಮಟ್ಟವು 74 ಪ್ರತಿಶತದವರೆಗೆ ಇರುತ್ತದೆ.


ಇದನ್ನೂ ಓದಿ:  IND vs BAN Pitch Report: 2ನೇ ಏಕದಿನ ಪಂದ್ಯದಲ್ಲಿ ಅಬ್ಬರಿಸಲಿದ್ದಾರೆ ಟೀಂ ಇಂಡಿಯಾದ ಸ್ಟಾರ್ ಬೌಲರ್: ಸಹಕರಿಸುತ್ತಾ ಈ ಪಿಚ್?


ಬ್ಯಾಟ್ಸ್‌ಮನ್‌ಗಳ ಮೇಲೆ ಕೋಪಗೊಂಡಿದ್ದ ರೋಹಿತ್:


ಮೊದಲ ಏಕದಿನ ಪಂದ್ಯದ ಸೋಲಿನ ನಂತರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂದ್ಯದ ನಂತರ ಮಾತನಾಡಿದ ಅವರು, 'ಇದು ಅತ್ಯಂತ ನಿಕಟ ಪಂದ್ಯವಾಗಿತ್ತು. ನಾವು ಆ ಪರಿಸ್ಥಿತಿಯಲ್ಲಿ ಚೆನ್ನಾಗಿ ಆಡಬೇಕಿತ್ತು. ನಮ್ಮ ಬ್ಯಾಟಿಂಗ್ ಉತ್ತಮವಾಗಿರಲಿಲ್ಲ. 186 ಉತ್ತಮ ಸ್ಕೋರ್ ಆಗಿರಲಿಲ್ಲ. ಆದರೆ ನಾವು ಚೆನ್ನಾಗಿ ಬೌಲ್ ಮಾಡಿದ್ದೇವೆ. ಬಾಂಗ್ಲಾದವರು ಕೊನೆಯವರೆಗೂ ತಮ್ಮ ಹಿಡಿತವನ್ನು ಉಳಿಸಿಕೊಂಡರು. ಖಂಡಿತವಾಗಿಯೂ ನಾವು ಕೊನೆಯಲ್ಲಿ ಉತ್ತಮವಾಗಿ ಬೌಲ್ ಮಾಡಲು ಇಷ್ಟಪಡುತ್ತೇವೆ. ಆದರೆ 40 ಓವರ್‌ಗಳವರೆಗೆ ಚೆನ್ನಾಗಿ ಬೌಲ್ ಮಾಡಿ ವಿಕೆಟ್ ಪಡೆದಿದ್ದೇವೆ. ನಮ್ಮ ಬಳಿ ಸಾಕಷ್ಟು ರನ್‌ಗಳಿರಲಿಲ್ಲ. ಇನ್ನೂ 25-30 ರನ್ ಇದ್ದಿದ್ದರೆ ಸಹಾಯ ಆಗಬಹುದಿತ್ತು” ಎಂದು ಹೇಳಿಕೆ ನೀಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.