`Don`t Let Us Die`: `ನಮ್ಮನ್ನು ಸಾಯಲು ಬಿಡಬೇಡಿ` ವಿಶ್ವದ ನಾಯಕರುಗಳಿಗೆ ಅಫ್ಘಾನಿಸ್ತಾನ್ ಕ್ರಿಕೆಟಿಗನ ಮನವಿ
Cricketer Rashid Khan Emotional Post - ಅಫ್ಘಾನಿಸ್ತಾನ್ ಕ್ರಿಕೆಟ್ ತಂಡದ (Afghanistan Cricketer) ಸ್ಟಾರ್ ಲೆಗ್ ಸ್ಪಿನ್ನರ್ ಆಗಿರುವ ರಶೀದ್ ಖಾನ್ (Rashid Khan), ತನ್ನ ದೇಶದ ಜನರ ಪರವಾಗಿ ಮಾರ್ಮಿಕ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ತನ್ನ ಪೋಸ್ಟ್ ನಲ್ಲಿ ಅವರು ವಿಶ್ವದ ನಾಯಕರುಗಳಿಗೆ ಮನವಿಯೊಂದನ್ನು ಮಾಡಿದ್ದು, ನಮ್ಮ ದೇಶದ ಜನರು ಶಾಂತಿ ಬಯಸುತ್ತಾರೆ. ಆದರೆ, ದಾಳಿಗಳಲ್ಲಿ ಸಾವಿರಾರು ಕುಟುಂಬಗಳು ಸ್ಥಳಾಂತರಗೊಂಡಿವೆ. ನಮ್ಮನ್ನು ಸಂಕಷ್ಟದಲ್ಲಿ ಬಿಡಬೇಡಿ, ಆಫ್ಘನ್ನರನ್ನು ಕೊಲ್ಲುವುದನ್ನು ನಿಲ್ಲಿಸಿ ಎಂದು ಬರೆದಿದ್ದಾರೆ.
ನವದೆಹಲಿ: Rashid Khan To World Leaders - ಪ್ರಸ್ತುತ ಅಫ್ಘಾನಿಸ್ಥಾನದಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ (Taliban) ಹಾಗೂ ಸರ್ಕಾರದ ಸೈನ್ಯಗಳ (Afghanistan Army) ನಡುವೆ ಭೀಕರ ಕಾಳಗ ನಡೆಯುತ್ತಿದೆ. ದೇಶದ ಹೊರಭಾಗದ ಮೇಲೆ ಈಗಾಗಲೇ ತಾಲಿಬಾನ್ ತನ್ನ ಹಿಡಿತ ಸಾಧಿಸಿದೆ ಹಾಗೂ ಇದೀಗ ಪ್ರಾಂತ್ಯಗಳ ರಾಜಧಾನಿಗಳತ್ತ ಮುಖಮಾಡಿದೆ. ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ತಾಲಿಬಾನ್, ಅಫ್ಘಾನಿಸ್ತಾನದ ಶೇ.80 ರಷ್ಟು ಭಾಗವನ್ನು ವಶಕ್ಕೆ ಪಡೆದಿದೆ ಅಥವಾ ಅದಕ್ಕಾಗಿ ಯುದ್ಧ ಮುಂದುವರೆಸಿದೆ. ಅಮೆರಿಕಾದ ಸೇನೆ ವಾಪಸಾತಿ ಬಳಿಕ ಅಲ್ಲಿನ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಇದೀಗ ಆಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ಆಗಿರುವ ರಶೀದ್ ಖಾನ್, ತನ್ನ ದೇಶದ ನಾಗರಿಕರ ಪರವಾಗಿ ವಿಶ್ವದ ನಾಯಕರುಗಳಿಗೆ (World Leaders) ಭಾವನಾತ್ಮಕ ಮನವಿಯೊಂದನ್ನು ಮಾಡಿದ್ದಾರೆ.
22 ವರ್ಷ ವಯಸ್ಸಿನ ಸ್ಟಾರ್ ಕ್ರಿಕೆಟರ್ ಆಗಿರುವ ರಶೀದ್ ಖಾನ್ ತನ್ನ ಟ್ವಿಟ್ಟರ್ (Rashid Khan Twitter Account) ಖಾತೆಯ ಮೂಲಕ ವಿಶ್ವದ ನಾಯಕರುಗಲಿಗಾಗಿ ಮಾರ್ಮಿಕವಾಗಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ತನ್ನ ಪೋಸ್ಟ್ ನಲ್ಲಿ ಬರೆದುಕೊಂಡಿರುವ ರಶೀದ್ ಖಾನ್, ' ವಿಶ್ವದ ನಾಯಕರುಗಳೇ ನನ್ನ ದೇಶ ಸಂಕಷ್ಟದಲ್ಲಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ದಿನನಿತ್ಯ ಸಾವಿರಾರು ಜನರು ಹುತಾತ್ಮರಾಗುತ್ತಿದ್ದಾರೆ. ಮನೆ ಮತ್ತು ಆಸ್ತಿ ಪಾಸ್ತಿಗಳು ನಷ್ಟ ಅನುಭವಿಸುತ್ತಿವೆ' ಎಂದಿದ್ದಾರೆ.
[[{"fid":"213713","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಇದನ್ನೂ ಓದಿ-Airstrike on Taliban Terrorists: ತಾಲಿಬಾನ್ ಉಗ್ರರ ಮೇಲೆ Airstrike, 254 ಉಗ್ರರ ಹತ್ಯೆ
ಭಾರತದ IPL, ಪಾಕಿಸ್ತಾನದ PSL, ಆಸ್ಟ್ರೇಲಿಯಾದ BBL ಸೇರಿದಂತೆ ವಿಶ್ವಾದ್ಯಂತದ ಹಲವು ಪ್ರಾಂಚೈಸಿಗಳಿಗೆ ಆಟವಾಗಿರುವ ಈ ಲೆಗ್ ಸ್ಪಿನ್ನರ್, 'ಜನರು ಶಾಂತಿ ಬಯಸುತ್ತಿದ್ದಾರೆ, ದಾಳಿಗಳ ಹಿನ್ನೆಲೆ ಹಲವು ಕುಟುಂಬಗಳು ಸ್ಥಳಾಂತರಗೊಂಡಿವೆ. ನಮ್ಮನ್ನು ಸಂಕಷ್ಟದಲ್ಲಿ ಬಿಡಬೇಡಿ. ಆಫ್ಘನ್ನರನ್ನು ಕೊಲ್ಲುವುದನ್ನು ನಿಲ್ಲಿಸಿ ಮತ್ತು ಆಫ್ಥಾನಿಸ್ಥಾನವನ್ನು ಹಾನಿಗೊಳಿಸಬೇಡಿ. ನಾವು ಶಾಂತಿ ಬಯುಸುತ್ತೇವೆ' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ-Taliban: ಡ್ಯಾನಿಶ್ ಸಿದ್ದಿಕಿ ಗುಂಡಿನ ಚಕಮಕಿಯಲ್ಲಿ ಸತ್ತಿಲ್ಲ, ತಾಲಿಬಾನ್‌ನಿಂದ ಕೊಲ್ಲಲ್ಪಟ್ಟಿದ್ದಾರೆ- ವರದಿ
ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ರಶೀದ್ ನೋವು ತೋಡಿಕೊಂಡಿದ್ದಾರೆ
ಅಫಘಾನ್ ಸರ್ಕಾರಿ ಪಡೆಗಳು ಮತ್ತು ತಾಲಿಬಾನ್ ನಡುವಿನ ಯುದ್ಧವು ಅನೇಕ ಕುಟುಂಬಗಳನ್ನು ನಿರಾಶ್ರಿತರನ್ನಾಗಿಸಿದೆ ಮತ್ತು ಹೆಚ್ಚಿನ ಸಂಖ್ಯೆಯ ಮಕ್ಕಳು ಮತ್ತು ಮಹಿಳೆಯರನ್ನು ಗುರಿಯನ್ನಾಗಿಸಿದೆ. ಮಕ್ಕಳನ್ನು ಬಲವಂತವಾಗಿ ಸಶಸ್ತ್ರ ಸಂಘಟನೆಗಳಿಗೆ ಸೇರಿಸಿಕೊಳ್ಳಲಾಗುತ್ತಿದೆ. ಏತನ್ಮಧ್ಯೆ, ಅಫ್ಘಾನಿಸ್ತಾನದಲ್ಲಿ ಯುಎನ್ ಯುನಿಸೆಫ್ ನ ಪ್ರತಿನಿಧಿ ಹರ್ವೆ ಲುಡೋವಿಚ್ ಹೇಳಿಕೆಯಲ್ಲಿ ಹೇಳಿದ್ದು, ಅಫ್ಘಾನಿಸ್ತಾನದಲ್ಲಿ ಕಳೆದ 72 ಗಂಟೆಗಳಲ್ಲಿ 20 ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು 130 ಮಂದಿ ಗಾಯಗೊಂಡಿದ್ದಾರೆ. ಇದೇ ವೇಳೆ UNHCR ಪ್ರಕಾರ, ಅಫ್ಘಾನಿಸ್ತಾನದಲ್ಲಿ ಕಳೆದ ತಿಂಗಳಲ್ಲಿ 35,000 ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತಗೊಂಡಿವೆ ಎನ್ನಲಾಗಿದೆ.
ಇದನ್ನೂ ಓದಿ-ಕೇವಲ 24 ಗಂಟೆಯಲ್ಲಿಯೇ 262 ತಾಲಿಬಾನ್ ಭಯೋತ್ಪಾದಕರ ಹತ್ಯೆ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ