ಜೀವನದಲ್ಲಿ ಶಾರ್ಟ್ ಕಟ್ ಅನುಸರಿಸಬೇಡ: ತಂದೆಯ ಕಿವಿಮಾತನ್ನು ಮಗನಿಗೆ ಹೇಳಿದ ಸಚಿನ್
ಕ್ರಿಕೆಟಿಗನ ಪುತ್ರ ಅರ್ಜುನ್ ತೆಂಡೂಲ್ಕರ್, ಇತ್ತೀಚೆಗೆ ಟಿ 20 ಮುಂಬೈ ಲೀಗ್ನಲ್ಲಿ ಆಡಿ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದರು.
ಕ್ರಿಕೆಟ್ ಜಗತ್ತಿನ ದೇವರು ಎಂದೇ ಖ್ಯಾತಿ ಪಡೆದಿರುವ ಲೆಜೆಂಡ್ ಸಚಿನ್ ತೆಂಡೂಲ್ಕರ್ ಜೀವನದಲ್ಲಿ 'ಶಾರ್ಟ್ ಕಟ್' ಅನುಸರಿಸಬೇಡಿ ಎಂದು ಅವರ ತಂದೆ ನೀಡಿದ್ದ ಸಲಹೆಯನ್ನು ಎಡಗೈ ವೇಗದ ಬೌಲರ್ ಆಗಿರುವ ತಮ್ಮ ಪುತ್ರ ಅರ್ಜುನ್ ಗೆ ತಿಳಿಸಿದ್ದಾರೆ.
ಕ್ರಿಕೆಟಿಗನ ಪುತ್ರ ಅರ್ಜುನ್ ತೆಂಡೂಲ್ಕರ್, ಇತ್ತೀಚೆಗೆ ಟಿ 20 ಮುಂಬೈ ಲೀಗ್ನಲ್ಲಿ ಆಡಿ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದರು.
ಟಿ-20 ಮುಂಬೈ ಲೀಗ್ ಆಟಗಾರರ ಹರಾಜಿನಲ್ಲಿ ದುಬಾರಿ ಬೆಲೆಗೆ ಹರಾಜಾಗಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತಂಡೂಲ್ಕರ್ ಆಕಾಶ್ ಟೈಗರ್ಸ್ ಮುಂಬಯಿ ವೆಸ್ಟರ್ನ್ ಸಬರ್ಬ್ ಅವರು 5 ಲಕ್ಷ ರೂ. ಗೆ ಖರೀದಿಸಿದ್ದರು. ಎಂಡಬ್ಲ್ಯೂಎಸ್ ಮತ್ತು ಟ್ರಯಂಫ್ಸ್ ನೈಟ್ ಎಂಎನ್ಇ ನಡುವಿನ ಪಂದ್ಯದಲ್ಲಿ ಆಲ್ ರೌಂಡರ್ ಆಗಿ ಮಿಂಚಿದ್ದರು. ವಾಂಖೇಡೆ ಕ್ರೀಡಾಂಗಣದಲ್ಲಿ ಶನಿವಾರದಂದು ನಡೆದ ಸೆಮಿ-ಫೈನಲ್ಸ್ನಲ್ಲಿಯೂ ಸಹ ಅರ್ಜುನ್ ಎಲ್ಲರ ಗಮನ ಸೆಳೆದರು.
ಒತ್ತಡವನ್ನು ನಿಭಾಯಿಸುವ ಬಗ್ಗೆ ಮಗನಿಗೆ ಸಚಿನ್ ಸಲಹೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಕ್ರಿಕೆಟ್ ದಿಗ್ಗಜ, "ಅವನು ಭಾವೋದ್ರಿಕ್ತ ಮತ್ತು ನಾನು ಅವನನ್ನು ಯಾವುದಕ್ಕೂ ಬಲವಂತ ಮಾಡುವುದಿಲ್ಲ. ನಾನು ಎಂದಿಗೂ ಅವನನ್ನು ಕ್ರಿಕೆಟ್ ಆಡುವಂತೆ ಬಲವಂತ ಮಾಡಿಲ್ಲ. ಮೊದಲಿಗೆ ಆತ ಫುಟ್ಬಾಲ್ ಆಡುತ್ತಿದ್ದ, ನಂತರದಲ್ಲಿ ಚೆಸ್ ಆಡುವುದರಲ್ಲಿ ಆಸಕ್ತಿ ತೋರಿದ್ದ, ಈಗ ಅವನು ಕ್ರಿಕೆಟ್ ಆಡುತ್ತಿದ್ದಾನೆ."
"ಜೀವನದಲ್ಲಿ ಏನು ಬೇಕಾದರೂ ಮಾಡು, ಆದರೆ ಶಾರ್ಟ್ ಕಟ್ ಅನುಸರಿಸಬೇಡ ಎಂದು ನನ್ನ ತಂದೆ(ರಮೇಶ್ ತೆಂಡೂಲ್ಕರ್) ನನಗೆ ಚಿಕ್ಕ ಸಂದೇಶವನ್ನು ನೀಡಿದ್ದರು. ನಾನು ನನ್ನ ಮಗನಿಗೂ ಅದನ್ನೇ ಹೇಳಲು ಇಚ್ಚಿಸುತ್ತೇನೆ... ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ನಂತರ ನೀವೂ ಅದಕ್ಕೆ ಹೇಗೆ ಶುಲ್ಕ ಪಡೆಯುತ್ತೀರಿ ಎಂಬುದು ನಿಮಗೆ ಸೇರಿದ್ದು" ಎಂದು ಸಚಿನ್ ಸುದ್ದಿಗಾರರಿಗೆ ತಿಳಿಸಿದರು.
ಇದೇ ವೇಳೆ ಮತ್ತೊಬ್ಬರು ಮಾಸ್ಟರ್ ಬ್ಲಾಸ್ಟರ್ ಮಗನಿಂದ ಏನನ್ನು ನಿರೀಕ್ಷಿಸುತ್ತಾರೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿನ್, "ಸಾಮಾನ್ಯ ಪೋಷಕರಂತೆಯೇ ನನ್ನ ಮಗನೂ ಉತ್ತಮ ಪ್ರದರ್ಶನ ನೀಡುವಂತೆ ನಿರೀಕ್ಷಿಸುವುದಾಗಿ ತಿಳಿಸಿದರು".
"ಅರ್ಜುನ್ ಮತ್ತು ಅವನ ತಂಡಕ್ಕೆ ತಮ್ಮ ಪ್ರತಿಭೆಯನ್ನು ತೋರಿಸಲು ಇದು [T20 ಮುಂಬೈ ಲೀಗ್] ಉತ್ತಮ ವೇದಿಕೆಯಾಗಿದೆ. ಅಪ್ಸ್ ಅಂಡ್ ಡೌನ್ಸ್ ನೈಜ-ಅನುಭವವನ್ನು ಒದಗಿಸುತ್ತವೆ. ಈ ವೇಳೆ ನಮ್ಮ ತಪ್ಪುಗಳನ್ನು ಅರ್ಥ ಮಾಡಿಕೊಂಡು ಕಲಿತರೆ ಅದು ನಮ್ಮ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ" ಎಂದು ಸಚಿನ್ ಸಲಹೆ ನೀಡಿದರು.
ಫಲಿತಾಂಶ ದೇವರ ಕೈಯಲ್ಲಿರುತ್ತದೆ, ಆದರೆ ಪ್ರಯತ್ನ ನಮ್ಮ ಕೈಯಲ್ಲಿರುತ್ತದೆ ಎಂದು ಸಚಿನ್ ತಮ್ಮ ಮಗನಿಗೆ ಕಿವಿಮಾತು ಹೇಳಿದ್ದಾರೆ.