ನವದೆಹಲಿ: 2012 ರಲ್ಲಿ ಅಜಾಗರೂಕ ಡೋಪಿಂಗ್ ಉಲ್ಲಂಘನೆಯಿಂದಾಗಿ ಅರ್ಜುನ ಪ್ರಶಸ್ತಿಗಾಗಿ ನಿರ್ಲಕ್ಷಿಸಲ್ಪಟ್ಟ ಬಾಕ್ಸಿಂಗ್ ಪಟು ಅಮಿತ್ ಪಂಗಲ್ (52 ಕೆಜಿ) ಅವರು ವೈಯಕ್ತಿಕ ಗೌರವಗಳ ಬಗ್ಗೆ ಚಿಂತಿಸುವುದಿಲ್ಲ, ಆದರೆ ತಮ್ಮ ತರಬೇತುದಾರ ಅನಿಲ್ ಧಂಕರ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡುವಂತೆ ಮನವಿ ಮಾಡಿದರು.


COMMERCIAL BREAK
SCROLL TO CONTINUE READING

ರಷ್ಯಾದ ಎಕಟೆರಿನ್‌ಬರ್ಗ್‌ನಲ್ಲಿ ಇದೀಗ ಮುಕ್ತಾಯಗೊಂಡ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಅಮಿತ್ ಪಂಗಲ್ ಪಾತ್ರರಾಗಿದ್ದಾರೆ. ಆದಾಗ್ಯೂ, 2012 ರಲ್ಲಿ ಡೋಪ್ ಪರೀಕ್ಷೆಯಲ್ಲಿ ವಿಫಲವಾದ ಕಾರಣ ಅವರನ್ನು ಅರ್ಜುನ ಪ್ರಶಸ್ತಿಗೆ ಪರಿಗಣಿಸಲಾಗಿಲ್ಲ, ಇದಕ್ಕಾಗಿ ಅವರಿಗೆ ಒಂದು ವರ್ಷದ ನಿಷೇಧ ಹೇರಲಾಗಿತ್ತು. 


"ನನಗೊಸ್ಕರ್ ಪ್ರಶಸ್ತಿಗಾಗಿ ಚಿಂತಿಸುವುದಿಲ್ಲ ಆದರೆ ನನ್ನ  ತರಬೇತುದಾರ ಅನಿಲ್ ಧಂಕರ್ ಅವರನ್ನು ದ್ರೋಣಾಚಾರ್ಯರಿಗೆ ಪರಿಗಣಿಸಿದರೆ ನಾನು ಕೃತಜ್ಞನಾಗಿರುತ್ತೇನೆ. ಅವರು ನನ್ನ ಆರಂಭಿಕ ವರ್ಷಗಳಲ್ಲಿ ನನ್ನನ್ನು ರೂಪಿಸಿದ್ದಾರೆ ಮತ್ತು ಅವರು ಇಲ್ಲದಿದ್ದರೆ ಇಂದು ನಾನು ಬಾಕ್ಸರ್ ಆಗುತ್ತಿರಲಿಲ್ಲ ಎಂದು ಪಂಗಲ್ ಪಿಟಿಐಗೆ ತಿಳಿಸಿದರು.


"ನಾನು 2008 ರಲ್ಲಿ ಬಾಕ್ಸಿಂಗ್ ಪ್ರಾರಂಭಿಸಿದೆ ಮತ್ತು ಧಂಕರ್ ಸರ್ ಅಂದಿನಿಂದಲೂ ನನಗೆ ಬಂಡೆಯಂತೆ ಬೆಂಬಲವಾಗಿದ್ದಾರೆ. ಈಗಲೂ, ಯಾವುದೇ ವಿಷಯದ ಬಗ್ಗೆ ನನಗೆ ಮಾರ್ಗದರ್ಶನ ಬೇಕಾದಾಗ ನಾನು ಧಂಕರ್ ಸರ್ ಬಳಿ ಹೋಗುವುದು. ಅವರಿಗೆ ಒಂದು ಪ್ರಶಸ್ತಿ ದೊರೆತರ ಅದು ನನಗೂ ಸಂತೋಷ ನೀಡುತ್ತದೆ ಎಂದು ಹೇಳಿದರು.


45 ವರ್ಷದ ಧಂಕರ್ ಯಾವತ್ತೂ ಯಾವುದೇ ರಾಷ್ಟ್ರೀಯ ತಂಡಗಳೊಂದಿಗೆ ಭಾಗಿಯಾಗಿಲ್ಲ ಆದರೆ ಬಾಕ್ಸರ್ ಆಗಿದ್ದ ಅವಧಿಯಲ್ಲಿ ರಾಷ್ಟ್ರಮಟ್ಟದ ಪದಕ ವಿಜೇತರಾಗಿದ್ದರು.