ನವದೆಹಲಿ: ಭಾರತದ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಬೇಕೆಂಬ ಕನಸಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಮಾತನಾಡಿರುವ ಸಿರಾಜ್(Mohammed Siraj), ಈ ಕನಸನ್ನು ನನಸು ಮಾಡುವ ಸಲುವಾಗಿ ನಾನು ಯಾವಾಗಲೂ ಸುರಕ್ಷಿತ ಹೆಜ್ಜೆಗಳನ್ನ ಇಡುತ್ತಿದ್ದೇನೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : IPL 2021: MS Dhoni ಸಿಎಸ್‌ಕೆ ಬಗ್ಗೆ ಭವಿಷ್ಯ ನುಡಿದ ಗೌತಮ್ ಗಂಭೀರ್


ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) 2021 ರ ಮುಂದಿನ ಶುಕ್ರವಾರ (ಏಪ್ರಿಲ್ 9) ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿ/ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮ್ಯಾಚ್ ನಲ್ಲಿ  ಓಪನರ್‌ ಆಗಿ ಸಿರಾಜ್ ಆರ್‌ಸಿಬಿಯಿಂದ ಗ್ರೌಂಡ್ ಗೆ ಇಳಿಯಲಿದ್ದಾರೆ.


ಇದನ್ನೂ ಓದಿ : IPL 2021 Digital Broadcasting Rights ಖರೀದಿಸಿದ YuppTV, ಸುಮಾರು 100 ದೇಶಗಳಲ್ಲಿ IPL 2021 ಪ್ರಸಾರ


ಐಪಿಎಲ್ 2021 ರ ಮೊದಲ ಪಂದ್ಯದಲ್ಲಿ ಸಿರಾಜ್ ಅವರು ಟೀಮ್ ಇಂಡಿಯಾ ಬೌಲರ್ ಜಸ್ಪ್ರಿತ್ ಬುಮ್ರಾ(Jasprit Bumrah) ವಿರುದ್ಧ ಹೋರಾಡಲಿದ್ದಾರೆ. “ನಾನು ಬೌಲಿಂಗ್ ಮಾಡುವಾಗಲೆಲ್ಲಾ ಜಸ್ಪ್ರಿತ್ ಬುಮ್ರಾ ನನ್ನ ಪಕ್ಕದಲ್ಲಿ ನಿಲ್ಲುತ್ತಿದ್ದರು. ಅವರು ಮೂಲಭೂತ ವಿಷಯಗಳಿಗೆ ಅಂಟಿಕೊಳ್ಳಬೇಕೆಂದು ಹೇಳಿದ್ದಾರೆ. ಇದಲ್ಲದೆ ಬೇರೇನೂ ಮಾಡಬೇಡಿ. ಅಂತಹ ಅನುಭವಿ ಆಟಗಾರ ಜೊತೆ ಮಾತನಾಡಲು ಒಳ್ಳೆಯ ಕಲಿಕೆ ಬಹಳ ಮುಖ್ಯ. ನಾನು ಇಶಾಂತ್ ಶರ್ಮಾ ಅವರೊಂದಿಗೆ ಆಡಿದ್ದೇನೆ, ಅವರು 100 ಟೆಸ್ಟ್ ಆಡಿದ್ದಾರೆ. ಡ್ರೆಸ್ಸಿಂಗ್ ಕೋಣೆಯಲ್ಲಿ ಅವರ ಜೊತೆ ಕೆಳೆಯುವ ಸಮಯ ಬಹಳ ಉತ್ತಮವಾಗಿರುತ್ತದೆ. ಭಾರತದಲ್ಲಿ  ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರನಾಬೇಕು ಎಂಬುವುದು ನನ್ನ ಕನಸು. ನನ್ನ ಕನಸುನ್ನು ನನಸು ಮಾಡಲು ಅವಕಾಶ ಸಿಕ್ಕಾಗಲೆಲ್ಲಾ ನಾನು ಶ್ರಮಿಸುತ್ತೇನೆ ”ಎಂದು ಆರ್‌ಸಿಬಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಸಿರಾಜ್ ಹೇಳಿದ್ದಾರೆ.


IPL ಮೇಲೆ ಕರೋನಾ ಕಾರ್ಮೋಡ, ಆರ್‌ಸಿಬಿಯ ಸ್ಟಾರ್ ಕ್ರಿಕೆಟಿಗನಿಗೆ ಕರೋನಾ ದೃಢ


ಸಿರಾಜ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯ(Test Match)ದ ಮೂಲಕ ಇಂಟೆರ್ ನ್ಯಾಷನಲ್ ಪಂದ್ಯೆಕ್ಕೆ ಪಾದಾರ್ಪಣೆ ಮಾಡಿದರು. ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ, ಸಿರಾಜ್ ತನ್ನ ತಂದೆಯನ್ನು ಕಳೆದುಕೊಂಡರು. ಅಲ್ಲದೆ ಸಿಡ್ನಿಯಲ್ಲಿ ಜನಾಂಗೀಯ ನಿಂದನೆಗೆ ಕೂಡ ಒಳಗಾಗಿದ್ದರು. ಈ ವರ್ಷದ ಆರಂಭದಲ್ಲಿ ತವರು ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 


ಇದನ್ನೂ ಓದಿ : "Bio-bubble ನಿಜಕ್ಕೂ ಕಷ್ಟಕರ,ಆದರೆ ಭಾರತೀಯರು ಹೆಚ್ಚು ಸಹಿಷ್ಣರು"


ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ನಾನು ಕ್ವಾರಂಟೈನ್(Quarantine ) ಆಗಿದೆ. ಅದರ ನಂತ್ರ ನಾವು ಅಭ್ಯಾಸ ಪಂದ್ಯದಿಂದ ಹಿಂತಿರುಗಿದಾಗ ನನ್ನ ತಂದೆ ತೀರಿಕೊಂದಿದ್ದರೆ ಎಂಬ ಸುದ್ದಿ ನನಗೆ ತಿಳಿಯಿತು. ಆಗ ಅವರ ನನಗೆ ಮ್ಯಾಚ್ ಬಿಟ್ಟು ಮರಳಿ ಮನೆಗೆ ಬರಲು ಹೇಳಲಿಲ್ಲ. ನನ್ನ ತಂದೆಯ ಅಲ್ಲ ಅಂತ್ಯೆಕ್ರಿಯೆ ಕಾರ್ಯವನ್ನೆಲ್ಲ ಮನೆ ನೆರೆಹೊರೆಯವರು ಫ್ರೆಂಡ್ಸ್ ಮತ್ತೆ ಸಂಬಂಧಿಕರು ಸೇರಿ ಮಾಡಿದರು. ನಾನು ಭಾರತಕ್ಕಾಗಿ ಆಡುವುದು ನನ್ನ ತಂದೆಯ ಕನಸಾಗಿತ್ತು. ನಾನು ಆಡುವುದನ್ನೇ ನೋಡಲು ನನ್ನ ತಂದೆ ಇರಲಿಲ್ಲ ಎಂದು ಸಿರಾಜ್ ಹೇಳಿದ್ದಾರೆ. 


ಇದನ್ನೂ ಓದಿ : ಐಪಿಎಲ್ ತಂಡಗಳಿಗೆ ಅಭ್ಯಾಸ ಮಾಡಲು ಅನುಮತಿ ನೀಡಿದ ಮಹಾರಾಷ್ಟ್ರ ಸರ್ಕಾರ


2020 ರ ಐಪಿಎಲ್ ಮ್ಯಾಚ್ ಬಗ್ಗೆ ಕೇಳಿದಾಗ, “ಕಳೆದ ವರ್ಷ, ನಾನು ಆರ್‌ಸಿಬಿ(RCB)ಗೆ ಆಯ್ಕೆ ಅದೇ, ಆಗ ನನಗೆ ಸ್ವಲ್ಪ ಭಯ ಇತ್ತು. ಆದರೆ ನಾನು ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡಲು ಪ್ರಾರಂಭಿಸಿದಾಗ, ಆಗ ನನಗೆ, ನಾನುಗೂ ಕೂಡ ಒಂದು ವಿಕೆಟ್ ತೆಗೆಯಲು ಬರುತ್ತದೆ ಎಂಬ ಆತ್ಮವಿಶ್ವಾಸ ಬಂತು. ಅದು ನನಗೆ ತುಂಬಾ ಸಹಾಯ ಮಾಡಿತು. ತದನಂತರ ಕೆಕೆಆರ್ ವಿರುದ್ಧದ ಮ್ಯಾಚ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ನನಗೆ ಸಾಕಷ್ಟು ಆತ್ಮವಿಶ್ವಾಸವನ್ನು ನೀಡಿತು. ಆರ್ ಸಿಬಿಯಲ್ಲಿ ತುಂಬಾ ಹೊಂದಾಣಿಕೆ ಇದೆ. ವಿರಾಟ್ ಕೊಹ್ಲಿ ಅವರು ಎಲ್ಲರನ್ನು ಒಗ್ಗೂಡಿಸಿಕೊಂಡು   ವಿಷಯಗಳನ್ನು ಚರ್ಚಿಸುತ್ತಾರೆ ಎಂದು ಹೇಳಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.