ದುಬೈ ವರ್ಲ್ಡ್ ಸೂಪರ್ ಸೀರಿಸ್: ಫೈನಲ್ನಲ್ಲಿ ಎಡವಿದ ಸಿಂಧು
ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ದುಬೈನಲ್ಲಿ ನಡೆದ ವರ್ಲ್ಡ್ ಸೂಪರ್ ಸೀರೀಸ್ ನ ಫೈನಲ್ ಪಂದ್ಯದಲ್ಲಿ ಸೋಲುವ ಮೂಲಕ ನಿರಾಶೆ ಅನುಭವಿಸಿದ್ದಾರೆ.
ನವದೆಹಲಿ: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ದುಬೈನಲ್ಲಿ ನಡೆದ ವರ್ಲ್ಡ್ ಸೂಪರ್ ಸೀರೀಸ್ ನ ಫೈನಲ್ ಪಂದ್ಯದಲ್ಲಿ ಸೋಲುವ ಮೂಲಕ ನಿರಾಶೆ ಅನುಭವಿಸಿದ್ದಾರೆ.
22 ವರ್ಷದ ಸಿಂಧು ಜಪಾನಿನ ಆಟಗಾರ್ತಿಯ ಅಕಾನೆ ಯಮಾಗುಚಿ ವಿರುದ್ದ 21-15, 12-21, 21-19 ಸೆಟ್ ಗಳ ಮೂಲಕ ಸೋಲನ್ನು ಅನುಭವಿಸಿದ್ದಾರೆ. ಸುಮಾರು 1 ಗಂಟೆ 34 ನಿಮಿಷಗಳ ಕಾಲ ನಡೆದ ಈ ಪಂದ್ಯ ಕೊನೆಯವರೆಗೂ ಪ್ರೇಕ್ಷಕರಲ್ಲಿ ಕುತೂಹಲವನ್ನು ಉಂಟುಮಾಡಿತ್ತು, ಮೊದಲ ಸುತ್ತಿನಲ್ಲಿ ಪಂದ್ಯದ ಮುನ್ನಡೆ ಕಾಯ್ದುಕೊಂಡಿದ್ದ ಸಿಂಧು ಎರಡನೆಯ ಸುತ್ತಿನಲ್ಲಿ ನಿರಾಶೆಯನ್ನು ಅನುಭವಿಸಿ ಪಂದ್ಯವನ್ನು ಕೈಚೆಲ್ಲಿದರು. ಆ ಮೂಲಕ ಸಿಂಧು ಈ ವರ್ಷದಲ್ಲಿ ನಡೆದ ರಿಯೋ ಒಲಂಪಿಕ್ ಮತ್ತು ಗ್ಲಾಸ್ಗೋ ವಿಶ್ವಚಾಂಪಿಯನ್ಶಿಪ್ ನ ಫೈನಲ್ ಪಂದ್ಯಗಳಲ್ಲಿ ಸೋತು ನಿರಾಶೆಗೊಂಡಿದ್ದ ಸಿಂಧುಗೆ ದುಬೈನ ಈ ಟೂರ್ನಿಯಲ್ಲಿಯೂ ಕೂಡ ಅದೆ ರೀತಿಯಲ್ಲಿ ಎಡವಿದರು.
ಅಗಸ್ಟ್ ನಲ್ಲಿ ನಡೆದ ವಿಶ್ವಚಾಂಪಿಯನ್ಶಿಪ್ ನ ಫೈನಲ್ ಪಂದ್ಯದಲ್ಲಿ ಜಪಾನಿನ ನೊಜೊಮಿ ಒಕುರಾ ವಿರುದ್ದ 19-21, 22-20, 20-22, ಅಂತರದಲ್ಲಿ ಪಂದ್ಯವನ್ನು ಸೋತಿದ್ದ ಸಿಂಧು,ಆ ಪಂದ್ಯವನ್ನು ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಅತ್ಯುತ್ತಮ ಪಂದ್ಯಗಳಲ್ಲಿ ಒಂದು ಎಂದು ಬಣ್ಣಿಸಲಾಗಿದೆ