ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್: ಈ ಬದ್ಧವೈರಿಗಳ ಕ್ರಿಕೆಟ್ ಪಂದ್ಯದ ನೇರಪ್ರಸಾರ ಇರುವುದಿಲ್ಲ…!
Duleep Trophy 2023: ದುಲೀಪ್ ಟ್ರೋಫಿಯ ಮೊದಲ ದಿನ, ಕೇಂದ್ರ ವಲಯವು ಪೂರ್ವ ವಲಯವನ್ನು ಎದುರಿಸಲಿದೆ. ಉತ್ತರ ವಲಯವು ಈಶಾನ್ಯ ವಲಯದ ತಂಡವನ್ನು ಎದುರಿಸಲಿದೆ. ಕೇಂದ್ರ ವಲಯ ಮತ್ತು ಪೂರ್ವ ವಲಯದ ನಡುವಿನ ಪಂದ್ಯ ಆಲೂರು ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಉತ್ತರ ವಲಯ ಮತ್ತು ಈಶಾನ್ಯ ವಲಯ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಣಾಹಣಿ ನಡೆಸಲಿವೆ.
Duleep Trophy 2023: ಟೀಂ ಇಂಡಿಯಾದ ವೆಸ್ಟ್ ಇಂಡೀಸ್ ಪ್ರವಾಸ ಜುಲೈ 12 ರಿಂದ ಆರಂಭವಾಗಲಿದೆ. ಮತ್ತೊಂದೆಡೆ ಭಾರತೀಯ ಕ್ರಿಕೆಟ್ ನ ದೇಶೀಯ ಋತುವು ಇಂದು ಅಂದರೆ ಜೂನ್ 28 ರಿಂದ ದುಲೀಪ್ ಟ್ರೋಫಿ 2023 ನೊಂದಿಗೆ ಪ್ರಾರಂಭವಾಗಲಿದೆ.
ದುಲೀಪ್ ಟ್ರೋಫಿಯ ಮೊದಲ ದಿನ, ಕೇಂದ್ರ ವಲಯವು ಪೂರ್ವ ವಲಯವನ್ನು ಎದುರಿಸಲಿದೆ. ಉತ್ತರ ವಲಯವು ಈಶಾನ್ಯ ವಲಯದ ತಂಡವನ್ನು ಎದುರಿಸಲಿದೆ. ಕೇಂದ್ರ ವಲಯ ಮತ್ತು ಪೂರ್ವ ವಲಯದ ನಡುವಿನ ಪಂದ್ಯ ಆಲೂರು ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಉತ್ತರ ವಲಯ ಮತ್ತು ಈಶಾನ್ಯ ವಲಯ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಣಾಹಣಿ ನಡೆಸಲಿವೆ. ಆದರೆ ಈ ಟೂರ್ನಿ ಆರಂಭವಾಗುವ ಮುನ್ನವೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ.
ಇದನ್ನೂ ಓದಿ: Budget 2023: ರಾಜ್ಯ ಬಜೆಟ್ 2023: ಸರ್ಕಾರದ ತೆರಿಗೆ ಸಂಗ್ರಹ ಸ್ಥಿತಿಗತಿ ಹೇಗಿದೆ?
ದೊಡ್ಡ ಸ್ಟಾರ್ ಆಟಗಾರರಾದ ಸರ್ಫರಾಜ್ ಖಾನ್, ಸೂರ್ಯಕುಮಾರ್ ಯಾದವ್ ಮತ್ತು ಚೇತೇಶ್ವರ ಪೂಜಾರ ದುಲೀಪ್ ಟ್ರೋಫಿಯಲ್ಲಿ ಆಡಲಿದ್ದಾರೆ. ಆದರೆ ಅಭಿಮಾನಿಗಳು ತಮ್ಮ ಟಿವಿ ಅಥವಾ ಸ್ಮಾರ್ಟ್‌ಫೋನ್ ನಲ್ಲಿ ದುಲೀಪ್ ಟ್ರೋಫಿ ಪಂದ್ಯಗಳನ್ನು ಲೈವ್ ಆಗಿ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಬಿಸಿಸಿಐ ಪ್ರಸ್ತುತ ಯಾವುದೇ ಪ್ರಸಾರವನ್ನು ಹೊಂದಿಲ್ಲ ಅಂದರೆ ಹಕ್ಕುಗಳನ್ನು ಸಹ ಮಾರಾಟ ಮಾಡಿಲ್ಲ. ಈ ಕಾರಣದಿಂದಾಗಿ ಈ ಬಾರಿ ದುಲೀಪ್ ಟ್ರೋಫಿಯ ನೇರ ಪ್ರಸಾರ ಅಥವಾ ಲೈವ್ ಸ್ಟ್ರೀಮಿಂಗ್ ಇರುವುದಿಲ್ಲ.
ಎರಡೂ ಆರಂಭಿಕ ಪಂದ್ಯಗಳು ಕ್ವಾರ್ಟರ್ ಫೈನಲ್ ನಂತೆ ನಡೆಯಲಿದೆ. ಕಳೆದ ಋತುವಿನ ವಿಜೇತ ಪಶ್ಚಿಮ ವಲಯ ಮತ್ತು ರನ್ನರ್ ಅಪ್ ದಕ್ಷಿಣ ವಲಯ ತಂಡಗಳು ಸೆಮಿಫೈನಲ್ ಗೆ ನೇರ ಪ್ರವೇಶ ಪಡೆದಿವೆ. ಜುಲೈ 12 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ದುಲೀಪ್ ಟ್ರೋಫಿಗೆ ತಂಡಗಳು ಇಂತಿವೆ:
ಪಶ್ಚಿಮ ವಲಯ: ಪ್ರಿಯಾಂಕ್ ಪಾಂಚಾಲ್ (ನಾ), ಚೇತೇಶ್ವರ ಪೂಜಾರ, ಸೂರ್ಯಕುಮಾರ್ ಯಾದವ್, ಹಾರ್ವಿಕ್ ದೇಸಾಯಿ (ವಿ.ಕೀ), ಪೃಥ್ವಿ ಶಾ, ಹೀತ್ ಪಟೇಲ್ (ವಿ.ಕೀ), ಸರ್ಫರಾಜ್ ಖಾನ್, ಅರ್ಪಿತ್ ವಾಸವಾಡ, ಅತಿತ್ ಸೇಠ್, ಶಮ್ಸ್ ಮುಲಾನಿ, ಯುವರಾಜ್ ದೋಡಿಯಾ, ಧರ್ಮೇಂದ್ರಸಿನ್ಹ್ ಜಡೇಜಾ, ಚೇತನ್ ಸಕಾರಿಯಾ, ಚಿಂತನ ಗಜ, ಅರ್ಜುನ್ ನಾಗವಾಸವಾಲ.
ದಕ್ಷಿಣ ವಲಯ: ಹನುಮ ವಿಹಾರಿ (ನಾಯಕ), ಮಯಾಂಕ್ ಅಗರ್ವಾಲ್ (ಉಪನಾಯಕ), ಸಾಯಿ ಸುದರ್ಶನ್, ರಿಕಿ ಭುಯಿ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಸಮರ್ಥ್, ವಾಷಿಂಗ್ಟನ್ ಸುಂದರ್, ಸಚಿನ್ ಬೇಬಿ, ಪ್ರದೋಶ್ ರಂಜನ್ ಪಾಲ್, ಸಾಯಿ ಕಿಶೋರ್, ವಿ ಕಾವೇರಪ್ಪ , ವಿ ವಿಶಾಕ್, ಕೆ ವಿ ಶಶಿಕಾಂತ್, ದರ್ಶನ್ ಮಿಸಾಲ್, ತಿಲಕ್ ವರ್ಮಾ.
ಪೂರ್ವ ವಲಯ: ಅಭಿಮನ್ಯು ಈಶ್ವರನ್ (ನಾಯಕ), ಶಹಬಾಜ್ ನದೀಪ್ (ಉಪನಾಯಕ), ಶಾಂತನು ಮಿಶ್ರಾ, ಸುದೀಪ್ ಘರಾಮಿ, ರಿಯಾನ್ ಪರಾಗ್, ಎ ಮಜುಂದಾರ್, ಬಿಪಿನ್ ಸೌರಭ್, ಎ ಪೊರೆಲ್ (wk), ಕೆ ಕುಶಾಗ್ರಾ (WK), ಶಹಬಾಜ್ ಅಹ್ಮದ್, ಮುಖೇಶ್ ಕುಮಾರ್, ಆಕಾಶ್ ದೀಪ್, ಅನುಕುಲ್ ರಾಯ್, ಎಂ ಮುರಾ ಸಿಂಗ್, ಇಶಾನ್ ಪೊರೆಲ್.
ಉತ್ತರ ವಲಯ: ಮನ್ದೀಪ್ ಸಿಂಗ್ (ನಾ), ಪ್ರಶಾಂತ್ ಚೋಪ್ರಾ, ಧ್ರುವ ಶೋರೆ, ಮನನ್ ವೋಹ್ರಾ, ಪ್ರಭಾಸಿಮ್ರಾನ್ ಸಿಂಗ್ (ವಿ.ಕೀ), ಅಂಕಿತ್ ಕುಮಾರ್, ಎಎಸ್ ಕಲ್ಸಿ, ಹರ್ಷಿತ್ ರಾಣಾ, ಅಬಿದ್ ಮುಷ್ತಾಕ್, ಜಯಂತ್ ಯಾದವ್, ಪುಲ್ಕಿತ್ ನಾರಂಗ್, ನಿಶಾಂತ್ ಸಂಧು, ಸಿದ್ಧಾರ್ಥ್ ಕೌಲ್, ವೈಭವ್ ಅರೋರಾ ಬಲ್ತೇಜ್ ಸಿಂಗ್.
ಕೇಂದ್ರ ವಲಯ: ಶಿವಂ ಮಾವಿ (ನಾಯಕ), ಉಪೇಂದ್ರ ಯಾದವ್ (ಉಪನಾಯಕ ಮತ್ತು ವಿಕೆಟ್‌ಕೀಪರ್), ವಿವೇಕ್ ಸಿಂಗ್, ಹಿಮಾಂಶು ಮಂತ್ರಿ, ಕುನಾಲ್ ಚಂಡೇಲಾ, ಶುಭಂ ಶರ್ಮಾ, ಅಮನದೀಪ್ ಖರೆ, ರಿಂಕು ಸಿಂಗ್, ಅಕ್ಷಯ್ ವಾಡ್ಕರ್, ಧ್ರುವ ಜುರೆಲ್, ಸೌರಭ್ ಕುಮಾರ್, ಮಾನವ್ ಸತಾರ್, ಸರನ್ಶ್ ಜೈನ್ , ಅವೇಶ್ ಖಾನ್, ಯಶ್ ಠಾಕೂರ್.
ಇದನ್ನೂ ಓದಿ: WhatsApp: ಬಳಕೆದಾರರಿಗಾಗಿ ಏಳು ಅದ್ಭುತ ವೈಶಿಷ್ಟ್ಯಗಳನ್ನು ಪರಿಚಯಿಸಿದ ವಾಟ್ಸಾಪ್
ಈಶಾನ್ಯ ವಲಯ: ರೊಂಗ್ಸೆನ್ ಜೊನಾಥನ್ (ನಾಯಕ), ನೀಲೇಶ್ ಲಮಿಚಾನೆ (ಉಪನಾಯಕ), ಕಿಶನ್ ಲಿಂಗ್ಡೋಹ್, ಲ್ಯಾಂಗ್ಲೋನ್ಯಾಂಬಾ, ಎಆರ್ ಅಹ್ಲಾವತ್, ಜೋಸೆಫ್ ಲಾಲ್ತಖುಮಾ, ಪ್ರಫುಲ್ಲಮಣಿ (WK), ದಿಪ್ಪು ಸಂಗ್ಮಾ, ಜೋತಿನ್ ಫೆರೋಯಿಜಮ್, ಇಮ್ಲಿವಾಟಿ ಲಾಮ್ತೂರ್, ಪಾಲ್ಜೋರ್ ಸಿನ್ಹಾ, ಆಕಾಶ್ ಕುಮಾರ್ ಚೌಧರಿ, ರಾಜ್‌ಕುಮಾರ್ ರೆಕ್ಸ್ ಸಿಂಗ್, ನಾಗಹೊ ಚಿಶಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ