ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡ್ವೇನ್ ಬ್ರಾವೋ
ವೆಸ್ಟ್ ವಿಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ತಮ್ಮ14 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಆದರೆ ವಿಶ್ವದಾದ್ಯಂತ ಟಿ 20 ಫ್ರಾಂಚೈಸಿ ಕ್ರಿಕೆಟ್ ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. 2004 ರಲ್ಲಿ ವಿಂಡೀಸ್ ಪರ ಆಡಿದ ಬ್ರಾವೋ 40 ಟೆಸ್ಟ್, 164 ಏಕದಿನ ಪಂದ್ಯಗಳು ಮತ್ತು 66 ಟ್ವೆಂಟಿ ಪಂದ್ಯಗಳನ್ನು ಆಡಿದ್ದಾರೆ.
ನವದೆಹಲಿ: ವೆಸ್ಟ್ ವಿಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ತಮ್ಮ14 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಆದರೆ ವಿಶ್ವದಾದ್ಯಂತ ಟಿ 20 ಫ್ರಾಂಚೈಸಿ ಕ್ರಿಕೆಟ್ ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. 2004 ರಲ್ಲಿ ವಿಂಡೀಸ್ ಪರ ಆಡಿದ ಬ್ರಾವೋ 40 ಟೆಸ್ಟ್, 164 ಏಕದಿನ ಪಂದ್ಯಗಳು ಮತ್ತು 66 ಟ್ವೆಂಟಿ ಪಂದ್ಯಗಳನ್ನು ಆಡಿದ್ದಾರೆ.
ಎರಡು ವರ್ಷಗಳ ಹಿಂದೆ ವಿಂಡೀಸ್ ಪರವಾಗಿ ಪಾಕಿಸ್ತಾನ ವಿರುದ್ಧ ನಡೆದ ಟ್ವೆಂಟಿ -20 ಪಂದ್ಯವನ್ನು ಆಡಿದ್ದರು. ಅಕ್ಟೋಬರ್ 2014 ರಲ್ಲಿ ಬ್ರಾವೊ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು ಮತ್ತು ಕಳೆದ 2010 ರಿಂದ ಮತ್ತೆ ಟೆಸ್ಟ್ ಕ್ರಿಕೆಟ್ನಲ್ಲಿ ಅವರು ಕಾಣಿಸಿಕೊಂಡಿಲ್ಲ.
ಈಗ ನಿವೃತ್ತಿ ವಿಚಾರವಾಗಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಡ್ವೇನ್ ಬ್ರಾವೋ ""ಇಂದು ನಾನು ಅಧಿಕೃತವಾಗಿ ಅಂತಾರಾಷ್ಟ್ರೀಯ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದೇನೆ, ನಾನು ಮೊದಲ ಬಾರಿಗೆ 14 ವರ್ಷಗಳ ಹಿಂದೆ ವೆಸ್ಟ್ ಇಂಡೀಸ್ ಪರವಾಗಿ ಜುಲೈ 2004 ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಲಾರ್ಡ್ಸ್ ಕ್ರಿಕೆಟ್ ಮೈದಾನಕ್ಕೆ ಹೊರಡುವ ಸಂದರ್ಭದಲ್ಲಿ ನಾನು ಸ್ವೀಕರಿಸಿದ ಮಾರೋನ್ ಕ್ಯಾಪ್ ಘಳಿಗೆ ನನಗೆ ಇನ್ನು ನೆನಪಿದೆ. ಕ್ರಿಕೆಟ್ ಗಾಗಿ ನಾನು ತೋರಿಸಿದ ಉತ್ಸಾಹ ಮತ್ತು ಭಾವೋದ್ರೇಕತೆಯನ್ನು ನನ್ನ ವೃತ್ತಿಜೀವನದುದ್ದಕ್ಕೂ ನನ್ನೊಂದಿಗೆ ಇಟ್ಟುಕೊಂಡಿದ್ದೇನೆ "ಎಂದು ಬ್ರಾವೋ ಹೇಳಿದರು.
"ಆದಾಗ್ಯೂ, ನಾನು ವೃತ್ತಿಪರ ಕ್ರಿಕೆಟ್ ಆಟಗಾರನಾಗಿ ನನ್ನ ದೀರ್ಘಾಯುಷ್ಯವನ್ನು ಕಾಪಾಡಿಕೊಳ್ಳಲು ಮತ್ತು ಮುಂದಿನ ಪೀಳಿಗೆಯ ಆಟಗಾರರಿಗೆ ಅವಕಾಶ ನೀಡುವ ನಿಟ್ಟಿನಲ್ಲಿನ ತಾವು ಈ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದರು.
"ನನ್ನ ಯಶಸ್ಸಿಗೆ, ವಿಶೇಷವಾಗಿ ನನ್ನ ಕುಟುಂಬ ಮತ್ತು ಕ್ಯೂಪಿಸಿಸಿಸಿಗೆ ಮತ್ತು ಜನರಿಗೆ ನಾನು ಧನ್ಯವಾದ ಹೇಳುತ್ತೇನೆ" ಎಂದು ಬ್ರಾವೋ ಹೇಳಿದರು. "ನನ್ನ ಪ್ರಯಾಣದಲ್ಲಿ ಮೈದಾನದ ಒಳಗೆ ಮತ್ತು ಹೊರಗೆ ನನ್ನ ಪ್ರಯತ್ನಗಳನ್ನು ಗುರುತಿಸಿ ಬೆಂಬಲ ವ್ಯಕ್ತಪಡಿಸಿದ ಅನೇಕ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ" ಎಂದು ಬ್ರಾವೋ ತಿಳಿಸಿದರು.