ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕಳೆದ ವಾರ ಭಾರತದ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಮಾತ್ರವಲ್ಲದೆ ಯಾವುದೇ ಕ್ರೀಡಾ ಬಾಂಧವ್ಯವನ್ನು ಮುಂದುವರಿಸಬಾರದು ಎಂದು ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ(ದಾದಾ) ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಪಾಕಿಸ್ತಾನದೊಂದಿಗೆ ಯಾವುದೇ ಕ್ರೀಡಾ ಬಾಂಧವ್ಯ ಬೇಡ ಎಂದ 'ದಾದಾ'
ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಆಡಕೂಡದು. ಪಾಕ್ ವಿರುದ್ಧ ಆಡದ ಹೊರತಾಗಿಯೂ ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂದು ಭಾರತ ಕ್ರಿಕೆಟ್ ತಂಡದ ಖ್ಯಾತ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿರುವುದನ್ನು, ಸೌರವ್ ಗಂಗೂಲಿ ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಕೇವಲ ಕ್ರಿಕೆಟ್ ಮಾತ್ರವಲ್ಲ, ಪಾಕಿಸ್ತಾನದೊಂದಿಗೆ ಹಾಕಿ, ಪುಟ್ಬಾಲ್ ಸೇರಿದಂತೆ ಯಾವುದೇ ಕ್ರೀಡಾ ಬಾಂಧವ್ಯ ಎಂದು ದಾದಾ ಹೇಳಿದ್ದಾರೆ.


ಈ ಕುರಿತು ಇಂಡಿಯಾ ಟಿವಿ ಜೊತೆಗೆ ಮಾತನಾಡಿರುವ ಸೌರವ್ ಗಂಗೂಲಿ, "ವಿಶ್ವ ಕಪ್ 10 ತಂಡಗಳ ಆಟ ಮತ್ತು ಪ್ರತಿಯೊಂದು ತಂಡವು ಇತರ ತಂಡಗಳೊಂದಿಗೆ ಆಡಲಿದೆ. ವಿಶ್ವಕಪ್ನಲ್ಲಿ ಭಾರತ ಪಂದ್ಯವನ್ನು ಆಡದಿದ್ದರೆ ಅದು ಸಮಸ್ಯೆಯೇ ಎಂದು ಗಂಗೂಲಿ ಕೇಳಿದ್ದಾರೆ." 


ಮುಂದುವರೆದು ಮಾತನಾಡಿದ ಅವರು, "ಐಸಿಸಿಯು ಭಾರತವಿಲ್ಲದೆ ವಿಶ್ವಕಪ್ಗೆ ಹೋಗಲು ತುಂಬಾ ಕಷ್ಟಕರವೆಂದು ನಾನು ಭಾವಿಸುತ್ತೇನೆ. ಇಂತಹ ವಿಷಯಗಳನ್ನು ಐಸಿಸಿಐಗೆ ತಡೆಯುವ ಅಧಿಕಾರವಿದೆಯೇ ಎಂದು ನೀವು ನೋಡಬೇಕು. ಆದರೆ ವೈಯಕ್ತಿಕವಾಗಿ, ಪಾಕಿಸ್ತಾನಕ್ಕೆ ಬಲವಾದ ಸಂದೇಶವನ್ನು ನೀಡಬೇಕೆಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದ್ದಾರೆ.


ನೆರೆಯ ದೇಶಗಳೊಂದಿಗೆ ಭಾರತ ಎಲ್ಲ ಸಂಬಂಧಗಳನ್ನು ಮುರಿಯಬೇಕಿದೆ ಎಂದು ಗಂಗೂಲಿ ಹೇಳಿದ್ದಾರೆ. "ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಭಾರತದ ಜನರ ಪ್ರತಿಕ್ರಿಯೆ ಸರಿಯಾಗಿದೆ. ಈ ಘಟನೆಯ ನಂತರ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿ ಆಡಕೂಡದು. ಈ ಆಕ್ರಮಣದ ನಂತರ ಭಾರತವು ಕ್ರಿಕೆಟ್, ಹಾಕಿ ಅಥವಾ ಫುಟ್ಬಾಲ್ ಮಾತ್ರವಲ್ಲದೆ, ಪಾಕಿಸ್ತಾನದೊಂದಿಗೆ ಎಲ್ಲ ಸಂಬಂಧಗಳನ್ನು ಮುರಿಯಬೇಕು ಎಂಬುದನ್ನು ನಾನು ಒಪ್ಪುತ್ತೇನೆ'' ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ.


ಭಾರತ ಕ್ರಿಕೆಟ್ ತಂಡದ ಖ್ಯಾತ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡಾ ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಭಾರತ ಆಡಕೂಡದು ಎಂದು ಹೇಳಿದ್ದಾರೆ. 2008ರಲ್ಲಿ ಮುಂಬೈ ದಾಳಿಯ ಬಳಿಕ ಪಾಕ್ ಜತೆಗಿ ಕ್ರಿಕೆಟ್ ಬಾಂಧವ್ಯವನ್ನು ಭಾರತ ಕೈಬಿಟ್ಟಿತ್ತು. ಆದರೆ ತಟಸ್ಥ ತಾಣಗಳಲ್ಲಿ ಐಸಿಸಿ ಪ್ರಾಯೋಜಿತ ಟೂರ್ನಿಗಳಲ್ಲಿ ಭಾಗವಹಿಸುತ್ತಿದೆ. ಮುಂಬರುವ ಏಕದಿನ ವಿಶ್ವಕಪ್‌ನಲ್ಲೂ ಜೂನ್ 16ರಂದು ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ನಿಗದಿಯಾಗಿದೆ. ಆದರೆ ಪಾಕ್ ವಿರುದ್ಧ ಭಾರತ ಆಡಕೂಡದು ಎಂದು ಭಜ್ಜಿ ಹೇಳಿದ್ದಾರೆ. 


ಭಾರತ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಕೂಡದು. ಪಾಕ್ ವಿರುದ್ಧ ಆಡದ ಹೊರತಾಗಿಯೂ ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂದರು. ಇದು ಕಷ್ಟದ ಸಮಯ. ಉಗ್ರರ ದಾಳಿಯು ಅವಿಶ್ವಸನೀಯ. ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಕ್ರಿಕೆಟ್ ವಿಚಾರಕ್ಕೆ ಬಂದಾಗ ನಾವು ವಿಶ್ವಕಪ್ ಆಡಬಾರದು ಎಂಬುದು ನನ್ನ ನಿಲುವಾಗಿದೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.