ಅಂದು ನಿವೃತ್ತಿ ಘೋಷಿಸಿದ್ದ ಧೋನಿ ಗೆಳಯನಿಗೆ ವಿಶ್ವಕಪ್ 2023ರಲ್ಲಿ ಚ್ಯಾನ್ಸ್ ಕೊಟ್ಟ ಸಮಿತಿ!
World Cup 2023, Ben Stokes: ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಅವರ ಬ್ಯಾಟಿಂಗ್ ಸಾಮರ್ಥ್ಯದ ಆಧಾರದ ಮೇಲೆ ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳಲು ಸಿದ್ಧ ಎಂದು ಇಂಗ್ಲೆಂಡ್’ನ ಸೀಮಿತ ಓವರ್’ಗಳ ಕೋಚ್ ಮ್ಯಾಥ್ಯೂ ಮೋಟ್ ಹೇಳಿದ್ದಾರೆ.
World Cup 2023, Ben Stokes: 2023ರ ಏಕದಿನ ವಿಶ್ವಕಪ್’ಗೆ ಕ್ಷಣಗಣನೆ ಆರಂಭವಾಗಿದೆ. ODI ವಿಶ್ವಕಪ್ 2023 ಭಾರತದಲ್ಲಿ ಈ ವರ್ಷ ಅಕ್ಟೋಬರ್-ನವೆಂಬರ್’ನಲ್ಲಿ ನಡೆಯಲಿದೆ. ಅಕ್ಟೋಬರ್ 5 ರಿಂದ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಗೂ ಮುನ್ನ ಒಂದೊಮ್ಮೆ ನಿವೃತ್ತಿ ಘೋಷಿಸಿದ್ದ ಒಬ್ಬ ಸ್ಟಾರ್ ಆಟಗಾರ ತನ್ನ ನಿವೃತ್ತಿಯನ್ನು ಹಿಂಪಡೆದು ODI ವಿಶ್ವಕಪ್’ನಲ್ಲಿ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಆಟಗಾರನು T20 ವಿಶ್ವಕಪ್ ಮತ್ತು ODI ವರ್ಲ್ಡ್’ನಂತಹ ದೊಡ್ಡ ಪಂದ್ಯಾವಳಿಗಳಲ್ಲಿ ಟ್ರೋಫಿ ಗೆದ್ದಿದ್ದನು ಎಂಬುದು ಉಲ್ಲೇಖಾರ್ಹ.
ಇದನ್ನೂ ಓದಿ: ಭಾರತ ಸರಣಿ ಸೋಲಲು ಈ ಆಟಗಾರನೇ ಕಾರಣ! ಪಬ್ಲಿಕ್’ನಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಅವರ ಬ್ಯಾಟಿಂಗ್ ಸಾಮರ್ಥ್ಯದ ಆಧಾರದ ಮೇಲೆ ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳಲು ಸಿದ್ಧ ಎಂದು ಇಂಗ್ಲೆಂಡ್’ನ ಸೀಮಿತ ಓವರ್’ಗಳ ಕೋಚ್ ಮ್ಯಾಥ್ಯೂ ಮೋಟ್ ಹೇಳಿದ್ದಾರೆ.
ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಆದರೆ ಇಂಗ್ಲೆಂಡ್ ತಂಡದ ಮ್ಯಾನೇಜ್‌ಮೆಂಟ್ ಸ್ಟೋಕ್ಸ್‌ರನ್ನು ನಿವೃತ್ತಿಯಿಂದ ಹಿಂತಿರುಗಿ ವಿಶ್ವಕಪ್‌ನಲ್ಲಿ ಆಡುವಂತೆ ಮಾಡಲು ಪ್ರಯತ್ನಿಸುತ್ತಿದೆ.
ಕಳೆದ ವರ್ಷ ಜುಲೈನಲ್ಲಿ ಸ್ಟೋಕ್ಸ್ ಏಕದಿನ ಪಂದ್ಯಗಳಿಂದ ನಿವೃತ್ತಿ ಹೊಂದಿದ್ದರು. ಮೆಗಾ-ಈವೆಂಟ್’ನ 2019 ರ ಆವೃತ್ತಿಯಲ್ಲಿ ಆಲ್‌ರೌಂಡರ್ ಇಂಗ್ಲೆಂಡ್’ನ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರು. ಅಂತಿಮ ಪಂದ್ಯದಲ್ಲಿ ಅಜೇಯ 84 ರನ್ ಗಳಿಸಿದ್ದಕ್ಕಾಗಿ ಸ್ಟೋಕ್ಸ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.
“ಸ್ಟೋಕ್ಸ್ ಇಲ್ಲಿಯವರೆಗೆ ಸ್ಪಷ್ಟವಾಗಿ ನಿರಾಕರಿಸಿದ್ದರೂ, ಅವನು ಹಿಂತಿರುಗಬೇಕೆ ಅಥವಾ ಬೇಡವೇ ಎಂದು ನಾವು ನೋಡುತ್ತೇವೆ. ಅವರ ಬೌಲಿಂಗ್ ಬೋನಸ್ ಆದರೆ ಬ್ಯಾಟ್ ಮತ್ತು ಫೀಲ್ಡಿಂಗ್’ನಲ್ಲಿ ಅವರ ಕೊಡುಗೆ ಅದ್ಭುತವಾಗಿದೆ ಎಂದು ಕೋಚ್ ಹೇಳಿದರು. ಆಶಸ್ ಸರಣಿಯುದ್ದಕ್ಕೂ ಅವರನ್ನು ನೋಡಿದಾಗ ಅವರ ಉಪಸ್ಥಿತಿಯು ತುಂಬಾ ಚೆನ್ನಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: Team Indiaಗಾಗಿ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಆಡಿದ್ದ ಪಾಕಿಸ್ತಾನದ ಮೂವರು ಆಟಗಾರರು ಯಾರು ಗೊತ್ತಾ?
ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ಪ್ರವಾಸದ ಸಮಯದಲ್ಲಿ ಸ್ಟೋಕ್ಸ್ ಮೊಣಕಾಲಿನ ಗಾಯಕ್ಕೆ ಒಳಗಾದರು, ಇದರಿಂದಾಗಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲೂ ಹೆಚ್ಚು ಆಡಲು ಸಾಧ್ಯವಾಗಲಿಲ್ಲ. ಅಕ್ಟೋಬರ್ 5 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮುಖಾಮುಖಿಯೊಂದಿಗೆ ವಿಶ್ವಕಪ್ ಆರಂಭವಾಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.