14 ಬೌಂಡರಿ, 4 ಸಿಕ್ಸರ್, 118 ರನ್... 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ʼಗೆ ಬಂದು ಸಿಡಿಲಬ್ಬರದ ಶತಕ ಸಿಡಿಸಿದ ಸ್ಟಾರ್ ಬೌಲರ್; ಕ್ರಿಕೆಟ್ ಜಗತ್ತೇ ಅಚ್ಚರಿ
Gus Atkinson Hundred: ಟೆಸ್ಟ್ ಪಂದ್ಯದ ಎರಡನೇ ದಿನ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ʼಗೆ ಬಂದ ಇಂಗ್ಲೆಂಡ್ʼನ 26 ವರ್ಷದ ವೇಗಿ ಗಸ್ ಅಟ್ಕಿನ್ಸನ್ ಶತಕ ಬಾರಿಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ ಮೊದಲ ಶತಕವಾಗಿದೆ. ಇದನ್ನು ಪೂರ್ಣಗೊಳಿಸಲು ಅಟ್ಕಿನ್ಸನ್ ಕೇವಲ 103 ಎಸೆತಗಳನ್ನು ತೆಗೆದುಕೊಂಡಿದ್ದಾರೆ.
Gus Atkinson Hundred: ಇಂಗ್ಲೆಂಡ್ʼನ 26 ವರ್ಷದ ವೇಗಿ ಲಾರ್ಡ್ಸ್ʼನ ಐತಿಹಾಸಿಕ ಕ್ರಿಕೆಟ್ ಮೈದಾನದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಶ್ರೀಲಂಕಾ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ, ಈ ವೇಗಿ ಎರಡನೇ ದಿನದಲ್ಲಿ ಶತಕ ಗಳಿಸಿ ಆನರ್ಸ್ ಬೋರ್ಡ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಇಂಗ್ಲೆಂಡ್ʼನ ಗಸ್ ಅಟ್ಕಿನ್ಸನ್ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾ, ಅವರ ಟೆಸ್ಟ್ ವೃತ್ತಿಜೀವನದ ಮೊದಲ ಶತಕವನ್ನು ಗಳಿಸಿದ್ದಾರೆ. ಈ ಶತಕದೊಂದಿಗೆ ಅವರು ಲಾರ್ಡ್ಸ್ʼನಲ್ಲಿ ಅದ್ಭುತ ಸಾಧನೆ ಮಾಡಿದ 5 ಬೌಲರ್ʼಗಳ ಕ್ಲಬ್ʼಗೆ ಸೇರಿಕೊಂಡರು.
ಇದನ್ನೂ ಓದಿ: 12 ವರ್ಷಕ್ಕೆ ಪಾರ್ಶ್ವವಾಯು; ಸತತ 2 ಒಲಿಂಪಿಕ್ಸ್ ಚಿನ್ನ ಗೆದ್ದ ಅವನಿ ಲೇಖರಾ ಹಿನ್ನೆಲೆ ಸ್ಪೂರ್ತಿ
ಟೆಸ್ಟ್ ಪಂದ್ಯದ ಎರಡನೇ ದಿನ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ʼಗೆ ಬಂದ ಇಂಗ್ಲೆಂಡ್ʼನ 26 ವರ್ಷದ ವೇಗಿ ಗಸ್ ಅಟ್ಕಿನ್ಸನ್ ಶತಕ ಬಾರಿಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ ಮೊದಲ ಶತಕವಾಗಿದೆ. ಇದನ್ನು ಪೂರ್ಣಗೊಳಿಸಲು ಅಟ್ಕಿನ್ಸನ್ ಕೇವಲ 103 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಇನ್ನು ಒಟ್ಟು 115 ಎಸೆತಗಳಲ್ಲಿ 118 ರನ್ ಗಳಿಸಿದ ಅವರ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್‌ಗಳೂ ಸೇರಿವೆ.
ಗಸ್ ಅಟ್ಕಿನ್ಸನ್ ಅವರು ಲಾರ್ಡ್ಸ್ʼನ ಎಲ್ಲಾ ಆನರ್ಸ್ ಬೋರ್ಡ್‌ಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ ಆರನೇ ಕ್ರಿಕೆಟಿಗರಾಗಿದ್ದಾರೆ. ಇದಕ್ಕೂ ಮುನ್ನ ಗ್ಯಾಬಿ ಅಲೆನ್ (ಇಂಗ್ಲೆಂಡ್), ಕೀತ್ ಮಿಲ್ಲರ್ (ಆಸ್ಟ್ರೇಲಿಯಾ), ಇಯಾನ್ ಬೋಥಮ್ (ಇಂಗ್ಲೆಂಡ್), ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್) ಮತ್ತು ಕ್ರಿಸ್ ವೋಕ್ಸ್ (ಇಂಗ್ಲೆಂಡ್) ಈ ಸಾಧನೆ ಮಾಡಿದ್ದಾರೆ. ಈ ಎಲ್ಲಾ 6 ಕ್ರಿಕೆಟಿಗರು ಲಾರ್ಡ್ಸ್ʼನಲ್ಲಿ ಒಂದು ಇನಿಂಗ್ಸ್ʼನಲ್ಲಿ ಐದು ವಿಕೆಟ್, ಒಂದು ಪಂದ್ಯದಲ್ಲಿ 10 ವಿಕೆಟ್ ಮತ್ತು ಶತಕ ಗಳಿಸುವ ಮೂಲಕ ಎಲ್ಲಾ ಮೂರು ಗೌರವ ಮಂಡಳಿಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಅಟ್ಕಿನ್ಸನ್ ಅವರು ಎರಡು ಪಂದ್ಯಗಳ ಕೇವಲ 4 ಇನ್ನಿಂಗ್ಸ್‌ಗಳಲ್ಲಿ ಎಲ್ಲಾ ಮೂರು ಲಾರ್ಡ್ಸ್ ಆನರ್ಸ್ ಬೋರ್ಡ್ʼಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ ಇತಿಹಾಸದ ಅತ್ಯಂತ ವೇಗದ ಆಟಗಾರ ಎನಿಸಿಕೊಂಡಿದ್ದಾರೆ.
ಲಾರ್ಡ್ಸ್‌ನಲ್ಲಿ ನಡೆದ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅಟ್ಕಿನ್ಸನ್ 10 ವಿಕೆಟ್ ಕಬಳಿಸಿದರು. ಕಳೆದ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದರು. ಮೊದಲ ಇನಿಂಗ್ಸ್ʼನಲ್ಲಿ 7 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್ʼನಲ್ಲಿ 5 ವಿಕೆಟ್ ಕಬಳಿಸಿದ್ದರು. ಇದು ಲೆಜೆಂಡರಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರ ವಿದಾಯ ಟೆಸ್ಟ್ ಪಂದ್ಯವೂ ಆಗಿತ್ತು.
ಲಾರ್ಡ್ಸ್ʼನಲ್ಲಿ ಟೆಸ್ಟ್ ಶತಕ ಮತ್ತು 10 ವಿಕೆಟ್ ಗಳಿಸಿದ ಆಟಗಾರರು
ಗ್ಯಾಬಿ ಅಲೆನ್ (ಇಂಗ್ಲೆಂಡ್)
ಕೀತ್ ಮಿಲ್ಲರ್ (ಆಸ್ಟ್ರೇಲಿಯಾ)
ಇಯಾನ್ ಬೋಥಮ್ (ಇಂಗ್ಲೆಂಡ್)
ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್)
ಕ್ರಿಸ್ ವೋಕ್ಸ್ (ಇಂಗ್ಲೆಂಡ್)
ಗಸ್ ಅಟ್ಕಿನ್ಸನ್ (ಇಂಗ್ಲೆಂಡ್)
ಲಾರ್ಡ್ಸ್ʼನಲ್ಲಿ 8 ಅಥವಾ ಅದಕ್ಕಿಂತ ಕಡಿಮೆ ಶ್ರೇಯಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಗಳಿಸಿದ ಕ್ರಿಕೆಟಿಗರು
169 ರನ್ - ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್) vs ಪಾಕಿಸ್ತಾನ, 2010
122 ರನ್ - ಗ್ಯಾಬಿ ಅಲೆನ್ (ಇಂಗ್ಲೆಂಡ್) vs ನ್ಯೂಜಿಲೆಂಡ್, 1931
121 ರನ್ - ಬರ್ನಾರ್ಡ್ ಜೂಲಿಯನ್ (ವೆಸ್ಟ್ ಇಂಡೀಸ್) vs ಇಂಗ್ಲೆಂಡ್, 1973
118 ರನ್ - ಗಸ್ ಅಟ್ಕಿನ್ಸನ್ (ಇಂಗ್ಲೆಂಡ್) vs ಶ್ರೀಲಂಕಾ, 2024 (ಅದೇ ಪಂದ್ಯ)
113 ರನ್ - ರೇ ಇಲ್ಲಿಂಗ್‌ವರ್ತ್ (ಇಂಗ್ಲೆಂಡ್) vs ವೆಸ್ಟ್ ಇಂಡೀಸ್, 1969
109* ರನ್ - ಅಜಿತ್ ಅಗರ್ಕರ್ (ಭಾರತ) vs ಇಂಗ್ಲೆಂಡ್, 2002
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.