ನವದೆಹಲಿ: ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಶನಿವಾರ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವು ಹೀನಾಯವಾಗಿ ಸೋತಿರುವ ಬಗ್ಗೆ ಪ್ರತಿಕ್ರಿಯಿಸಿರುವ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಕೋರ್ ಬೋರ್ಡ್ ಒತ್ತಡದಿಂದಾಗಿ ತಂಡದ ಬ್ಯಾಟಿಂಗ್ ಪ್ರದರ್ಶನ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಪಂದ್ಯದ ನಂತರದ ಪ್ರಸ್ತುತಿ ಸಮಾರಂಭದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ (Virat Kohli), ಶನಿವಾರ ಬೆಳಿಗ್ಗೆ ಮಧ್ಯಮ ಕ್ರಮಾಂಕವು ಸ್ಕೋರ್ ಬೋರ್ಡ್ ಒತ್ತಡಕ್ಕೆ ಕುಸಿದಿದೆ ಎಂದು ಹೇಳಿದರು. ಇದೆ ವೇಳೆ ಕೊಹ್ಲಿ ಇಂಗ್ಲೆಂಡ್ ಬೌಲರ್‌ಗಳ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು.


'ಇದು ಮೂಲತಃ ಸ್ಕೋರ್‌ಬೋರ್ಡ್ ಒತ್ತಡಕ್ಕೆ ಕುಸಿದಿದೆ.ನೀವು 80 ಕ್ಕಿಂತ ಕಡಿಮೆ ರನ್ ಮಾಡಿದಾಗ ಮತ್ತು ವಿರೋಧಿ ತಂಡವು ಇಷ್ಟು ದೊಡ್ಡ ಸ್ಕೋರ್ ಗಳಿಸಿದಾಗ ಒತ್ತಡವಾಗುತ್ತದೆ" ಎಂದು ಅವರು ಹೇಳಿದರು.'ಆದರೆ ನಾವು ನಿನ್ನೆ ಆಟದಲ್ಲಿ ಉಳಿದುಕೊಂಡೆವು, ನಾವು ಎಷ್ಟು ಸಾಧ್ಯವೋ ಅಷ್ಟು ಹೋರಾಡುತ್ತಿದ್ದೆವು, ಆದರೆ ಇಂದು ಇಂಗ್ಲೆಂಡ್ ಬೌಲರ್‌ಗಳಿಂದ ಒತ್ತಡವು ಅತ್ಯುತ್ತಮವಾಗಿತ್ತು ಮತ್ತು ಅಂತಿಮವಾಗಿ ಅವರು ಬಯಸಿದ ಫಲಿತಾಂಶಗಳನ್ನು ಪಡೆದರು" ಎಂದು ಕೊಹ್ಲಿ ಹೇಳಿದರು.


ಇದನ್ನೂ ಓದಿ - India vs England, 2nd T20I: ಕೊಹ್ಲಿ ,ಇಶಾಂತ್ ಕಿಶನ್ ಸ್ಪೋಟಕ ಬ್ಯಾಟಿಂಗ್ ನಿಂದಾಗಿ ಭಾರತಕ್ಕೆ ಗೆಲುವು


ಲೀಡ್ಸ್‌ನಲ್ಲಿ ಸಾಧಾರಣ ಪ್ರದರ್ಶನದ ನಂತರ ತನ್ನ ಕೆಳಮಧ್ಯಮ ಕ್ರಮಾಂಕವನ್ನು ಕೋಹ್ಲಿ ಸಮರ್ಥಿಸಿಕೊಂಡರು.'ನೀವು ಈ ರೀತಿಯ ಫಲಿತಾಂಶವನ್ನು ಹೊಂದಿರುವಾಗ, ನೀವು ತಂಡವಾಗಿ ಆತ್ಮವಿಶ್ವಾಸದಿಂದ ಇರಬೇಕು, ಅಡಿಲೇಡ್‌ನಲ್ಲಿ 36 ರನ್ ಗಳಿಸಿದ ನಂತರವೂ ನಾವು ಫಾರ್ಮ್ ಗೆ ಬಂದಿದ್ದೆವು ಎಂದು ಅವರು ಹೇಳಿದರು.


ಇದನ್ನೂ ಓದಿ: T-20 ವಿಶ್ವಕಪ್ ಕುರಿತು ಕ್ಯಾಪ್ಟನ್ ಕೊಹ್ಲಿ-BCCI ಅಧಿಕಾರಿಗಳ ನಡುವೆ ಅನೌಪಚಾರಿಕ ಸಭೆ


ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಂತರ ಬಂದ ಮೊದಲ ಇನ್ನಿಂಗ್ಸ್ ಕುಸಿತದ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಕೊಹ್ಲಿ "ವಿಚಿತ್ರವಾದದ್ದು, ಈ ದೇಶದಲ್ಲಿ ಇದು ಸಾಧ್ಯ, ಬ್ಯಾಟಿಂಗ್ ಕುಸಿತವಾಗುತ್ತದೆ. ನಾವು ಪಿಚ್ ಬ್ಯಾಟ್ ಮಾಡುವುದಕ್ಕೆ ಒಳ್ಳೆಯದು ಎಂದು ಭಾವಿಸಿದ್ದೇವು ಎಂದು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.