Danielle Wyatt Married To Georgie Hodge: ಇಂಗ್ಲೆಂಡ್ ಮಹಿಳಾ ಕ್ರಿಕೆಟ್‌ ಆಟಗಾರ್ತಿ ಡೇನಿಯಲ್ ವ್ಯಾಟ್ ತನ್ನ ಗೆಳತಿ ಜಾರ್ಜಿಯಾ ಹಾಡ್ಜ್ ಅವರನ್ನು ವಿವಾಹವಾಗಿದ್ದಾರೆ. ಆಗಸ್ಟ್ 22ರಂದು ಫ್ರಾನ್ಸ್‌ʼನಲ್ಲಿ ಇವರ ಮದುವೆ ನಡೆದಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳು ತಡವಾಗಿ ರಿವೀಲ್‌ ಆಗಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಇವರ ಪ್ರೀತಿಗೆ ಅಡ್ಡವಾಗಿಲ್ಲ ಧರ್ಮದ ಗೋಡೆ! ಅನ್ಯಧರ್ಮಿಯರನ್ನು ವರಿಸಿ ಸುಖಸಂಸಾರ ನಡೆಸುತ್ತಿರುವ ಭಾರತದ ಲೆಜೆಂಡರಿ ಕ್ರಿಕೆಟಿಗರಿವರು


ಕಳೆದ ವರ್ಷ ಮಾರ್ಚ್‌ʼನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಂದಹಾಗೆ ವ್ಯಾಟ್ ಇಂಗ್ಲೆಂಡ್ ಪರ 160 ODI, 112 T20I ಮತ್ತು 2 ಟೆಸ್ಟ್ ಆಡಿದ್ದಾರೆ.  ಎಲ್ಲಾ ಸ್ವರೂಪಗಳಲ್ಲಿ 4,864 ರನ್‌ಗಳೊಂದಿಗೆ 77 ವಿಕೆಟ್‌ ಕಬಳಿಸಿದ್ದಾರೆ.


ಈ ಹಿಂದೊಮ್ಮೆ, ಡೇನಿಯಲ್ ವ್ಯಾಟ್ 2014ರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿ ಭಾರೀ ಸುದ್ದಿಯಾಗಿದ್ದರು. ಆದರೆ ಈ ಸಂಬಂಧವನ್ನು ವಿರಾಟ್‌ ಅಲ್ಲ, ಅವರ ತಾಯಿಯೇ ರಿಜೆಕ್ಟ್‌ ಮಾಡಿದ್ದರು.


ಇದನ್ನೂ ಓದಿ:  ಎಷ್ಟೇ ಹೈ ಇದ್ದರೂ... ಈ ಎಲೆಯನ್ನು ಮೂಸಿದ ತಕ್ಷಣ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್‌ ಶುಗರ್‌! ಮಧುಮೇಹಿಗಳೇ ಟ್ರೈ ಮಾಡಿ ನೋಡಿ


ಕಪಿಲ್ ಶರ್ಮಾ ಶೋನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್ ಆಡುವಾಗ ಆಗಿನ ಇಂಗ್ಲೆಂಡ್ ನಾಯಕಿ ಡೇನಿಯಲ್ ವ್ಯಾಟ್ ತನಗೆ ಪ್ರಪೋಸ್ ಮಾಡಿದ್ದರು. ಆದರೆ, ಆ ವೇಳೆ ಬ್ಯುಸಿಯಾಗಿದ್ದ ಕಾರಣ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ ಎಂದಿದ್ದರು. ಇನ್ನೊಂದೆಡೆ ಕೊಹ್ಲಿಗೆ ಇನ್ನೂ ಮದುವೆ ವಯಸ್ಸಾಗಿಲ್ಲ ಎಂದು ಅವರ ತಾಯಿ ಸಂದರ್ಶನವೊಂದರಲ್ಲಿ ಹೇಳಿಕೆ ನೀಡುವ ಮೂಲಕ ಈ ವಿಚಾರಕ್ಕೆ ಫುಲ್‌ ಸ್ಟಾಪ್‌ ಇಟ್ಟಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.