ನವದೆಹಲಿ: ಆಂಟಿಗುವಾದ ನಾರ್ತ್ ಸೌಂಡ್‌ನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಆರಂಭಿಕ ಏಕದಿನ ಪಂದ್ಯದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಕೇವಲ 1 ರನ್ ನಿಂದ ಸೋಲನ್ನು ಅನುಭವಿಸಿತು. 



COMMERCIAL BREAK
SCROLL TO CONTINUE READING

ಆದಾಗ್ಯೂ, ಈ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಹಿಡಿದ ಕ್ಯಾಚ್ ಈಗ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಕ್ಯಾಚ್ ಗೆ ಕ್ರಿಕೆಟ್ ಅಭಿಮಾನಿಗಳು ಶಹಬ್ಬಾಸ್ ಹೇಳಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿತು.ವೆಸ್ಟ್ ಇಂಡೀಸ್ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ ಸ್ಟೆಪಾನೆ ಟೈಲರ್ 94 ರನ್ ಗಳನ್ನು ಗಳಿಸಿ ಏಕ್ತಾ ಬಿಸ್ಟ್ ಎಸೆತದಲ್ಲಿ ಹರ್ಮನ್ ಪ್ರೀತ್ ಕೌರ್ ಹಿಡಿದ ಅದ್ಬುತ ಕ್ಯಾಚ್ ಗೆ ಬಲಿಯಾದರು.


226 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಭಾರತದ ಮಹಿಳಾ ತಂಡ ಪ್ರಿಯಾ ಪುನಿಯಾ (75) ಜೆಮ್ಮಾ ರೋಡ್ರಿಗಸ್ (41) ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ ಗೆಲುವಿನ ಹತ್ತಿರಕ್ಕೆ ಬಂದಿತ್ತಾದರೂ ಕೂಡ 224 ರನ್ ಗಳಿಗೆ ಆಲೌಟ್ ಆಗುವ ಮೂಲಕ 1 ರನ್ ಅಂತರದ ಸೋಲನ್ನು ಅನುಭವಿಸಿತು.