Faf du Plessis: ಮೇಜರ್ ಲೀಗ್ ಕ್ರಿಕೆಟ್‌ ನ ಮೊದಲ ಸೀಸನ್‌ ನಲ್ಲಿ ಒಟ್ಟು 6 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಐಪಿಎಲ್ ಫ್ರಾಂಚೈಸಿಗಳಾದ ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕೂಡ ಮೇಜರ್ ಲೀಗ್ ಕ್ರಿಕೆಟ್‌ ನಲ್ಲಿ ಭಾಗವಹಿಸುತ್ತಿವೆ. ಟೆಕ್ಸಾಸ್ ಸೂಪರ್ ಕಿಂಗ್ಸ್ ಮೊದಲ ಸೀಸನ್‌ ಗೆ ಡ್ವೇನ್ ಬ್ರಾವೋ ಮತ್ತು ಅಂಬಟಿ ರಾಡು ಸೇರಿದಂತೆ ಚೆನ್ನೈನ ಅನೇಕ ಸ್ಟಾರ್ ಆಟಗಾರರನ್ನು ಸಹಿ ಮಾಡಿದೆ. ಸೂಪರ್ ಕಿಂಗ್ಸ್ ತಮ್ಮ ಹಳೆಯ ಆಟಗಾರ ಫಾಫ್ ಡುಪ್ಲೆಸಿಯನ್ನೂ ತಂಡದಲ್ಲಿ ಸೇರಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 9 ವರ್ಷಗಳ ನಂತರ ಬಂದೇಬಿಡ್ತು ಆ ದಿನ: ವಿರಾಟ್ ಕೊಹ್ಲಿ ವೃತ್ತಿಜೀವನದ ಸುದೀರ್ಘ ಕಾಯುವಿಕೆ ಅಂತ್ಯ!


ಫಾಫ್ ಡು ಪ್ಲೆಸಿಸ್ ತಂಡದ ನಾಯಕ!


ಫಾಫ್ ಡುಪ್ಲೆಸಿ 2011 ರಿಂದ 2021 ರವರೆಗೆ ಐಪಿಎಲ್‌ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ನ ಭಾಗವಾಗಿದ್ದಾರೆ. ಅವರು ಈಗ ಮೇಜರ್ ಲೀಗ್ ಕ್ರಿಕೆಟ್‌ ನಲ್ಲಿ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ. ಟೆಕ್ಸಾಸ್ ಸೂಪರ್ ಕಿಂಗ್ಸ್ ತನ್ನ ತಂಡದ ನಾಯಕನಾಗಿ ಫಾಫ್ ಡುಪ್ಲೆಸಿಯನ್ನು ನೇಮಿಸಿದೆ. ಫಾಫ್ ಡುಪ್ಲೆಸಿ ಐಪಿಎಲ್‌ ನಲ್ಲಿ ಸಿ ಎಸ್‌ ಕೆ ಪರ ಒಟ್ಟು 100 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 2935 ರನ್ ಗಳಿಸಿದ್ದಾರೆ. CSK 2022 ರಲ್ಲಿ ಫಾಫ್ ಡುಪ್ಲೆಸಿಯನ್ನು ರಿಲೀಸ್ ಮಾಡಿದೆ.


ಈ ಲೀಗ್ 13 ಜುಲೈ 2023 ರಂದು ಪ್ರಾರಂಭವಾಗುತ್ತದೆ. ಫಾಫ್ ಡುಪ್ಲೆಸಿಸ್ ಹೊರತಾಗಿ, ಟೆಕ್ಸಾಸ್ ಸೂಪರ್ ಕಿಂಗ್ಸ್ ಈ ಲೀಗ್‌ ನಲ್ಲಿ ಡೆವೊನ್ ಕಾನ್ವೇ, ಮಿಚೆಲ್ ಸ್ಯಾಂಟ್ನರ್, ಡೇನಿಯಲ್ ಸ್ಯಾಮ್ಸ್, ಡೇವಿಡ್ ಮಿಲ್ಲರ್, ಜೆರಾಲ್ಡ್ ಕೋಟ್ಜಿ, ಡ್ವೇನ್ ಬ್ರಾವೋ, ಅಂಬಾಟಿ ರಾಯುಡು, ರಸ್ಟಿ ಥರಾನ್, ಕೆಲ್ವಿನ್ ಸಾವೇಜ್, ಲಹಿರು ಮಿಲಂತ, ಮಿಲಿಂದ್ ಕುಮಾರ್, ಅಸ್ಲಂ ಕ್ಯಾಮರೂನ್ ಸ್ಟೀವನ್ಸನ್, ಕೋಡಿ ಚೆಟ್ಟಿ, ಜಿಯಾ ಶೆಹಜಾದ್ ಮತ್ತು ಸೈತೇಜಾ ಮುಕ್ಕಮಲ್ಲ ಅವರನ್ನು ಖರೀದಿಸಿದೆ.


ಇದನ್ನೂ ಓದಿ: ಕೊಹ್ಲಿ ಅಲ್ಲ… ಸಚಿನ್ ಅವರ ಅತೀದೊಡ್ಡ ದಾಖಲೆ ಮುರಿಯೋದು ಈ ಆಟಗಾರ! ಹೆಸರು ಕೇಳಿದ್ರೆ ನಂಬೋದೆ ಕಷ್ಟ!


ಋತುವಿನ ಮೊದಲ ಪಂದ್ಯವು 13 ಜುಲೈ 2023 ರಂದು ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಟೆಕ್ಸಾಸ್ ಸೂಪರ್ ಕಿಂಗ್ಸ್ ಮತ್ತು ಲಾಸ್ ಏಂಜಲೀಸ್ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಈ ಮೊದಲ ಸೀಸನ್‌ ನಲ್ಲಿ 18 ದಿನಗಳಲ್ಲಿ ಒಟ್ಟು 19 ಪಂದ್ಯಗಳು ನಡೆಯಲಿದ್ದು, ಲೀಗ್‌ ನ ಅಂತಿಮ ಪಂದ್ಯ ಜುಲೈ 30 ರಂದು ನಡೆಯಲಿದೆ. T20 ಕ್ರಿಕೆಟ್‌ ನ ಮೊದಲ ಲೀಗ್ ಅನ್ನು ಭಾರತದಲ್ಲಿ IPL ಎಂದು ಪ್ರಾರಂಭಿಸಲಾಯಿತು, ಈಗ ವಿಶ್ವದಾದ್ಯಂತ ಅನೇಕ ಲೀಗ್‌ ಗಳು ನಡೆಯುತ್ತಿವೆ. ಮೇಜರ್ ಲೀಗ್ ಕ್ರಿಕೆಟ್ ಕೂಡ ಇವುಗಳಲ್ಲಿ ಸೇರಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ