ನವದೆಹಲಿ: ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ ಫೈನಲ್ ಪಂದ್ಯದಲ್ಲಿ ಮುಂಬೈ ಮತ್ತು ಬಿಹಾರ್ ನಡುವೆ ನಡೆದ ಪಂದ್ಯದಲ್ಲಿ ಅಭಿಮಾನಿಯೊಬ್ಬ ಬಂದ ಕಾಲಿಗೆ ಬಿದ್ದು ಪದೆ ಪದೆ ಕಿಸ್ ಮಾಡಲು ಪ್ರಯತ್ನಿಸಿದ ಘಟನೆ ನಡೆದಿದೆ. ಇದರಿಂದ ರೋಹಿತ್ ಶರ್ಮಾ ಕೆಲವು ಸಮಯ ಅಚ್ಚರಿಗೊಂಡಿದ್ದಲ್ಲದೆ ಮುಜುಗರಕ್ಕೆ ಒಳಪಟ್ಟಿದ್ದಾರೆ ಎನ್ನಲಾಗಿದೆ. 



COMMERCIAL BREAK
SCROLL TO CONTINUE READING

ಇತ್ತೀಚೆಗಷ್ಟೇ  ಏಳನೇ ಭಾರಿಗೆ ಏಷ್ಯಾ ಕಪ್  ಗೆದ್ದ ಭಾರತ ತಂಡದ ನೇತೃತ್ವದ ವಹಿಸಿದ್ದ  ರೋಹಿತ್ ಶರ್ಮಾ ಈಗ ವಿಜಯ್ ಹಜಾರೆ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಬಂದಾಗ  ತಕ್ಷಣ ಅಭಿಮಾನಿಯೊಬ್ಬ ಬಂದು ಕಾಲಿಗೆ ಬಿದ್ದಿದ್ದಾನೆ ಇದಾದ ನಂತರ ಅವನು ರೋಹಿತ್ ನನ್ನು ತಬ್ಬಿಗೊಂಡು ಮುತ್ತುಕೊಡಲು ಹೋದಾಗ ತಕ್ಷಣ ಅವರು ಗಲಿಬಿಲಿಗೊಂಡು  ಮುಜುಗರಕ್ಕೆ ಒಳಪಟ್ಟ ಘಟನೆ ನಡೆದಿದೆ.


ಈಗ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾಕಷ್ಟು ಟ್ರೋಲ್ ಗೆ ಒಳಗಾಗಿದೆ.