ಆರಂಭಿಕ ಪಂದ್ಯದಲ್ಲಿ ಭಾರತಕ್ಕೆ ಸೋಲಿನ ಭೀತಿ! 36 ವರ್ಷಗಳ ಹಳೆಯ ದಾಖಲೆ ಹೇಳುತ್ತಿದೆ ಈ ಸತ್ಯಾಂಶ
India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯವು ಅಕ್ಟೋಬರ್ 8 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. 2013ರಿಂದ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ.
India vs Australia: ಟೀಂ ಇಂಡಿಯಾ ವಿಶ್ವಕಪ್ 2023 ರ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. 10 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆಲ್ಲಲು ಭಾರತಕ್ಕೆ ಇದು ಉತ್ತಮ ಅವಕಾಶ ಎನ್ನಬಹುದು. ಇದಕ್ಕೂ ಮುನ್ನವೇ ವಿಚಿತ್ರ ಕಾಕತಾಳೀಯವೊಂದು ತಂಡದ ಅಭಿಮಾನಿಗಳನ್ನು ಕಾಡುತ್ತಿದೆ.
ಇದನ್ನೂ ಓದಿ: ಬಿಸಿಲಿನ ದಾಹಕ್ಕೆ ಸುಸ್ತಾಗಿ ಗ್ಲಾಸ್’ನಲ್ಲಿದ್ದ ನೀರನ್ನು ಗಟಗಟನೆ ಕುಡಿದ ಕರಿನಾಗರ: ವಿಡಿಯೋ ವೈರಲ್
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯವು ಅಕ್ಟೋಬರ್ 8 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. 2013ರಿಂದ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಈ ಪಂದ್ಯ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. 36 ವರ್ಷಗಳ ಹಿಂದೆ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್‌ನಲ್ಲಿ ಇದೇ ಮೈದಾನದಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿರುವುದು ವಿಶಿಷ್ಟ ಕಾಕತಾಳೀಯ. ಭಯ ಹುಟ್ಟಿಸುತ್ತಿರುವ ಸಂಗತಿಯೆಂದರೆ ಆ ಪಂದ್ಯದಲ್ಲಿ ಭಾರತ 1 ರನ್’ನಿಂದ ಸೋಲನ್ನು ಎದುರಿಸಬೇಕಾಯಿತು. ಹೀಗಿರುವಾಗ ಈ ಬಾರಿಯೂ ಅದೇ ರೀತಿ ಆಗಬಹುದೇ? ಎಂಬ ಭಯ ಅಭಿಮಾನಿಗಳದ್ದು.
ಇದನ್ನೂ ಓದಿ: ಟೀಂ ಇಂಡಿಯಾದ ಐವರು ಸ್ಟಾರ್ ಪ್ಲೇಯರ್ಸ್’ಗೆ ಇದೇ ಕೊನೆಯ ವಿಶ್ವಕಪ್! ನಂತರ ನಿವೃತ್ತಿ ಘೋಷಣೆ
ಇದು 1987ರ ಪಂದ್ಯದ ಸ್ಥಿತಿ…
1987 ರ ವಿಶ್ವಕಪ್’ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಕುರಿತು ಮಾತನಾಡುವುದಾದರೆ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಆರು ವಿಕೆಟ್’ಗೆ 270 ರನ್ ಗಳಿಸಿತು. ಜೆಫ್ ಮಾರ್ಷ್ ತಂಡದ ಪರ ಗರಿಷ್ಠ 110 ರನ್ ಗಳಿಸಿದ್ದರು. ಅವರ ಇನ್ನಿಂಗ್ಸ್’ನಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸೇರಿತ್ತು. ಇವುಗಳ ಹೊರತಾಗಿ ಡೇವಿಡ್ ಬೂನ್ 49 ರನ್ ಮತ್ತು ಡೀನ್ ಜೋನ್ಸ್ 39 ರನ್’ಗಳ ಇನ್ನಿಂಗ್ಸ್ ಆಡಿದ್ದರು. ಆಸ್ಟ್ರೇಲಿಯಾ ನೀಡಿದ ಗುರಿ ಬೆನ್ನತ್ತಿದ ಭಾರತ ತಂಡ 269 ರನ್’ಗಳಿಗೆ ಆಲೌಟ್ ಆಗಿದ್ದು, ಕೇವಲ 1 ರನ್’ಗಳ ಅಂತರದಿಂದ ಸೋಲನುಭವಿಸಿತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.