ನವದೆಹಲಿ : ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋತ ಬಳಿಕ ವಿರಾಟ್ ಕೊಹ್ಲಿ (Virat Kohli) ಟೀಂ ಇಂಡಿಯಾ (Team India) ನಾಯಕತ್ವ ತ್ಯಜಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಕೊಹ್ಲಿ ನಿರ್ಧಾರ ಪ್ರಕಟವಾಗುತ್ತಿದ್ದಂತೆಯೇ ಹಲವರು ಈ ಬಗ್ಗೆ ತಮ್ಮ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೇಪ್ ಟೌನ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಭಾರತ ಸೋತ ಒಂದು ದಿನದ ನಂತರ, ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. 


COMMERCIAL BREAK
SCROLL TO CONTINUE READING

' ಬೇಗನೇ ಮುಗಿಯಿತು ವಿರಾಟ್ ಜವಾಬ್ದಾರಿ' :
ವಿರಾಟ್ ಕೊಹ್ಲಿ  (Virat Kohli) ತಮ್ಮ ನಿರ್ಧಾರವನ್ನು ಪ್ರಕಟಿಸಿದ ನಂತರ, ಅನೇಕ ಹಾಲಿ ಮತ್ತು ಮಾಜಿ ಕ್ರಿಕೆಟಿಗರು, ಟೆಸ್ಟ್ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಕ್ಕಾಗಿ ಅವರನ್ನು ಅಭಿನಂದಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮಾಜಿ  ಕ್ರಿಕೆಟಿಗ ಸಂಜಯ್ ಮಂಜ್ರೇಕರ್ (Sanjay Manjrekar), ಕೊಹ್ಲಿಯ ನಾಯಕತ್ವದ ಅವಧಿಯು ಎಲ್ಲಾ ಸ್ವರೂಪಗಳಲ್ಲಿ ಬಹಳ ಬೇಗನೆ ಕೊನೆಗೊಂಡಿತು ಎಂದು ಅಭಿಪ್ರಾಯಪಟ್ಟಿದ್ದಾರೆ. 


ಇದನ್ನೂ ಓದಿ : BCCI vs Kohli:ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ತೊರೆಯುವ ನಿರ್ಧಾರದ ಹಿಂದಿವೆ ಈ 5 ಪ್ರಮುಖ ಕಾರಣಗಳು!?


ವಿರಾಟ್ ನಿರ್ಧಾರದಿಂದ  ಅಚ್ಚರಿ : 
ಅತಿ ಕಡಿಮೆ ಸಮಯದಲ್ಲಿ ವೈಟ್ ಬಾಲ್ ನಾಯಕತ್ವ ಮತ್ತು ಐಪಿಎಲ್ (IPL) ನಾಯಕತ್ವವನ್ನು ಒಂದರ ನಂತರ ಒಂದರಂತೆ ವಿರಾಟ್ ತೊರೆದಿದ್ದಾರೆ ಎಂದು ಸಂಜಯ್ ಮಂಜ್ರೆಕರ್ ತಿಳಿಸಿದ್ದಾರೆ.  ಮೂರು ಸ್ವರೂಪಗಳಲ್ಲಿ ಒಂದರ ನಂತರ ಒಂದರಂತೆ ರಾಜೀನಾಮೆಗಳು ಬಹಳ ಬೇಗನೆ ಪ್ರಕಟವಾಯಿತು ಎಂದು ಅವರು ಆಶ್ಚರ್ಯಕರ ವ್ಯಕ್ತಪಡಿಸಿದ್ದಾರೆ. 


ಈ ಭಯದಿಂದಲೇ ತೊರೆದರಾ ನಾಯಕತ್ವ ?  :
ನಾಯಕತ್ವದಿಂದ ತನ್ನನ್ನು ವಜಾ ಮಾಡುವುದು ವಿರಾಟ್ ಕೊಹ್ಲಿಗೆ (Virat Kohli) ಇಷ್ಟವಿರಲಿಲ್ಲ ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಈಗ ತಮ್ಮ ನಾಯಕತ್ವ ಅಪಾಯದಲ್ಲಿದೆ ಎಂದು ಅನಿಸಿದಾಗ ಅವರೇ ನಾಯಕತ್ವ ಸ್ಥಾನದಿಂದ ಕೆಳಗಿಳಿದ್ದಾರೆ ಎನ್ನುವುದು ಸಂಜಯ್ ಮಂಜ್ರೇಕರ್ (Sanjay Manjrekar) ಅಭಿಪ್ರಾಯ.  


ಇದನ್ನೂ ಓದಿ : ನಾಯಕತ್ವದಿಂದ ಕೆಳಗಿಳಿದ ಪತಿ ವಿರಾಟ್ ಗೆ 'ಪ್ರೇಮ ಬರಹ' ಬರೆದ ಅನುಷ್ಕಾ ಶರ್ಮಾ


ಸೋಲಿನ ನಂತರ ತೆಗೆದುಕೊಂಡ ನಿರ್ಧಾರ :
ವಿರಾಟ್ ಕೊಹ್ಲಿ ಭಾರತದ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದು, ಆಟದ ಸುದೀರ್ಘ ಸ್ವರೂಪದಲ್ಲಿ ಅತ್ಯಂತ ಯಶಸ್ವಿ ನಾಯಕನಾಗಿ ಹೊರಹೊಮ್ಮಿದ್ದಾರೆ. ಒಟ್ಟಾರೆಯಾಗಿ, ಅವರ ನಾಯಕತ್ವದ ಅವಧಿಯಲ್ಲಿ, ಭಾರತವು 68 ಟೆಸ್ಟ್‌ಗಳನ್ನು ಆಡಿದ್ದು, ಈ ಪೈಕಿ  40ರಲ್ಲಿ ಗೆಲುವು ಸಾಧಿಸಿದ್ದರೆ, 17ರಲ್ಲಿ  ಸೋಲು ಅನುಭವಿಸಿದೆ. ಇನ್ನು 11 ಪಂದ್ಯಗಳನ್ನು ಡ್ರಾ ಆಗಿವೆ. ಕೊಹ್ಲಿ ನಾಯಕತ್ವದಲ್ಲಿ ತಂಡವು  ಸ್ಮರಣೀಯ ವಿಜಯಗಳನ್ನು ದಾಖಲಿಸಿತು. ಕೇಪ್ ಟೌನ್ ಟೆಸ್ಟ್ ಭಾರತದ ನಾಯಕನಾಗಿ ಕೊಹ್ಲಿಗೆ ಕೊನೆಯ ಪಂದ್ಯವಾಗಿತ್ತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.