ಜ್ಯೂರಿಚ್: ಫಿಪಾದ ನೀತಿ ರಕ್ಷಣಾ ಸಮೀತಿಯು ಹಣಕಾಸಿನ ವ್ಯವಹಾರದ ದುರುಪಯೋಗದಲ್ಲಿ ಭಾಗಿಯಾದ ಮೂವರು ಮಾಜಿ ಪುಟ್ಬಾಲ್ ಅಧಿಕಾರಿಗಳನ್ನು ವಜಾಗೊಳಿಸಿದೆ.


COMMERCIAL BREAK
SCROLL TO CONTINUE READING

ಈ ಅಧಿಕಾರಿಗಳು ಪ್ರಮುಖವಾಗಿ ಗುಆಮ್,ನಿಕರ್ ಗುವಾ,ಮತ್ತು ವೆನುಜುವೆಲಾದವರಾಗಿದ್ದು ಎಂದು ತಿಳಿದುಬಂದಿದ್ದು ಇವರಲ್ಲಿ  ರಿಚರ್ಡ್ಸ್ ಲೈ ಗುಯಾಮ್ ಪುಟ್ಬಾಲ್ ಅಸ್ಸೋಸಿಯನ್ ಅಧ್ಯಕ್ಷರಾಗಿರುವರಲ್ಲದೆ  ಇವರು ಮಾಜಿ ಫಿಪಾ ನ ಲೆಕ್ಕ ಸಮಿತಿಯ ಸದಸ್ಯರು ಕೂಡಾ ಹೌದು, ಮತ್ತು ಜುಲಿಯೋ ರೋಚಾ ಮಾಜಿ ನಿಕರ್ಗುವನ್ ಪುಟ್ಬಾಲ್ ಅಸ್ಸೋಸಿಯನ್ ಅಧ್ಯಕ್ಷರು ಮತ್ತು ಫಿಫಾದ ಮಾಜಿ ಅಭಿವೃದ್ದಿ ಅಧಿಕಾರಿಗಳಾಗಿದ್ದರು ಮತ್ತು ರಾಫೆಲ್ ಎಶಿಕಿವೆಲ್ ಮಾಜಿ ವೆನುಜುವೆಲಾದ ಪುಟ್ಬಾಲ್ ಅಸ್ಸೋಸಿಯನ್ ಅಧ್ಯಕ್ಷರಾಗಿದ್ದರು ಇವರು ಪುಟ್ಬಾಲ್ ಆಡಳಿತ ಮಂಡಳಿಯಲ್ಲಿ ಹಣಕಾಸಿನ ದುರುಪಯೋಗ ಮತ್ತು ಭ್ರಷ್ಟಾಚಾರದ ವ್ಯವಹಾರಗಳಲ್ಲಿ ಭಾಗಿಯಾದ ಹಿನ್ನಲೆಯಲ್ಲಿ ಇವರನ್ನು ಫಿಪಾ ವಜಾಗೊಳಿಸಿ ಆಡಳಿತ ಮಂಡಳಿಯಿಂದ ಅವರಿಗೆ ಜೀವಾವಧಿವರೆಗೆ ನಿಷೇಧವನ್ನು ಹೇರಲಾಗಿದೆ ಎಂದು ವಿಶ್ವ ಪಿಫಾ ಪುಟ್ಬಾಲ್ ಮಂಡಳಿಯು ತಿಳಿಸಿದೆ.