Virat Kohli FIR: ವಿರಾಟ್ ಕೊಹ್ಲಿ ಸದ್ಯ ಲಂಡನ್‌’ನಲ್ಲಿದ್ದಾರೆ. ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆಯ ರಾತ್ರಿಯೇ ಲಂಡನ್’ಗೆ ತೆರಳಿದ್ದ ಅವರು ಪತ್ನಿ, ಮಕ್ಕಳ ಜೊತೆ ಎಂಜಾಯ್ ಮೂಡ್’ನಲ್ಲಿದ್ದಾರೆ. ಆದರೆ ಭಾರತದಲ್ಲಿ ಅವರ ರೆಸ್ಟೋರೆಂಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ವಿಷಯ ಬೆಂಗಳೂರಿನಲ್ಲಿರುವ ವಿರಾಟ್ ಕೊಹ್ಲಿ ಅವರ ಒನ್8 ಕಮ್ಯೂನ್ ರೆಸ್ಟೋರೆಂಟ್‌ಗೆ ಸಂಬಂಧಿಸಿದ್ದು, ಈ ಬಗ್ಗೆ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ದುರುಪಯೋಗ ತಡೆಗಟ್ಟಲು ಹೈ-ರೆಸ್ಯೂಲೆಷನ್ ಜಾಮರ್ ಅಳವಡಿಕೆ: ಗೃಹ ಸಚಿವ ಪರಮೇಶ್ವರ


ಎಂಜಿ ರಸ್ತೆಯಲ್ಲಿರುವ ರೆಸ್ಟೋರೆಂಟ್ ತಡರಾತ್ರಿವರೆಗೆ ಕಾರ್ಯನಿರ್ವಹಿಸಿದ್ದೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.  ಬೆಂಗಳೂರಿನಲ್ಲಿರುವ ವಿರಾಟ್ ಕೊಹ್ಲಿ ರೆಸ್ಟೋರೆಂಟ್ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ನಗರದ ಡಿಸಿಪಿ ಸೆಂಟ್ರಲ್ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಮದುವೆಯಾಗಿ ಮಗಳಿದ್ದರೂ ಸಹ ಕನ್ನಡದ ಖ್ಯಾತ ನಟಿ ಜೊತೆ ಸೌರವ್ ಗಂಗೂಲಿ ಡೇಟಿಂಗ್! ಸಂದರ್ಶನದಲ್ಲಿ ರಿವೀಲ್ ಆಯ್ತು ‘ದಾದ’ ಅಪೇರ್!!


ಎಎನ್‌ಐ ಜೊತೆ ಮಾತನಾಡಿದ ಡಿಸಿಪಿ ಸೆಂಟ್ರಲ್, “ಬೆಂಗಳೂರಿನ 3-4 ಪಬ್‌’ಗಳ ವಿರುದ್ಧ ರಾತ್ರಿ 1.30 ರವರೆಗೆ ಕಾರ್ಯನಿರ್ವಹಿಸಿದ ಕಾರಣಕ್ಕೆ ಪ್ರಕರಣ ದಾಖಲಿಸಿದ್ದೇವೆ . ಅಲ್ಲಿಂದ ಜೋರಾಗಿ ಮ್ಯೂಸಿಕ್ ಕೇಳಿಬರುತ್ತಿರುವ ಬಗ್ಗೆ ನಮಗೆ ದೂರು ಬಂದಿತ್ತು. ನಗರದಲ್ಲಿ ಪಬ್‌’ಗಳನ್ನು ತೆರೆಯುವ ಸಮಯವು ರಾತ್ರಿ 1 ಗಂಟೆಯವರೆಗೆ ಮಾತ್ರ” ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.