PV Sindhu wedding photo viral: ಭಾರತದ ಬ್ಯಾಡ್ಮಿಂಟನ್ ತಾರೆ ಪುಸರ್ಲಾ ವೆಂಕಟ ಸಿಂಧು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ನಡೆದ ಅದ್ಧೂರಿ ಮದುವೆ ಸಮಾರಂಭದಲ್ಲಿ ಉದ್ಯಮಿ ವೆಂಕಟ ದತ್ತ ಸಾಯಿ ಅವರ ಕೈಹಿಡಿದಿದ್ದಾರೆ, ಇನ್ನು ಈ ಸಂಭ್ರಮದ ಮೊದಲ ಫೋಟೋ ರಿವೀಲ್‌ ಆಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಫೇರ್ ವದಂತಿಗಳ ಬಗ್ಗೆ ಅನುಷ್ಕಾ ಓಪನ್ ಕಾಮೆಂಟ್ಸ್, ಒಬ್ಬರಲ್ಲ, ಐವರೂ... ಯಾರು ಗೊತ್ತಾ?


ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಪಿವಿ ಸಿಂಧು ಮತ್ತು ವೆಂಕಟ ದತ್ತಾ ಸಾಯಿ ಅವರ ವಿವಾಹದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶುಭಕೋರಿದ ಅವರು, "ನಿನ್ನೆ ಸಂಜೆ ಉದಯಪುರದಲ್ಲಿ ನಡೆದ ಬ್ಯಾಡ್ಮಿಂಟನ್ ಚಾಂಪಿಯನ್ ಹಾಗೂ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು-ವೆಂಕಟ ದತ್ತ ಸಾಯಿ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ನನಗೆ ಸಂತೋಷವಾಯಿತು" ಎಂದು ಬರೆದುಕೊಂಡಿದ್ದಾರೆ.


"ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಲಿರುವ ನವದಂಪತಿಗೆ ನನ್ನ ಶುಭ ಹಾರೈಕೆ ಹಾಗೂ ಆಶೀರ್ವಾದ" ಎಂದು ಗಜೇಂದ್ರ ಸಿಂಗ್ ಶೇಖಾವತ್ ಅವರು 'ಎಕ್ಸ್'ನಲ್ಲಿ ಹೇಳಿದ್ದಾರೆ.


ಸಿಂಧು-ವೆಂಕಟ ದತ್ತಾ ಸಾಯಿ ಜೀವನದ ವಿಶೇಷ ಘಳಿಗೆಯಲ್ಲಿ ಸಿಲ್ವರ್ ಕಲರ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮದುವೆಯಲ್ಲಿ ಕೇಂದ್ರ ಸಚಿವರ ಜೊತೆಗೆ ಹಲವು ಕ್ರೀಡಾ ಗಣ್ಯರು ಭಾಗವಹಿಸಿದ್ದರು ಎಂದು ವರದಿಯಾಗಿದೆ.


ಇದನ್ನೂ ಓದಿ: ಮೂರು ಮಕ್ಕಳಿದ್ದರೂ 43ನೇ ವಯಸ್ಸಿಗೆ 4ನೇ ಮದುವೆಯಾದ ಖ್ಯಾತ ನಟಿ !


ರಾಜಸ್ಥಾನದಲ್ಲಿ ಮದುವೆ
ರಾಜಸ್ಥಾನದ ಉದಯಪುರದ ರಾಜ್‌ಕೋಟ್‌ನಂತಹ ಸ್ಥಳದಲ್ಲಿ ಸಿಂಧು-ವೆಂಕಟ ದತ್ತ ಸಾಯಿ ವಿವಾಹ ಅದ್ಧೂರಿಯಾಗಿ ನಡೆದಿದೆ. ಸಿಂಧು ಅವರ ಫ್ಯಾಮಿಲಿ ಫ್ರೆಂಡ್ ಆಗಿದ್ದ ವೆಂಕಟ ಅವರನ್ನೇ ಸಿಂಧು ಮದುವೆಯಾಗಿದ್ದಾರೆ. ಎರಡೂ ಕುಟುಂಬದ ಹಿರಿಯರ ನಿರ್ಧಾರದಂತೆ ಒಂದಾಗಿದ್ದಾರೆ. ಸಿಂಧು-ವೆಂಕಟ ದತ್ತ ಸಾಯಿ ಅವರ ವಿವಾಹ ಆರತಕ್ಷತೆ ಮಂಗಳವಾರ (ಡಿಸೆಂಬರ್ 24) ನಡೆಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್
  ಮಾಡಿ