ಮೊದಲ ಟೆಸ್ಟ್ ಕ್ರಿಕೆಟ್ : ಭಾರತದ ನೆರವಿಗೆ ಬಂದ ಹಾರ್ದಿಕ್ ಪಾಂಡ್ಯ
ನವದೆಹಲಿ: ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ನಿನ್ನೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದಿದ್ದ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ದ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 286 ರನ್ ಗಳಿಗೆ ಆಲೌಟ್ ಆಯಿತು .
ಈ ಸವಾಲನ್ನು ಬೆನ್ನತ್ತಿದ ಭಾರತ ತಂಡವು ವರ್ನಾನ್ ಫಿಲಾಂದರ್ ಹಾಗೂ ಡೇಲ್ ಸ್ಟೆನ್, ಮೊರ್ಕೆಲ್ ,ರಬಡಾ ರವರ ಪರಿಣಾಮಕಾರಿ ಬೌಲಿಂಗ್ ದಾಳಿಯಿಂದಾಗಿ ಆರಂಭಿಕ ಬ್ಯಾಟ್ಸ್ಮನ್ ಗಳೆಲ್ಲರು ಬೇಗನೆ ವಿಕೆಟ್ ಒಪ್ಪಿಸಿದರು.ಒಂದು ಹಂತದಲ್ಲಿ ಭಾರತ ತಂಡವು 92 ರನ್ ಗಳಿಗೆ ಏಳು ವಿಕೆಟ್ ಗಳನ್ನು ಕಳೆದುಕೊಂಡು ಆತಂಕದಲ್ಲಿದ್ದ ಭಾರತಕ್ಕೆ ಹಾರ್ದಿಕ್ ಪಾಂಡ್ಯ (93) ಮತ್ತು ಭುವನೇಶ್ವರ ಕುಮಾರವರ(25) ರವರು ಸುಮಾರು 90ಕ್ಕೂ ಅಧಿಕ ರನ್ ಗಳ ಜೊತೆಯಾಟದಿಂದಾಗಿ ಭಾರತವನ್ನು ತಂಡವನ್ನು 200 ರನ್ ಗಡಿ ದಾಟಲು ನೆರವಾದರು.
ಭಾರತ ತಂಡವು 209 ರನ್ ಗಳಿಗೆ ಆಲೌಟ್ ಆಗಿ ಒಟ್ಟು 77 ರನ್ ಗಳ ಹಿನ್ನಡೆಯನ್ನು ಅನುಭವಿಸಿದೆ.ದಕ್ಷಿಣ ಆಫ್ರಿಕಾ ತನ್ನ ಎರಡನೆಯ ಇನ್ನಿಂಗ್ಸ್ ಬ್ಯಾಟಿಂಗ್ ಪ್ರಾರಂಭಿಸಿ ಮೂರು ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದೆ.