ಫೈವ್ ಸ್ಟಾರ್ ಹೋಟೆಲ್ ರೂಮ್ ಗಳು ರಾಯಲ್ ಜೈಲುಗಳಿದ್ದ ಹಾಗೆ- ವಿರಾಟ್ ಕೊಹ್ಲಿ
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಫೈವ್ ಸ್ಟಾರ್ ಹೋಟೆಲ್ ಗಳು ರಾಯಲ್ ಜೈಲುಗಳಿದ್ದ ಹಾಗೆ ಎಂದು ತಿಳಿಸಿದ್ದಾರೆ.
ಇಎಸ್ಪಿಎನ್ ಗೆ ನೀಡಿದ ಸಂದರ್ಶನದಲ್ಲಿ ಸೆಲೆಬ್ರಿಟಿ ಜೀವನದ ಬಗ್ಗೆ ಮಾತನಾಡಿದ ಅವರು" ಹೋಟೆಲ್ ಬಿಟ್ಟಾಕಿ ಕೆಳಗಡೆ ಇರುವ ಹೋಟೆಲ್ ರೆಸ್ಟೋರೆಂಟ್ ಗೆ ತಿನ್ನಲು ಸಹ ಹೋಗುವುದನ್ನು ಕಲ್ಪಿಸಿಕೊಳ್ಳುವುದು ಕೂಡ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ತಮ್ಮ ಏಳು ವರ್ಷಗಳ ಹಿಂದಿನ ಪರಿಸ್ಥಿತಿಯನ್ನು ಸ್ಮರಿಸಿದ ವಿರಾಟ್ ಕೊಹ್ಲಿ ಈ ಹಿಂದೆ ಹೋಟೆಲ್ ನ ರೆಸ್ಟೋರೆಂಟ್ ನಲ್ಲಿ ಶಾಂತವಾಗಿ ಕುಳಿತು ಊಟ ಮಾಡಬಹುದಾಗಿತ್ತು, ಆದರೆ ಈಗ ಅದ್ಯಾವುದೇ ಆಯ್ಕೆ ಇಲ್ಲ. ಎಲ್ಲ ಊಟವನ್ನು ರೂಮಿಗೆ ತರಿಸಿಕೊಂಡು ತಿನ್ನಬೇಕಾಗಿದೆ ಎಂದು ತಿಳಿಸಿದರು.