Virat Kohli Fitness Secrets : ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಇತಿಹಾಸವನ್ನು ದಾಖಲಿಸಿದ ಆಟಗಾರ.ಸಚಿನ್ ತೆಂಡೂಲ್ಕರ್ ನಂತರ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಭಾರತೀಯ ಬ್ಯಾಟ್ಸ್‌ಮನ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಟೆಸ್ಟ್,ಏಕದಿನ ಮತ್ತು ಟಿ20 ಎಲ್ಲಾ ಮಾದರಿಗಳಲ್ಲಿ ವಿರಾಟ್ ಕೊಹ್ಲಿಯ ಸಾಧನೆಗಳು ಅಪಾರ.ಬ್ಯಾಟಿಂಗ್ ಮಾತ್ರವಲ್ಲದೆ ಫೀಲ್ಡಿಂಗ್ ನಲ್ಲೂ ಮಿಂಚಿದ್ದಾರೆ. ಅದಕ್ಕೆ ಮುಖ್ಯ ಕಾರಣ ಅವರ ಫಿಟ್ನೆಸ್.


COMMERCIAL BREAK
SCROLL TO CONTINUE READING

ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ.ಇದು ಅವರ ಕ್ರಿಕೆಟ್ ಜೀವನಕ್ಕೆ ಬಹಳವಾಗಿ ನೆರವಾಯಿತು. 35ರ ಹರೆಯದ ವಿರಾಟ್ ಕೊಹ್ಲಿ ವಿಶ್ವದ ಹಲವು ಕಿರಿಯ ಆಟಗಾರರನ್ನು ಸರಿಗಟ್ಟುವಷ್ಟು ಫಿಟ್ ಆಗಿದ್ದಾರೆ.ನಿಯಮಿತ ವ್ಯಾಯಾಮ ಇದಕ್ಕೆ ಒಂದು ಕಾರಣವಾದರೆ, ಅವರು ಸೇವಿಸುವ ಆಹಾರ, ಅನುಸರಿಸುವ ಆಹಾರ ಪದ್ಧತಿ ಮತ್ತೊಂದು ಕಾರಣ. 


ಇದನ್ನೂ ಓದಿ :  Cricket News: ಆಟೋಗ್ರಾಫ್‌ ಕೇಳಲು ಬಂದ ಅಭಿಮಾನಿಯನ್ನೇ ಪ್ರೀತಿಸಿ ಮದುವೆಯಾದ ಖ್ಯಾತ ಕ್ರಿಕೆಟಿಗ ಈತ!


ವಿರಾಟ್ ಕೊಹ್ಲಿಯ ಜೀವನ ಶಿಸ್ತು : 
ಕ್ರಿಕೆಟ್ ವೀಕ್ಷಕ ವಿವರಣೆಗಾರ ಜತಿನ್ ಅವರು ಪಾಡ್‌ಕ್ಯಾಸ್ಟ್‌ನಲ್ಲಿ ಕೊಹ್ಲಿಯ ಆಹಾರ ಪದ್ಧತಿಯ ಬಗ್ಗೆ ಕೆಲವು ರಹಸ್ಯಗಳನ್ನು ಹಂಚಿಕೊಂಡಿದ್ದಾರೆ. ಬೇಯಿಸಿದ ಕೋಳಿ ಮತ್ತು ಬೇಯಿಸಿದ ತರಕಾರಿಗಳ ಕಟ್ಟುನಿಟ್ಟಾದ ಆಹಾರಕ್ರಮವು ಅವರ ಫಿಟ್‌ನೆಸ್‌ಗೆ ಪ್ರಮುಖ ಕಾರಣವಾಗಿದೆ ಎನ್ನುವ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. 


ದಿ ರಣವೀರ್ ಶೋ ಎಂಬ ಪಾಡ್‌ಕ್ಯಾಸ್ಟ್‌ನಲ್ಲಿ, ಜತಿನ್  ಅವರು ವಿರಾಟ್ ಕೊಹ್ಲಿ ಐಪಿಎಲ್ ಸರಣಿಯ ಸಮಯದಲ್ಲಿ ಹೇಗೆ ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುತ್ತಿದ್ದರು ಎಂಬುದನ್ನು ವಿವರಿಸಿದ್ದಾರೆ. ವಿರಾಟ್ ಕೊಹ್ಲಿ ಅನುಸರಿಸುವ ಶಿಸ್ತುಬದ್ದ ವಿಧಾನ ನೋಡುವುದಕ್ಕೂ ಸುಂದರ ಎಂದು ಹೇಳಿದ್ದಾರೆ. ಅವರು ರುಚಿಗಿಂತ ಪೌಷ್ಟಿಕತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಅದರಲ್ಲೂ ವಿರಾಟ್ ದೇಹಕ್ಕೆ ಅಗತ್ಯವಿರುವ ನಿರ್ದಿಷ್ಟ ಪೋಷಣೆಗೆ ಅನುಗುಣವಾಗಿ ತಿನ್ನುತ್ತಾರೆಯಂತೆ. 


ವಿರಾಟ್ ಫಿಟ್ನೆಸ್ : 
"ವಿರಾಟ್ ಕೊಹ್ಲಿ ಅವರು ವಿಮಾನದಲ್ಲಿಯೂ ತಿನ್ನಲು ಪ್ರತ್ಯೇಕ ಬ್ಯಾಗ್‌ನಲ್ಲಿ ನಟ್ಸ್ ,ಕಾಫಿ ಸೆಟ್ ಮತ್ತು ಪ್ರೋಟೀನ್ ಬಾರ್ ಸೆಟ್‌ಗಳನ್ನು ತೆಗೆದುಕೊಂಡು ಹೋಗುತ್ತಾರೆಯಂತೆ. ಪ್ರತಿ ಅರ್ಧ ಗಂಟೆಗೊಮ್ಮೆ ಅದನ್ನು ಸೇವಿಸುತ್ತಾ ಇರುತ್ತಾರೆ ಎಂದು ಜತಿನ್ ಉಲ್ಲೇಖಿಸಿದ್ದಾರೆ.ಅಂದಹಾಗೆ,ಯುವ ಆಟಗಾರರು ಮಾತ್ರವಲ್ಲದೆ ತಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಲು ಬಯಸುವವರು ವಿರಾಟ್ ಕೊಹ್ಲಿ ಅವರ ಆಹಾರ ಮತ್ತು ಫಿಟ್ನೆಸ್ ಸಂಬಂಧಿತ  5 ಪಾಠಗಳನ್ನು ಕಲಿಯಬೇಕು.


ಇದನ್ನೂ ಓದಿ :  ಟೀಂ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ಆಸ್ತಿ ಎಷ್ಟು ಗೊತ್ತಾ?


- ವಿರಾಟ್ ಕೊಹ್ಲಿ ತಮ್ಮ ಶಿಸ್ತಿನ ಅಭ್ಯಾಸದಿಂದಾಗಿ ಫಿಟ್ ಆಗಿದ್ದಾರೆ. ವರ್ಷವಿಡೀ ಅವರು ನಿಯಮಿತವಾಗಿ ತರಬೇತಿ ಪಡೆಯಲ್ಲಿರುತ್ತಾರೆ. ದೈಹಿಕ ವ್ಯಾಯಾಮಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ.


- ವಿರಾಟ್ ಕೊಹ್ಲಿ ಮಾಡುವ ವ್ಯಾಯಾಮ ಅವರ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹದ ನಮ್ಯತೆಯನ್ನು ಸುಧಾರಿಸಲು  ಸಹಾಯ ಮಾಡುತ್ತದೆ. ಕಾರ್ಡಿಯೋ ತರಬೇತಿ ಮತ್ತು ಚುರುಕುತನದ ವ್ಯಾಯಾಮಗಳನ್ನು ಮಾಡುತ್ತಾರೆ.ಇದು ಅವರ ಆಟಕ್ಕೆ ನಿರ್ಣಾಯಕವಾಗಿದೆ. 


- ವಿರಾಟ್ ಕೊಹ್ಲಿ ಅವರ ಆಹಾರಕ್ರಮವು ಅವರ ಕ್ರಿಕೆಟ್ ಆಟಕ್ಕೆ ಅನುಗುಣವಾಗಿರುತ್ತದೆ.ಅವರ ಆಹಾರವನ್ನು ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಮತ್ತು ಎನರ್ಜಿ ಲೆವೆಲ್ ಲೋ ಆಗದಂತೆ ನೋಡಿಕೊಳ್ಳುವ ರೀತಿಯಲ್ಲಿ  ವಿನ್ಯಾಸಗೊಳಿಸಲಾಗಿದೆ.


- ದೇಹವನ್ನು ಹೈಡ್ರೀಕರಿಸಿಟ್ಟುಕೊಳ್ಳುವುದು ವಿರಾಟ್ ಕೊಹ್ಲಿಯ ಫಿಟ್ನೆಸ್ ನ ಮತ್ತೊಂದು ಮುಖ್ಯ ಅಂಶ.ತನ್ನ ದೇಹವನ್ನು ಹೈಡ್ರೀಕರಿಸಿದಂತೆ ಆಟಕ್ಕೆ ಬೇಕಾದ ಎಲ್ಲಾ ಶಕ್ತಿಯನ್ನು ಅವರ ದೇಹ ಪಡೆದುಕೊಳ್ಳುತ್ತದೆ.


- ವಿರಾಟ್ ಕೊಹ್ಲಿ ಪ್ರಮಾಣಕ್ಕಿಂತ ಆಹಾರದ ಗುಣಮಟ್ಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಹಣ್ಣುಗಳು,ತರಕಾರಿಗಳು ಮತ್ತು ಡೈರೆಕ್ಟ್ ಪ್ರೋಟೀನ್ ಗೆ ಅವರ ಆಹಾರ ಪಟ್ಟಿಯಲ್ಲಿ ಜಾಗ ಇದ್ದೇ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ