Angelo Mathews: ಸಮಯಕ್ಕೆ ಸರಿಯಾಗಿ ಆಟವು ಸುಗಮವಾಗಿ ಸಾಗುವಂತೆ ನೋಡಿಕೊಳ್ಳುವ ಸಲುವಾಗಿ ಜಾರಿಗೆ ತರಲಾಗಿದ ಒಂದು ನಿಯಮವಿದೆ. ಒಂದು ವೇಳೆ ಆಟಗಾರ ಅನಾವಶ್ಯಕವಾಗಿ ವಿಳಂಬ ಮಾಡಿದರೆ ಅಥವಾ ಶಿಸ್ತು ಕಾಯ್ದುಕೊಳ್ಳದಿದ್ದರೆ ಅವರ ವಿರುದ್ಧ ಈ ನಿಯಮದ ಅನುಸಾರ ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕೆ ‘ಟೈಮ್ಡ್ ಔಟ್’ ನಿಯಮ ಎಂದು ಕರೆಯಲಾಗುತ್ತದೆ. ಅಂದಹಾಗೆ ಈ ನಿಯಮದ ಬಗ್ಗೆ ಹಲವರಿಗೆ ತಿಳಿದಿರಲಿಕ್ಕಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ವಾರಾಂತ್ಯಕ್ಕೆ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ!


ಯಾವುದೇ ಒಬ್ಬ ಆಟಗಾರ ನಿಗದಿತ ಸಮಯದ ಒಳಗೆ ಮೈದಾನಕ್ಕೆ ಬರದಿದ್ದರೆ, ಆತನನ್ನು ಔಟ್ ಎಂದು ಪರಿಗಣಿಸಲಾಗುತ್ತದೆ. ಈ ನಿಯಮಕ್ಕೆ ಬಲಿಯಾದ ಮೊದಲ ಆಟಗಾರ ಶ್ರೀಲಂಕಾದ ಏಂಜಲೋ ಮ್ಯಾಥ್ಯೂಸ್. 2023ರ ವಿಶ್ವಕಪ್‌ ಸಮಯದಲ್ಲಿ ಈ ನಿಯಮದ ಅನುಸಾರ ಆತನನ್ನು ಔಟ್‌ ಎಂದು ಘೋಷಿಸಲಾಗಿತ್ತು. ಈ ಮೂಲಕ 146 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಓರ್ವ ಬ್ಯಾಟ್ಸ್‌ಮನ್ ಬೌಲ್ಡ್, ಕ್ಯಾಚ್, ರನೌಟ್ ಆಗದೆ ಮೈದಾನಕ್ಕೂ ಬರದೆ ಔಟ್ ಆಗಿದ್ದನು.


ವಿಶ್ವಕಪ್‌ನಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಕ್ರಿಕೆಟ್‌ ಲೋಕಕ್ಕೆ ಕಪ್ಪು ಮಚ್ಚೆಯಾಗಿ ಉಳಿದಿದೆ. ಜಂಟಲ್‌ ಮ್ಯಾನ್ ಆಟ ಎಂದು ಕರೆಯಲ್ಪಡುವ ಕ್ರಿಕೆಟ್‌ನಲ್ಲಿ, ಶಕಿಬ್ ಅಲ್ ಹಸನ್ ಅವರು ನಿಯಮಗಳ ಲಾಭವನ್ನು ಪಡೆದುಕೊಂಡು ಶ್ರೀಲಂಕಾ ಆಟಗಾರ ಏಂಜಲೋ ಮ್ಯಾಥ್ಯೂಸ್ ಅವರನ್ನು ಔಟ್ ಮಾಡಿದ್ದರು.


ಅಂದು, ಏಂಜಲೋ ಮ್ಯಾಥ್ಯೂಸ್ ಅವರು ಮೈದಾನಕ್ಕೆ ಬರಲೆಂದು ಹೆಲ್ಮೆಟ್ ಅನ್ನು ಬಿಗಿಗೊಳಿಸುತ್ತಿದ್ದಾಗ ಸ್ಟ್ರಿಪ್ ಮುರಿದುಹೋಗಿತ್ತು. ಈ ಕಾರಣದಿಂದ ಬದಲಾಯಿಸಿಕೊಂಡು ಬರಲೆಂದು ಡ್ರೆಸ್ಸಿಂಗ್ ರೂಮಿನ ಕಡೆ ತೆರಳಿದ್ದರು. ಆದರೆ ಈ ಸಮಯದಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಹೇಳಿ ಅದರ ಲಾಭ ಪಡೆದುಕೊಂಡ ಬಾಂಗ್ಲಾ ನಾಯಕ ಅಂಪೈರ್ ಜೊತೆ ಮಾತನಾಡಿದ್ದರು. ಈ ಸಂದರ್ಭದಲ್ಲಿ ಮ್ಯಾಥ್ಯೂಸ್, ಶಕೀಬ್ ಅವರ ಮನವೊಲಿಸಲು ಪ್ರಯತ್ನಿಸಿದರೂ ಸಹ, ಅದಕ್ಕೆ ಒಪ್ಪಿರಲಿಲ್ಲ. ಈ ಬಳಿಕ ಪರಿಶೀಲಿಸಿದ ಥರ್ಡ್ ಅಂಪೈರ್ ನಿಯಮಾನುಸಾರ ಮ್ಯಾಥ್ಯೂಸ್ ಔಟಾಗಿದ್ದಾರೆ ಎಂದು ನಿರ್ಧಾರ ಹೊರಡಿಸಿತು.


ಇದನ್ನೂ ಓದಿ: ಮಧುಮೇಹಿಗಳಿಗೆ ವರದಾನ.. ಊಟಕ್ಕೂ ಮುನ್ನ ಈ ಸಿಹಿಯಾದ ಹಣ್ಣು ತಿಂದ್ರೆ ಜನ್ಮದಲ್ಲೇ ಹೆಚ್ಚಾಗಲ್ಲ ಬ್ಲಡ್‌ ಶುಗರ್!‌


ಈ ನಿಯಮದ ಪ್ರಕಾರ, ಒಬ್ಬ ಬ್ಯಾಟ್ಸ್‌ಮನ್ ಔಟ್ ಆದ ಬಳಿಕ ಮತ್ತೊಬ್ಬ ಬ್ಯಾಟ್ಸ್‌ಮನ್‌ ಮೈದಾನಕ್ಕೆ ಬರಲು ಮತ್ತು ಬೌಲಿಂಗ್‌ ಎದುರಿದಲು 3 ನಿಮಿಷವಷ್ಟೇ ಇರುತ್ತದೆ. ಇದನ್ನು ಮೀರಿದರೆ ಔಟ್‌ ಎಂದು ಘೋಷಿಸಲಾಗುತ್ತದೆ. ಇನ್ನು ಈ ಘಟನೆ ನಡೆದಿರುವುದು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್
  ಮಾಡಿ