Asghar Afghan on MS Dhoni: ಅನುಭವಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಈ ತಂಡವು ಈ ಲೀಗ್‌’ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಇದೀಗ ಅಫ್ಘಾನಿಸ್ತಾನದ ಮಾಜಿ ನಾಯಕ ಧೋನಿ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇವರೇ ನೋಡಿ ವಿರಾಟ್ ಕೊಹ್ಲಿ ತಂದೆ… ದೇಶದ ಪ್ರಖ್ಯಾತ ಕ್ರಿಮಿನಲ್ ಲಾಯರ್ ಆಗಿದ್ರು ಇವ್ರು..!


ನಮಗೆಲ್ಲಾ ತಿಳಿದಿರುವಂತೆ, ಧೋನಿ ಆಟಗಾರರಿಗೆ ಅವಕಾಶ ನೀಡಿದಾಗ ವಿಶೇಷ ಜವಾಬ್ದಾರಿಯನ್ನೂ ನೀಡುತ್ತಾರೆ. ಏನಾದರೂ ತಪ್ಪು ಮಾಡಿದರೆ ಆ ಆಟಗಾರನಿಗೂ ಬೈಯುತ್ತಾರೆ. ಅವರು ಫಿಟ್ನೆಸ್ ಬಗ್ಗೆ ಎಷ್ಟು ಜಾಗೃತರಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.


ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಫ್ಘಾನಿಸ್ತಾನದ ಮಾಜಿ ನಾಯಕ ಅಸ್ಗರ್ ಅಫ್ಘಾನ್, ಎಂಎಸ್ ಧೋನಿ ಬಗ್ಗೆ ಪ್ರಮುಖ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ವಿಕೆಟ್‌ ಕೀಪರ್ ಮೊಹಮ್ಮದ್ ಶಹಜಾದ್ 20 ಕೆಜಿ ತೂಕ ಇಳಿಸಿಕೊಂಡರೆ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಯ್ಕೆ ಮಾಡುವುದಾಗಿ ಧೋನಿ ಒಮ್ಮೆ ಹೇಳಿದ್ದರು ಎಂದು ಅಸ್ಗರ್ ಅಫ್ಘಾನ್ ಹೇಳಿದ್ದಾರೆ. 2018ರ ಏಷ್ಯಾಕಪ್ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.


ಏಷ್ಯಾಕಪ್ 2018ರ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ಟೈ ಆಗಿತ್ತು. ಆ ಪಂದ್ಯದಲ್ಲಿ ಮೊಹಮ್ಮದ್ ಶಹಜಾದ್ 116 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 124 ರನ್ ಗಳಿಸಿದ್ದರು. ಅಫ್ಘಾನಿಸ್ತಾನ 50 ಓವರ್‌’ಗಳಲ್ಲಿ 8 ವಿಕೆಟ್‌ಗೆ 252 ರನ್ ಸೇರಿಸಿತು. ನಂತರ ಟೀಂ ಇಂಡಿಯಾ 252 ರನ್‌’ಗಳಿಗೆ ಆಲೌಟ್ ಆಯಿತು. ಶಹಜಾದ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಈ ಪಂದ್ಯದ ನಂತರ ಅಸ್ಗರ್ ಅಫ್ಘಾನ್ ಮತ್ತು ಧೋನಿ ನಡುವೆ ಮಾತುಕತೆ ನಡೆಯಿತು.


ಇದನ್ನೂ ಓದಿ: ಸಾರಾ ಜೊತೆ ಅಲ್ಲ… ಈ ನಟಿಯೊಂದಿಗೆ ಲಂಡನ್ ಬೀದಿಯಲ್ಲಿ ಸುತ್ತಾಡಿದ ಪ್ರಿನ್ಸ್ ಶುಭ್ಮನ್ ಗಿಲ್!


TOI ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಅಸ್ಗರ್ ಅಫ್ಘಾನ್, “ಪಂದ್ಯವು ಟೈ ಆದ ನಂತರ, ನಾನು ಧೋನಿ ಜೊತೆ ಸುದೀರ್ಘ ಸಂಭಾಷಣೆ ನಡೆಸಿದೆ. ಅವರು ಅದ್ಭುತ ನಾಯಕ ಮತ್ತು ಭಾರತೀಯ ಕ್ರಿಕೆಟ್‌’ಗೆ ದೇವರು ನೀಡಿದ ಕೊಡುಗೆ. ಮೊಹಮ್ಮದ್ ಶಹಜಾದ್ ಬಗ್ಗೆ ನಾವು ಸಾಕಷ್ಟು ಮಾತನಾಡಿದ್ದೆವು. ಶಹಜಾದ್ ನಿಮ್ಮ ದೊಡ್ಡ ಅಭಿಮಾನಿ ಎಂದು ನಾನು ಧೋನಿ ಭಾಯ್‌’ಗೆ ಹೇಳಿದೆ. ಆ ಸಂದರ್ಭದಲ್ಲಿ ಶೆಹಜಾದ್ ಅಧಿಕ ತೂಕ ಹೊಂದಿದ್ದು, 20 ಕೆಜಿ ತೂಕ ಕಳೆದುಕೊಂಡರೆ ಅವರನ್ನು ಐಪಿಎಲ್‌’ಗೆ ಆಯ್ಕೆ ಮಾಡುತ್ತೇನೆ ಎಂದಿದ್ದರು ಧೋನಿ. ಆದರೆ ಸರಣಿಯ ನಂತರ ಶೆಹಜಾದ್ ಅಫ್ಘಾನಿಸ್ತಾನಕ್ಕೆ ಮರಳಿದಾಗ ಅವರ ತೂಕ 5 ಕೆಜಿಯಷ್ಟು ಹೆಚ್ಚಾಯಿತು” ಎಂದು ಹೇಳಿದ್ದಾರೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ