ನವದೆಹಲಿ: ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆಯವರ ಜೊತೆಯಾಟಕ್ಕೆ ಆಸ್ಟ್ರೇಲಿಯಾದ ಮಾಜಿ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.   


COMMERCIAL BREAK
SCROLL TO CONTINUE READING

ಶನಿವಾರಂದು ಭಾರತ ತಂಡವು ಎರಡನೇ ದಿನ ಬ್ಯಾಟಿಂಗ್ ಆರಂಭಿಸಿ ಆರಂಭದಲ್ಲಿ ಆಘಾತ ಅನುಭವಿಸಿದೆ. ಕೇವಲ ಎಂಟು ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಕುಸಿತ ಕಂಡಿದ್ದ ಭಾರತಕ್ಕೆ ನಾಯಕ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆ ನೆರವಾದರು.



ಸದ್ಯ ವಿರಾಟ್ ಕೊಹ್ಲಿ 82, ಅಜಿಂಕ್ಯಾ ರಹಾನೆ, 51 ರನ್ ಗಳಿಸಿ ಕ್ರಿಸ್ ನಲ್ಲಿದ್ದಾರೆ.ಎರಡನೇ ದಿನದ ಅಂತ್ಯಕ್ಕೆ ಭಾರತ 172/3 ರನ್ ಗಳಿಸಿದೆ. ಈಗ ಮಾಜಿ ಆಸಿಸ್ ಆಟಗಾರರಾದ ಮೈಕಲ್ ಕ್ಲಾರ್ಕ್ ಹಾಗೂ ಡೀನ್ ಜೋನ್ಸ್ ಟ್ವಿಟ್ಟರ್ನಲ್ಲಿ  ಇಬ್ಬರು ಭಾರತೀಯ ಆಟಗಾರರ ಜೊತೆಯಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



ಕ್ಲಾರ್ಕ್ ಟ್ವಿಟ್ಟರ್ ನಲ್ಲಿ  ಭಾರತದ ಎಂಟು ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡ ನಂತರ ಹೋರಾಟ ನಡೆಸಿದ ರೀತಿ ಮೆಚ್ಚುಗೆ ವ್ಯಕ್ತಪಡಿಸುತ್ತಾ ವಿರಾಟ್ ಕೊಹ್ಲಿ ನಂಬಲಸಾಧ್ಯ, ರಹಾನೆ ಅನನ್ಯ ಎಂದು ಟ್ವೀಟ್ ಮಾಡಿದ್ದಾರೆ.ಇನ್ನೊಂದೆಡೆಗೆ ಡೀನ್ ಜೋನ್ಸ್ ಕೂಡ ಪಿಚ್  "ಇಂದು ಸ್ವಲ್ಪ ಉತ್ತಮವಾಗಿತ್ತು ..ಆದರೆ ರಹಾನೆ ಮತ್ತು ಕೊಹ್ಲಿ ಅವರು ಉತ್ತಮವಾಗಿ ಆಡಿದರು! ನಮ್ಮ ಬ್ಯಾಟ್ಸ್ಮನ್ಗಳು ಮತ್ತೆ ನೋಡುತ್ತಾರೆಂದು ನಾನು ಭಾವಿಸುತ್ತೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.