“ಈ ಆಟಗಾರ ತಂಡದಲ್ಲಿಲ್ಲ, ನಿಮಗೆ ಸರಣಿ ಗೆಲ್ಲೋಕೆ ಇದೇ ಸುವರ್ಣವಕಾಶ” – ಇಂಗ್ಲೆಂಡ್ ತಂಡಕ್ಕೆ ಸಲಹೆ ನೀಡಿದ ಸ್ಟುವರ್ಟ್ ಬ್ರಾಡ್
Stuart Broad Statement About Virat Kohli: ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಸರಣಿಯಿಂದ ಹೊರಗುಳಿದಿದ್ದಾರೆ. ಇನ್ನು, ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಐದು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.
India Vs England 3rd Test: ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯು ಉತ್ತಮ ಬೆಳವಣಿಗೆಯಲ್ಲ. ಆದರೆ ಆತನ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್’ಗೆ ಭಾರತವನ್ನು ಸೋಲಿಸಲು ಸುವರ್ಣಾವಕಾಶವಿದೆ ಎಂದು ಇಂಗ್ಲೆಂಡ್ ಮಾಜಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಹೇಳಿಕೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಸರಣಿಯಿಂದ ಹೊರಗುಳಿದಿದ್ದಾರೆ. ಇನ್ನು, ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಐದು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.
ಇದನ್ನೂ ಓದಿ: ನೀರಾವರಿ ಅಭಿವೃದ್ಧಿ, ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಮೊದಲ ಆದ್ಯತೆ: ಡಿಸಿಎಂ ಡಿ.ಕೆ ಶಿವಕುಮಾರ್
ಸ್ಟುವರ್ಟ್ ಬ್ರಾಡ್ ಮಾತನಾಡಿ, 'ವಿರಾಟ್ ತಮ್ಮ ಉತ್ಸಾಹ, ಆಕ್ರಮಣಶೀಲತೆ ಮತ್ತು ಅತ್ಯುತ್ತಮ ಆಟದಿಂದ ಯಾವುದೇ ಸ್ಪರ್ಧೆಯನ್ನು ಉತ್ತಮಗೊಳಿಸುವ ಸಾಮಾರ್ಥ್ಯ ಹೊಂದಿದ್ದಾರೆ. ಪ್ರೇಕ್ಷಕರು ಅವರ ಆಟವನ್ನು ನೋಡಲು ಉತ್ಸುಕರಾಗಿದ್ದಾರೆ, ಆದರೆ ಕ್ರಿಕೆಟ್’ಗೆ ಸಂಬಂಧಿಸಿದ ಸಮಸ್ಯೆಗಳಿಗಿಂತ ವೈಯಕ್ತಿಕ ಸಮಸ್ಯೆಗಳು ಯಾವಾಗಲೂ ದೊಡ್ಡದಾಗಿರುತ್ತವೆ” ಎಂದಿದ್ದಾರೆ.
“ವಿರಾಟ್ ಅನುಪಸ್ಥಿತಿಯು ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಸುವರ್ಣಾವಕಾಶವಾಗಲಿದೆ” ಎಂದು ಸ್ಟುವರ್ಟ್ ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ.
“ಶ್ರೇಷ್ಠ ಆಟಗಾರರು ಆಡದಿದ್ದಾಗ, ಯುವಕರು ತಮ್ಮನ್ನು ತಾವು ಸಾಬೀತುಪಡಿಸಲು ಅವಕಾಶವಿರುತ್ತದೆ. ಯಶಸ್ವಿ ಜೈಸ್ವಾಲ್ ಹೇಗೆ ದ್ವಿಶತಕ ಬಾರಿಸಿದರು ಎಂಬುದನ್ನು ನಾವು ಕಳೆದ ಟೆಸ್ಟ್’ನಲ್ಲಿ ನೋಡಿದ್ದೇವೆ. ಇನ್ನು ಕೆಲವು ಆಟಗಾರರು ಮುಂದಿನ ಮೂರು ಪಂದ್ಯಗಳಲ್ಲಿ ಭಾರತದ ಪರ ಮಿಂಚಲಿದ್ದಾರೆ. ವಿರಾಟ್ ಆಟಕ್ಕೆ ವಿದಾಯ ಹೇಳಿದಾಗ ಅವರ ಸ್ಥಾನವನ್ನು ಪಡೆದುಕೊಳ್ಳಲು ಸಾಕಷ್ಟು ಅರ್ಹರಾಗಿರಬಹುದು” ಎಂದಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಅತ್ಯಂತ ಸ್ಪರ್ಧಾತ್ಮಕ ಸರಣಿಗಳಲ್ಲಿ ಇದೂ ಒಂದಾಗಿದ್ದು, ಮುಂದಿನ ಮೂರು ಟೆಸ್ಟ್‌ಗಳಲ್ಲಿ ಇಂಗ್ಲೆಂಡ್’ಗೆ ಉತ್ತಮ ಅವಕಾಶವಿದೆ ಎಂದು ಸ್ಟುವರ್ಟ್ ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ. “ವಿರಾಟ್ ಅನುಪಸ್ಥಿತಿಯಲ್ಲಿ, ಇತರ ಆಟಗಾರರ ಫಿಟ್ನೆಸ್ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ. ವಿರಾಟ್ ಮತ್ತು ಇಂಗ್ಲೆಂಡ್’ನ ವೇಗದ ಬೌಲರ್‌ಗಳು, ವಿಶೇಷವಾಗಿ ಜಿಮ್ಮಿ ಆಂಡರ್ಸನ್ ನಡುವಿನ ಪೈಪೋಟಿ ಸಾಕಷ್ಟು ಪ್ರಸಿದ್ಧವಾಗಿದೆ. ವಿರಾಟ್ ಆಡದಿರುವುದು ಕ್ರಿಕೆಟ್ ಮತ್ತು ಈ ಸರಣಿಗೆ ಒಪ್ಪದ ಸಂಗತಿ” ಎಂದಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ ನೌಕಾಪಡೆಯಿಂದ ಬಂಧಿಸಲ್ಪಟ್ಟ 18 ಭಾರತೀಯ ಮೀನುಗಾರರ ಬಿಡುಗಡೆ: ತವರಿಗೆ ವಾಪಾಸ್
ಜಿಮ್ಮಿ ಆಂಡರ್ಸನ್ ಅವರ ಪ್ರದರ್ಶನದ ಬಗ್ಗೆ ಸಂತಸ ವ್ಯಕ್ತಪಡಿಸಿದ ಸ್ಟುವರ್ಟ್ ಬ್ರಾಡ್, “ಎರಡನೇ ಟೆಸ್ಟ್’ನಲ್ಲಿ ವೇಗದ ಬೌಲರ್’ಗಳ ಪಾತ್ರವು ಪ್ರಮುಖವಾಗಿದೆ ಎಂದು ನಾವು ನೋಡಿದ್ದೇವೆ. ಜಸ್ಪ್ರೀತ್ ಬುಮ್ರಾ ಭಾರತಕ್ಕೆ ಪಂದ್ಯವನ್ನು ಗೆದ್ದುಕೊಟ್ಟರೆ, ಜಿಮ್ಮಿ ಉತ್ತಮ ಬೌಲಿಂಗ್ ಮಾಡಿದರು. ಪಿಚ್ ಸ್ಪಿನ್ ಆಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು, ಆದರೆ ವೇಗದ ಬೌಲರ್’ಗಳು ಹೆಚ್ಚಿನ ಯಶಸ್ಸು ಪಡೆದರು” ಎಂದು ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.