International Cricketer Death News: ಪ್ರಸ್ತುತ ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್ ಐಪಿಎಲ್ 2024 ಭಾರತದಲ್ಲಿ ನಡೆಯುತ್ತಿದೆ. ಪ್ರಪಂಚದಾದ್ಯಂತದ ಅನೇಕ ಆಟಗಾರರು ಈ ಲೀಗ್‌’ನಲ್ಲಿ ಆಡುತ್ತಿದ್ದು, ಇಡೀ ಜಗತ್ತು ಇದರ ಮೇಲೆ ಕಣ್ಣಿಟ್ಟಿದೆ. ಆದರೆ ಇದರ ಮಧ್ಯೆ ಇಂದು ಸ್ಟಾರ್ ಕ್ರಿಕೆಟಿಗನೊಬ್ಬ ನಿಧನರಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ತಂಡ ಸೇರಲು ಸೂರ್ಯಕುಮಾರ್ ಯಾದವ್ ರೆಡಿ! ಈ ಪಂದ್ಯದ ಮೂಲಕ ಮಿಸ್ಟರ್ 360 ಕಂಬ್ಯಾಕ್


ಈ ಸ್ಟಾರ್ ಕ್ರಿಕೆಟ್ ಪ್ಲೇಯರ್ ಕೇವಲ 33ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಈ ಮಾಹಿತಿಯನ್ನು ಸ್ವತಃ ಐಸಿಸಿ ಪೋಸ್ಟ್ ಮಾಡುವ ಮೂಲಕ ನೀಡಿದೆ.


ನಿಧನರಾದ ಕ್ರಿಕೆಟ್ ಪ್ಲೇಯರ್ ಪಪುವಾ ನ್ಯೂಗಿನಿಯಾ (PNG) ಅಂತರಾಷ್ಟ್ರೀಯ ಮಹಿಳಾ ತಂಡದ ಮಾಜಿ ನಾಯಕಿ. ಈಕೆಯ ಹೆಸರು ಕೈಯಾ ಅರುವಾ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಐಸಿಸಿ ಟ್ವಿಟರ್‌’ನಲ್ಲಿ ಅವರ ಚಿತ್ರದೊಂದಿಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದೆ.


ಕೈಯಾ ಅರುವಾ ಯಾರು?


ಅರುವಾ ಅದ್ಭುತ ಆಲ್ ರೌಂಡರ್.  2010 ರಲ್ಲಿ ಪೂರ್ವ ಏಷ್ಯಾ ಪೆಸಿಫಿಕ್ ಟ್ರೋಫಿಯಲ್ಲಿ ಮೊದಲ ಬಾರಿಗೆ PNG ರಾಷ್ಟ್ರೀಯ ತಂಡಕ್ಕಾಗಿ ಆಡಿದರು. 2017 ರ ಮಹಿಳಾ ಕ್ರಿಕೆಟ್ ವಿಶ್ವಕಪ್‌’ನ ಕ್ವಾಲಿಫೈಯರ್ ಸುತ್ತಿಗೆ ತಂಡದಲ್ಲಿ ಆಯ್ಕೆಯಾದರು. ನಂತರ ಅವರು 2018 ರ T20 ವಿಶ್ವಕಪ್ ಕ್ವಾಲಿಫೈಯರ್‌’ನಲ್ಲಿ ಐರ್ಲೆಂಡ್ ವಿರುದ್ಧ PNG ಗೆ ನಾಯಕಿಯಾದರು.


ಇದನ್ನೂ ಓದಿ:  ಮುಂಬೈ ಇಂಡಿಯನ್ಸ್ ತಂಡ ಸೇರಲು ಸೂರ್ಯಕುಮಾರ್ ಯಾದವ್ ರೆಡಿ! ಈ ಪಂದ್ಯದ ಮೂಲಕ ಮಿಸ್ಟರ್ 360 ಕಂಬ್ಯಾಕ್


ನಾಯಕತ್ವದಲ್ಲಿ ಅತ್ಯುತ್ತಮ ದಾಖಲೆ


ಅರುವಾ ಅವರ ನಾಯಕತ್ವದ ಬಗ್ಗೆ ಮಾತನಾಡುವುದಾದರೆ, 2019ರ ಪೂರ್ವ ಏಷ್ಯಾ ಪೆಸಿಫಿಕ್ T20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ PNG ತಂಡವನ್ನು ಚಾಂಪಿಯನ್ ಮಾಡಿದರು. ಜೊತೆಗೆ ತಂಡವು 2019 ರ ಮಹಿಳಾ T20 ವಿಶ್ವಕಪ್ ಕ್ವಾಲಿಫೈಯರ್ ಮತ್ತು 2021 ರ ಮಹಿಳಾ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್‌’ಗೆ ಪ್ರವೇಶಿಸಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ