Ravi Shastri Statement on Arshadeep Singh: ಟೆಸ್ಟ್ ಕ್ರಿಕೆಟ್‌’ನಲ್ಲಿ ಅರ್ಷದೀಪ್ ಸಿಂಗ್ ಭಾರತಕ್ಕೆ ಪ್ರಮುಖ ಆಟಗಾರನಾಗಬಹುದು. ಆತನನ್ನು ಈಗನಿಂದಲೇ ಸಿದ್ಧಪಡಿಸಿ ಎಂದು ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  Salar: ಶೀಘ್ರದಲ್ಲೇ OTT ವೇದಿಕೆಗೆ ಎಂಟ್ರಿ ಕೊಡಲಿರುವ ಸಲಾರ್..!‌ ಯಾವಾಗ ಗೊತ್ತಾ?   


ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌’ನಲ್ಲಿ ಭಾರತದ ಸೋಲಿನ ಬಳಿಕ ಶಾಸ್ತ್ರಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅರ್ಷದೀಪ್ ಸಿಂಗ್ ಉತ್ತಮ ಪ್ರದರ್ಶನ ನೀಡಿದ್ದರು.


ಸ್ಟಾರ್ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಶಾಸ್ತ್ರಿ, “ಇಬ್ಬರು ಬೌಲರ್‌ಗಳು - ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್, ಸಾಕಷ್ಟು ಅನುಭವವನ್ನು ಹೊಂದಿದ್ದರು. ಆದರೆ ಈ ಟೆಸ್ಟ್ ಪಂದ್ಯದಲ್ಲಿ ನಾವು ಮೊಹಮ್ಮದ್ ಶಮಿಯನ್ನು ತುಂಬಾ ಮಿಸ್ ಮಾಡಿಕೊಂಡೆವು. ಶಾರ್ದೂಲ್‌ಗೆ ಅನುಭವವಿದೆ. ಆದರೆ ಆತ ಮೂರನೇ ವೇಗದ ಬೌಲರ್ ಆಗಲು ಸಾಧ್ಯವಿಲ್ಲ. ಸಾಗರೋತ್ತರ ಪರಿಸ್ಥಿತಿಗಳಲ್ಲಿ ನಿಮಗೆ ನಿಯಮಿತ ಸೀಮರ್ ಅಗತ್ಯವಿದೆ” ಎಂದಿದ್ದಾರೆ.


ಇದನ್ನೂ ಓದಿ:  6 ವರ್ಷ ಕಾದರೂ ಸಿಗದ ಸಿಗದ ಚಾನ್ಸ್… ಟೀಂ ಇಂಡಿಯಾ ಬಿಟ್ಟು ಈ ತಂಡ ಸೇರಿದ ಸ್ಟಾರ್ ಸ್ವಿಂಗ್ ಬೌಲರ್!


ಅರ್ಷದೀಪ್ 12 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು 38 ವಿಕೆಟ್ ಪಡೆದಿದ್ದಾರೆ. ಸರಾಸರಿ 29.97 ಮತ್ತು ಆರ್ಥಿಕ ದರ 3.12 ಆಗಿದೆ. ದೀರ್ಘ ಸ್ಪೆಲ್‌’ಗಳನ್ನು ಬೌಲ್ ಮಾಡುವ ಸಾಮರ್ಥ್ಯವನ್ನೂ ಹೊಂದಿದ್ದಾರೆ.ಇದು ಟೆಸ್ಟ್ ಕ್ರಿಕೆಟ್‌’ನಲ್ಲಿ ಬಹಳ ಮುಖ್ಯ. ಪಂಜಾಬ್ ಪರ ದೇಶೀಯ ಕ್ರಿಕೆಟ್ ಆಡುತ್ತಿರುವ ಅರ್ಷದೀಪ್ ಸಿಂಗ್ ಇತ್ತೀಚೆಗೆ ಇಂಗ್ಲೆಂಡ್‌’ನಲ್ಲಿ ಕೆಂಟ್‌ ಪರ ಕೌಂಟಿ ಚಾಂಪಿಯನ್‌ಶಿಪ್‌’ನಲ್ಲಿ ಐದು ಪಂದ್ಯಗಳನ್ನು ಆಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.