ಟಿ20 ವಿಶ್ವಕಪ್ 2024ರಲ್ಲಿ ವಿರಾಟ್ ಕೊಹ್ಲಿಗೆ ಸಿಗುತ್ತಾ ಸ್ಥಾನ? ಮಾಜಿ ಕೋಚ್ ಸಂಜಯ್ ಬಂಗಾರ್ ಹೇಳಿದ್ದೇನು?
Sanjay Bangar on Virat Kohli: ಮುಂದಿನ ವರ್ಷ ಜೂನ್ 4 ರಿಂದ 30 ರವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಆಡಬೇಕೆಂದು ಭಾರತದ ಮಾಜಿ ಕ್ರಿಕೆಟಿಗ ಮತ್ತು ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಬಲವಾಗಿ ಹೇಳಿದ್ದಾರೆ.
Sanjay Bangar on Virat Kohli: 2022ರ ಟಿ 20 ವಿಶ್ವಕಪ್ ಸೋಲಿನ ನಂತರ ವಿರಾಟ್ ಕೊಹ್ಲಿ ಭಾರತ ಟಿ 20 ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೆ, ಮುಂದಿನ ವರ್ಷ ಜೂನ್ 4 ರಿಂದ 30 ರವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಆಡಬೇಕೆಂದು ಭಾರತದ ಮಾಜಿ ಕ್ರಿಕೆಟಿಗ ಮತ್ತು ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಬಲವಾಗಿ ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್ 'ಕ್ರಿಕೆಟ್ ಬಸು'ಗೆ ಸಂದರ್ಶನ ನೀಡುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ನಿವೃತ್ತಿ ಹಿಂಪಡೆದು ವಿಶ್ವಕಪ್’ನಲ್ಲಿ ಸ್ಥಾನ ಪಡೆದ ಜಗತ್ತಿನ ಶ್ರೇಷ್ಠ ಆಲ್’ರೌಂಡರ್! ಈತ ಧೋನಿಗೆ ಗೆಳೆಯ-ಕೊಹ್ಲಿಗೆ ಶತ್ರು!
“ಶೇಕಡ 100ರಷ್ಟು ಕೊಹ್ಲಿ ಟಿ20 ತಂಡದಲ್ಲಿ ಇರಬೇಕು. ಕಳೆದ ಟಿ20 ವಿಶ್ವಕಪ್ ಮತ್ತು ಆ ನಿಕಟ ಪಂದ್ಯಗಳಲ್ಲಿ ಅವರು ಏನು ಮಾಡಿದರು, ಅವರು ಟಿ20 ಕ್ರಿಕೆಟ್ ಮತ್ತು ಮುಂದಿನ ವರ್ಷದ ಟಿ20 ವಿಶ್ವಕಪ್‌ನಲ್ಲಿ ಏಕೆ ಆಡುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ಭಾವನೆಗಳು ಹೆಚ್ಚಾಗುವ ದೊಡ್ಡ ಸಂದರ್ಭಗಳಲ್ಲಿ, ಒಂದು ಸಣ್ಣ ತಪ್ಪು ನಿಮಗೆ ತುಂಬಾ ದುಬಾರಿಯಾಗಬಹುದು ಎಂದು ನಿಮಗೆ ತಿಳಿದಿದೆ. ಅಂತಹ ಸಂದರ್ಭಗಳನ್ನು ಎದುರಿಸಿದ ದೊಡ್ಡ ಆಟಗಾರರು ನಿಮಗೆ ಬೇಕು. ಆ ಸಮಯದಲ್ಲಿ, ನಿಮ್ಮ ಸ್ಟ್ರೈಕ್-ರೇಟ್ ಏನು ಅಥವಾ ನೀವು ಐಪಿಎಲ್’ನಲ್ಲಿ ಏನು ಮಾಡಿದ್ದೀರಿ ಎಂಬುದು ಮುಖ್ಯವಲ್ಲ. ವಿಶ್ವ ಪಂದ್ಯಗಳಲ್ಲಿ ದೊಡ್ಡ ಪಂದ್ಯಗಳನ್ನು ಆಡಿರುವ ಆಟಗಾರರು ಬೇಕಾಗುತ್ತಾರೆ. ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಅವರು (ಕೊಹ್ಲಿ) ಸ್ಪೂರ್ತಿದಾಯಕ ಪಂದ್ಯವನ್ನಾಗಿ ನಮಗೆಲ್ಲಾ ತಿಳಿದಿದೆ” ಎಂದು ಬಂಗಾರ್ ಹೇಳಿದ್ದಾರೆ.
ರೈಲ್ವೇಸ್‌ನ ಮಾಜಿ ನಾಯಕ ಮತ್ತು ಆಲ್‌ರೌಂಡರ್ ಬಂಗಾರ್ ಅವರು ಉನ್ನತ ಮಟ್ಟದಲ್ಲಿ ಬ್ಯಾಟಿಂಗ್ ಮಾಡುವುದು ಕೇವಲ ಬೌಂಡರಿ ಮತ್ತು ಸಿಕ್ಸರ್’ಗಳನ್ನು ಹೊಡೆಯುವುದಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. “ಪ್ರತಿಯೊಬ್ಬರೂ ಒಂದೊಂದು ರೀತಿಯ ಸ್ಕೋರ್ ಮಾಡುವ ಶೈಲಿಯನ್ನು ಹೊಂದಿದ್ದಾರೆ. ಹಾಗಂತ ದೊಡ್ಡ ಹಿಟ್ಟರ್’ಗಳು ಮಾತ್ರ ಪಂದ್ಯಗಳನ್ನು ಗೆಲ್ಲಿಸುರೆ ಎಂದು ಅರ್ಥವಲ್ಲ. ಇದೇ ಆಗಿದ್ದರೆ ವೆಸ್ಟ್ ಇಂಡೀಸ್ ತಂಡ ಎಲ್ಲಾ ಟಿ20 ವಿಶ್ವಕಪ್ ಗೆದ್ದು ಬೀಗುತ್ತಿತ್ತು. ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸದೆಯೂ ಶತಕ ಸಿಡಿಸಬಲ್ಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ಅಂತಹ ಸಾಧನೆ ಮಾಡಿದ್ದಾರೆ. ಅವರು ಗುಜರಾತ್ ಟೈಟಾನ್ಸ್ ವಿರುದ್ಧ ಒಂದೇ ಒಂದು ಸಿಕ್ಸರ್ ಬಾರಿಸಲಿಲ್ಲ, ಆದರೂ ಶತಕ ಗಳಿಸಿದರು” ಎಂದರು.
ಇದನ್ನೂ ಓದಿ:32ರ ಹರೆಯದಲ್ಲೇ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ಬೌಲರ್!
ವಿರಾಟ್ ಕ್ರಿಕೆಟ್ ದಂತಕಥೆ ಮತ್ತು ಅವರ ನಿಲುವಿನಿಂದಾಗಿ ಜನರು ಅವರೊಂದಿಗೆ ವಿಶೇಷ ರೀತಿಯಲ್ಲಿ ಸಂಪರ್ಕ ಹೊಂದಿದ್ದಾರೆ ಎಂದು ಹೇಳಿದರು. ಬಂಗಾರ್ ಮಾತು ಮುಂದುವರೆಸಿ, “ಕಪಿಲ್ ದೇವ್, ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರಂತಹ ಕ್ರಿಕೆಟಿಗರಿಂದ ವಿರಾಟ್ ಸ್ಫೂರ್ತಿ ಪಡೆದಿದ್ದಾರೆ. ಆಸ್ಟ್ರೇಲಿಯಾವನ್ನು ಅವರ ನೆಲದಲ್ಲಿ ಸೋಲಿಸಿದ್ದು ವಿರಾಟ್ ಕೊಹ್ಲಿ ನಾಯಕತ್ವದ ತಂಡದ ದೊಡ್ಡ ಸಾಧನೆಯಾಗಿದೆ. ಪ್ರತಿ ಇಂಚಿಗೂ ಹೋರಾಡುವ ಅವರ ನಾಯಕತ್ವ ಶೈಲಿ ಮತ್ತು ಅವರ ಬ್ಯಾಟಿಂಗ್ ಕೌಶಲ್ಯಗಳು ಅವರನ್ನು ವಿಶೇಷ ಕ್ರಿಕೆಟಿಗನನ್ನಾಗಿ ಮಾಡಿದೆ” ಎಂದು ಕೊಂಡಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ