IPL 2024, Rohit Sharma: ಐಪಿಎಲ್ ಲೀಗ್ ಅನ್ನು ಯೂತ್ ಲೀಗ್ ಅಂತಲೂ ಕರೆಯುವುದುಂಟು. ಈ ಲೀಗ್‌’ನಿಂದ ಪ್ರಸಿದ್ಧರಾದ ಅನೇಕ ಆಟಗಾರರಿದ್ದಾರೆ. ಇದರಲ್ಲಿ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ರಿಷಬ್ ಪಂತ್ ಮುಂತಾದ ಅನೇಕ ದಂತಕಥೆಗಳ ಹೆಸರು ಇವೆ,


COMMERCIAL BREAK
SCROLL TO CONTINUE READING

ಅಂದಹಾಗೆ ಈ ಲೀಗ್‌ನ 17 ನೇ ಸೀಸನ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಇದಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದೊಡ್ಡ ಸಮಸ್ಯೆಯಾಗಿ ಉಳಿದಿದ್ದಾರೆ. ಮುಂಬೈ ಇಂಡಿಯನ್ಸ್ ಅವರನ್ನು 17 ನೇ ಸೀಸನ್‌ಗೆ ಮೊದಲು ನಾಯಕತ್ವದಿಂದ ತೆಗೆದುಹಾಕಿದ್ದು, ಹಾರ್ದಿಕ್ ಪಾಂಡ್ಯಗೆ ಆ ಸ್ಥಾನವನ್ನು ನೀಡಲಾಗಿದೆ. ಕಳೆದ 10 ವರ್ಷಗಳಿಂದ ಮುಂಬೈ ತಂಡದ ನಾಯಕರಾಗಿ ಬಾಂಧವ್ಯ ಹೊಂದಿದ್ದ ರೋಹಿತ್ ಕೆಲವು ಆಟಗಾರರನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಬಹಿರಂಗವಾಗಿ ಮಾತನಾಡಿದ್ದಾರೆ.


ಇದನ್ನೂ ಓದಿ: 10 ವರ್ಷಗಳ ಬಳಿಕ ಹೋಳಿ ಹುಣ್ಣಿಮೆಯಂದೇ ರಾಜಯೋಗ: ಈ 3 ರಾಶಿಗೆ ಸುವರ್ಣಯುಗ ಶುರು, ಸರ್ಕಾರಿ ವೃತ್ತಿ ಜೊತೆ ಪ್ರಮೋಷನ್ ಪಕ್ಕಾ!


ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ತಮ್ಮ ಬೌಲಿಂಗ್‌’ನಿಂದ ದೊಡ್ಡ ದಿಗ್ಗಜರನ್ನು ಮಂಡಿಯೂರುವಂತೆ ಮಾಡಿದ್ದಾರೆ. ಇದೇ ಕಾರಣದಿಂದ ಅವರನ್ನು ಡೆತ್ ಓವರ್ ಸ್ಪೆಷಲಿಸ್ಟ್ ಎಂದೂ ಸಹ ಕರೆಯಲಾಗುತ್ತದೆ. ರೋಹಿತ್ ಮತ್ತು ಮುಂಬೈ ಫ್ರಾಂಚೈಸಿ ಈ ಬೌಲರ್ ಅನ್ನು ಸ್ಟಾರ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.


ಇನ್ನು ಜಿಯೋ ಸಿನಿಮಾದ ಲೆಜೆಂಡ್ಸ್ ಲಾಂಜ್ ಶೋನಲ್ಲಿ ಮಾತನಾಡಿದ ಪಾರ್ಥಿವ್ ಪಟೇಲ್, 'ರೋಹಿತ್ ಯಾವಾಗಲೂ ಆಟಗಾರರೊಂದಿಗೆ ಇರುತ್ತಾರೆ, ಇದಕ್ಕೆ ದೊಡ್ಡ ಉದಾಹರಣೆ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ. ಬುಮ್ರಾ 2014 ರಲ್ಲಿ ಮೊದಲ ಬಾರಿಗೆ ಮುಂಬೈ ಸೇರಿದ್ದರು. ಆದರೆ 2015 ರಲ್ಲಿ ಮೊದಲ ಪಂದ್ಯವನ್ನಾಡಿದಾಗ ಅವರ ಫಾರ್ಮ್ ಚೆನ್ನಾಗಿ ಇರಲಿಲ್ಲ. ಹೀಗಾಗಿ ರಿಲೀಸ್ ಮಾಡುವ ಹಂತಕ್ಕೆ ಬಂದಿದ್ದರು. ಆದರೆ ಸ್ವತಃ ರೋಹಿತ್ ಅವರು ಅವಕಾಶ ನೀಡಿ ತಂಡದಲ್ಲಿ ಉಳಿಸಿಕೊಂಡರು. ಅದಾದ ಬಳಿಕ ಅಂದರೆ 2016 ರಿಂದ ಬುಮ್ರಾ ಪ್ರದರ್ಶನವು ಹೇಗೆ ಇತ್ತು ಎಂಬುದನ್ನು ನೀವೇ ನೋಡಿದ್ದೀರಿ” ಎಂದು ಹೇಳಿದ್ದಾರೆ.


ಹಾರ್ದಿಕ್ ಪಾಂಡ್ಯ ಬಗ್ಗೆಯೂ ಮಾತನಾಡಿದ ಅವರು, “ಪಾಂಡ್ಯ ವಿಷಯದಲ್ಲೂ ಅದೇ ಆಗಿದ್ದು. 2015 ರಲ್ಲಿ ಬಂದಾಗ ಸಾಕಷ್ಟು ಸುದ್ದಿಯಲ್ಲಿದ್ದರು. ಆದರೆ 2016 ರಲ್ಲಿ ಫಾರ್ಮ್ ಕಳಪೆ ಮಟ್ಟಕ್ಕೆ ಹೋಗಿತ್ತು. ವಿಷಯವೆಂದರೆ ಒಂದು ವೇಳೆ ನೀವು ಅನ್‌ಕ್ಯಾಪ್ಡ್ ಆಟಗಾರರಾಗಿದ್ದರೆ, ಫ್ರಾಂಚೈಸಿಗಳು ನಿಮ್ಮನ್ನು ತಕ್ಷಣವೇ ಬಿಡುಗಡೆ ಮಾಡುತ್ತವೆ. ಅಥವಾ ಆಟಗಾರನು ರಣಜಿ ಟ್ರೋಫಿ ಅಥವಾ ಇತರ ದೇಶೀಯ ಪಂದ್ಯಗಳಲ್ಲಿ ಹೇಗೆ ಪ್ರದರ್ಶನ ನೀಡುತ್ತಾನೆ ಎಂಬುದನ್ನು ಕೂಡ ಪರಿಗಣಿಸುತ್ತವೆ. ಇನ್ನು ಈ ಸಂದರ್ಭದಲ್ಲಿ ರೋಹಿತ್ ಪಾಂಡ್ಯಗಾಗಿ ಪಟ್ಟು ಹಿಡಿದಿದ್ದರು” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಮೇಲೂ ನಟಿಯ ಜೊತೆ ಡೇಟಿಂಗ್! ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಟೀಂ ಇಂಡಿಯಾದ ಅಗ್ರೆಸ್ಸಿವ್ ನಾಯಕನೀತ!


‘ಜೋಸ್ ಬಟ್ಲರ್ ಆರಂಭದಲ್ಲಿ ಮುಂಬೈಗೆ ಬಂದಾಗ ಬ್ಯಾಟಿಂಗ್ ಮಾಡುತ್ತಿದ್ದರು. ರೋಹಿತ್ ಶರ್ಮಾ ಓಪನಿಂಗ್ ಮಾಡಿದರು. 2017 ರಲ್ಲಿ, ಬಟ್ಲರ್ ಉತ್ತಮವಾಗಿ ಓಪನಿಂಗ್ ಮಾಡಬಹುದು ಎಂದೆನಿಸಿ, ತಮ್ಮ ಸ್ಥಾನವನ್ನು ಅವರಿಗೆ ಬಿಟ್ಟುಕೊಟ್ಟಿದ್ದರು ರೋಹಿತ್. ನಾನು ಬಟ್ಲರ್ ಜೊತೆ ಓಪನಿಂಗ್ ಮಾಡುತ್ತಿದ್ದೆ. ಅಲ್ಲಿಂದಲೇ ಅವರ ವೃತ್ತಿ ಜೀವನ ಬದಲಾಗತೊಡಗಿತು” ಎಂದು ಪಾರ್ಥೀವ್ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.