ಹುಡುಗಿಯಾಗಿ ಬದಲಾದ ಖ್ಯಾತ ಕ್ರಿಕೆಟರ್.. ಶಾಕ್ನಲ್ಲಿ ಫ್ಯಾನ್ಸ್! ಇವರ ತಂದೆಯೂ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ
Sanjay Bangar son recently made a hormone transition: ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರ ಆರ್ಯನ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
Sanjay Bangar son recently made a hormone transition: ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರ ಆರ್ಯನ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಕ್ರಿಕೆಟಿಗ ಸಂಜಯ್ ಬಂಗಾರ್ 12 ಟೆಸ್ಟ್, 15 ಏಕದಿನ ಪಂದ್ಯಗಳನ್ನು ಟೀಮ್ ಇಂಡಿಯಾ ಪರ ಆಡಿದ್ದಾರೆ. ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿಯೂ ಸಂಜಯ್ ಬಂಗಾರ್ ಕರ್ತವ್ಯ ನಿರ್ವಹಿಸಿದ್ದರು. ಆರ್‌ಸಿಬಿ ತಂಡದ ಮುಖ್ಯ ಕೋಚ್ ಆಗಿಯೂ ಸಂಜಯ್ ಬಂಗಾರ ಕಾರ್ಯ ನಿರ್ವಹಿಸಿದ್ದರು.
ಸಂಜಯ್ ಬಂಗಾರ್ ಅವರ ಮಗ ಆರ್ಯನ್ ಕೂಡ ಕ್ರಿಕೆಟ್ ಆಡುತ್ತಿದ್ದರು. ಹಾರ್ಮೋನ್ ರಿಪ್ಲೇಸ್‌ಮೆಂಟ್ ಶಸ್ತ್ರ ಚಿಕಿತ್ಸೆಗೆ ಆರ್ಯನ್ ಒಳಗಾಗಿದ್ದು, ಹುಡುಗನಿಂದ ಹುಡುಗಿಯಾಗಿ ಬದಲಾಗಲು ತಮ್ಮ ಕ್ರಿಕೆಟ್ ಕರಿಯರ್ ಅನ್ನೇ ತ್ಯಾಗ ಮಾಡಿದ್ದಾರೆ. ಹಾರ್ಮೋನ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆಗೆ ಆರ್ಯನ್ ಒಳಗಾಗಿದ್ದು ಟ್ರಾನ್ಸ್‌ಪರ್ಸನ್ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ.
ಶಸ್ತ್ರಚಿಕಿತ್ಸೆಯ 10 ತಿಂಗಳ ನಂತರ ಕ್ರಿಕೆಟಿಗ ಆರ್ಯನ್ ತಮ್ಮ ಹೆಸರನ್ನು ಅನಯಾ ಎಂದು ಬದಲಾಯಿಸಿಕೊಂಡಿದ್ದು ಫ್ಯಾನ್ಸ್ ಶಾಕ್ ಆಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ತಮ್ಮಲ್ಲಿ ಆಗಿರುವ ಬದಲಾವಣೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಂಜಯ್ ಬಂಗಾರ್ ಹುಡುಗನಿಂದ ಹುಡುಗಿಯಾಗಿ ಬದಲಾಗಿದ್ದಾರೆ.
ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ವೃತ್ತಿಪರವಾಗಿ ಕ್ರಿಕೆಟ್ ಆಡುವ ನನ್ನ ಕನಸನ್ನು ನನಸಾಗಿಸಿಕೊಳ್ಳುವುದು ಸುಲಭದ ಹಾದಿಯಾಗಿರಲಿಲ್ಲ. ತ್ಯಾಗ, ಪರಿಶ್ರಮ ಮತ್ತು ಅಚಲ ಸಮರ್ಪಣೆಯಿಂದ ತುಂಬಿದ ಪ್ರಯಾಣವಾಗಿದೆ. ಮುಂಜಾನೆದ್ದು ವರ್ಕೌಟ್‌ಗೆ ಹೋಗುವುದರಿಂದ ಹಿಡಿದು ಇತರರ ಅನುಮಾನ, ತೀರ್ಪುಗಳನ್ನು ಎದುರಿಸುವವರೆಗೆ ಪ್ರತಿ ಹೆಜ್ಜೆಯಲ್ಲೂ ಶಕ್ತಿ ಬೇಕಿತ್ತು ಎಂದು ಹೇಳಿದ್ದಾರೆ.
ಕ್ರೀಡೆಯನ್ನು ಮೀರಿ, ನನಗೆ ಮತ್ತೊಂದು ಪ್ರಯಾಣವಿದೆ. ಸ್ವಯಂ ಅನ್ವೇಷಣೆ ಮತ್ತು ಅನೇಕ ಸವಾಲುಗಳನ್ನು ಎದುರಿಸುವ ಮಾರ್ಗ. ನನ್ನ ನಿಜವಾದ ಆತ್ಮವನ್ನು ಅಳವಡಿಸಿಕೊಳ್ಳುವುದು ಎಂದರೆ ಕಠಿಣ ಆಯ್ಕೆಗಳನ್ನು ಮಾಡುವುದು. ಎಲ್ಲ ಸೌಕರ್ಯವನ್ನು ತ್ಯಜಿಸುವುದು ಮತ್ತು ನಾನು ಯಾರೆಂಬುದಕ್ಕಾಗಿ ನಿಲ್ಲುವುದು ಸುಲಭವಲ್ಲ ಎಂದು ಹೇಳಿದ್ದಾರೆ.
ಆರ್ಯನ್ ತಮ್ಮ ಜೆಂಡರ್ ಬದಲಾಯಿಸುವ ಮೂಲಕ ಅನಾಯಾ ಆಗಿದ್ದಾರೆ. ಪ್ರಸ್ತುತ, ಅನಯಾ ಮ್ಯಾಂಚೆಸ್ಟರ್‌ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿನ ಕೌಂಟಿ ಕ್ಲಬ್‌ಗಾಗಿ ಆಡುತ್ತಿದ್ದಾರೆ.
ಸಂಜಯ್ ಬಂಗಾರ್ ಯಾರು?
ಅನಯಾ ಅವರ ತಂದೆ ಸಂಜಯ್ ಬಂಗಾರ್ 2014 ರಿಂದ 2018 ರವರೆಗೆ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿದ್ದರು. ಮೊದಲು ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿದ್ದರು ಮತ್ತು ನಂತರ ರವಿಶಾಸ್ತ್ರಿ. ಅವರು ಟೀಮ್ ಇಂಡಿಯಾ ಪರ 12 ಟೆಸ್ಟ್ ಮತ್ತು 15 ODI ಪಂದ್ಯಗಳಿಗೆ ತಂಡವನ್ನು ಮುನ್ನಡೆಸಿದರು.
ಬಂಗಾರ್ ಅವರು IPL 2022 ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದರು. ನಂತರ IPL 2023 ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಸೇರಿದ್ದಾರೆ.
ಇದನ್ನೂ ಓದಿ: ಪಾಕ್ ಕ್ರಿಕೆಟಿಗ ಬಾಬರ್ ಅಜಂ ಹೆಸರಲ್ಲಿರೋ ಆ ವಿಶೇಷ ದಾಖಲೆ ಬ್ರೇಕ್ ಮಾಡಲು ರೋಹಿತ್-ಕೊಹ್ಲಿ ನಡುವೆ ನಡೆಯುತ್ತಿದೆ ಮಹಾಯುದ್ಧ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.