ನವದೆಹಲಿ : ಟೀಂ ಇಂಡಿಯಾದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರಿಗೆ ಕೊರೋನಾ ಕೊರೋನಾ ಪಾಸಿಟಿವ್ ಬಂದಿದೆ. ಇಂದು ಹರ್ಭಜನ್ ಅವರು ಮನೆಯಲ್ಲಿ ಸೆಲ್ಫ್ ಕ್ವಾರಂಟೈನ್ ಆಗಿ, ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಹರ್ಭಜನ್(Harbhajan Singh), “ನಾನು ಸೌಮ್ಯ ರೋಗಲಕ್ಷಣಗಳಿಂದ ಪಾಸಿಟಿವ್ ಬಂದಿದೆ. ನಾನು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ ಮತ್ತು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಆದಷ್ಟು ಬೇಗ ತಮ್ಮನ್ನು ಪರೀಕ್ಷಿಸಿಕೊಳ್ಳುವಂತೆ ನಾನು ವಿನಂತಿಸುತ್ತೇನೆ. ದಯವಿಟ್ಟು ಸುರಕ್ಷಿತವಾಗಿರಿ ಮತ್ತು ಕಾಳಜಿ ವಹಿಸಿ ಎಂದು ಟ್ವೀಟ್ ಮಾಡಿದ್ದಾರೆ.


MS Dhoni : ಕೊಹ್ಲಿ ಹಿಡಿದು ಈ 5 ಸ್ಟಾರ್ ಕ್ರಿಕೆಟಿಗರ ವೃತ್ತಿಜೀವ ರೂಪಿಸಿದ ಎಂಎಸ್ ಧೋನಿ!  


ಕಳೆದ ವರ್ಷ ಡಿಸೆಂಬರ್‌ನಲ್ಲಿ ಹರ್ಭಜನ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ(Retirement from all forms of cricket) ಘೋಷಿಸಿದ್ದರು. 41 ವರ್ಷ ವಯಸ್ಸಿನ ಹರ್ಭಜನ್ ಮೆನ್-ಇನ್-ಬ್ಲೂಗಾಗಿ 103 ಟೆಸ್ಟ್, 236 ODI ಮತ್ತು 28 T20I ಮ್ಯಾಚ್ ಗಳನ್ನ ಆಡಿದ್ದಾರೆ. ಅವರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ 294 ವಿಕೆಟ್‌ಗಳನ್ನು ಪಡೆದಿದ್ದಾರೆ.


ಅವರು 2015 ರಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಕೊನೆಯ ರೆಡ್-ಬಾಲ್ ಪಂದ್ಯವನ್ನು ಆಡಿದರು, ಅದೇ ವರ್ಷದಲ್ಲಿ ಅವರ ಕೊನೆಯ ODI ದಕ್ಷಿಣ ಆಫ್ರಿಕಾ ವಿರುದ್ಧವಾಗಿತ್ತು. 2016 ರ ಏಷ್ಯಾ ಕಪ್‌ನಲ್ಲಿ ಯುಎಇ ವಿರುದ್ಧದ ಟಿ 20 ಐ ಭಾರತಕ್ಕಾಗಿ ಅವರ ಕೊನೆಯ ಪಂದ್ಯವಾಗಿತ್ತು. ಅಂದಿನಿಂದ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ.


ಹರ್ಭಜನ್(Harbhajan Singh) 103 ಟೆಸ್ಟ್‌ಗಳಲ್ಲಿ 32.46 ಸರಾಸರಿಯಲ್ಲಿ 417 ವಿಕೆಟ್‌ಗಳನ್ನು ಪಡೆದ ನಂತರ ನಿವೃತ್ತರಾದರು. 2007 ರ T20 ವಿಶ್ವಕಪ್ ಮತ್ತು 2011 ರ ವಿಶ್ವಕಪ್ ವಿಜೇತರು ಟೆಸ್ಟ್ ಹ್ಯಾಟ್ರಿಕ್ ಪಡೆದ ಮೊದಲ ಭಾರತೀಯರಾಗಿದ್ದಾರೆ.


ಇದನ್ನೂ ಓದಿ : T20 World Cup 2022: ಟಿ20 ವಿಶ್ವಕಪ್ 2022ರ ವೇಳಾಪಟ್ಟಿ ಪ್ರಕಟ, ಈ ದಿನ ನಡೆಯಲಿದೆ IND vs PAK ಪಂದ್ಯ


ಒಟ್ಟಾರೆಯಾಗಿ, ಜಲಂಧರ್ ಮೂಲದ ಕ್ರಿಕೆಟಿಗ ಹರ್ಭಜನ್ 367 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, 711 ಅಂತರಾಷ್ಟ್ರೀಯ ವಿಕೆಟ್ಗಳನ್ನು ಪಡೆದಿದ್ದಾರೆ ಮತ್ತು 3,569 ಅಂತರಾಷ್ಟ್ರೀಯ ರನ್ಗಳನ್ನು ಗಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.