UAE ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಟೀಂ ಇಂಡಿಯಾದ ದಿಗ್ಗಜ ನೇಮಕ: ವಿಶ್ವಕಪ್’ನಲ್ಲಿ ಸಂಚಲನ ಸೃಷ್ಟಿಸಿದ್ದ ಕ್ರಿಕೆಟಿಗನೀತ!
UAE Coach Lalchand Rajput: ಮುಖ್ಯ ತರಬೇತುದಾರರಾಗಿ ಅವರ ಮೊದಲ ಜವಾಬ್ದಾರಿಯು ICC ಕ್ರಿಕೆಟ್ ವಿಶ್ವಕಪ್ ಲೀಗ್ 2 ತ್ರಿಕೋನ ಸರಣಿಯಾಗಿದೆ. ಇದರಲ್ಲಿ ಸ್ಕಾಟ್ಲೆಂಡ್ ಮತ್ತು ಕೆನಡಾ ತಂಡಗಳು ಇರಲಿದ್ದು, ಫೆಬ್ರವರಿ 28 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ಆಯೋಜಿಸುತ್ತಿದೆ.
UAE Coach Lalchand Rajput: ಭಾರತದ ಮಾಜಿ ಕ್ರಿಕೆಟಿಗ ಲಾಲ್ ಚಂದ್ ರಜಪೂತ್ ಅವರನ್ನು ಮೂರು ವರ್ಷಗಳ ಕಾಲ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪುರುಷರ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಈ ಮೂಲಕ ಪಾಕಿಸ್ತಾನದ ಮುದಸ್ಸರ್ ನಜರ್ ಬದಲಿಗೆ ಲಾಲ್ ಚಂದ್ ರಜಪೂತ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮುಖ್ಯ ತರಬೇತುದಾರರಾಗಿ ಅವರ ಮೊದಲ ಜವಾಬ್ದಾರಿಯು ICC ಕ್ರಿಕೆಟ್ ವಿಶ್ವಕಪ್ ಲೀಗ್ 2 ತ್ರಿಕೋನ ಸರಣಿಯಾಗಿದೆ. ಇದರಲ್ಲಿ ಸ್ಕಾಟ್ಲೆಂಡ್ ಮತ್ತು ಕೆನಡಾ ತಂಡಗಳು ಇರಲಿದ್ದು, ಫೆಬ್ರವರಿ 28 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ಆಯೋಜಿಸುತ್ತಿದೆ. ಇದಾದ ಬಳಿಕ ಮುಂದಿನ ತಿಂಗಳು ಸ್ಕಾಟ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿ ನಡೆಯಲಿದೆ.
ಇದನ್ನೂ ಓದಿ: “ಟ್ರೋಫಿ ಗೆದ್ದರೆ 1 ಕೋಟಿ ನಗದು ಜೊತೆ ಬಿಎಂಡಬ್ಲ್ಯು ಕಾರು”- ಕ್ರಿಕೆಟಿಗರಿಗೆ ವಿಶೇಷ ಘೋಷಣೆ
ಈ ವರ್ಷ ಅಮೆರಿಕ ಮತ್ತು ವೆಸ್ಟ್ ಇಂಡೀಸ್’ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್’ಗೆ ಯುಎಇ ಅರ್ಹತೆ ಪಡೆಯಲು ವಿಫಲವಾದ ನಂತರ 62 ವರ್ಷದ ರಜಪೂತ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡುವುದಾಗಿ ಘೋಷಿಸಲಾಯಿತು. ಭಾರತದ ಪರ ಎರಡು ಟೆಸ್ಟ್ ಮತ್ತು ನಾಲ್ಕು ಏಕದಿನ ಪಂದ್ಯಗಳನ್ನು ರಜಪೂತ್ ಆಡಿದ್ದಾರೆ.
ಲಾಲಚಂದ್ ರಜಪೂತ್ ಹೇಳಿಕೆ ನೀಡಿ, “ನಿರಂತರವಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡವನ್ನು ಮುನ್ನಡೆಸುವುದು ನನ್ನ ಗುರಿಯಾಗಿದೆ. ನಾನು ಅವರನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕು. ತಂಡವು ಕೂಡ ಸಂಪೂರ್ಣವಾಗಿ ಸಮರ್ಥವಾಗಿದೆ ಎಂಬ ವಿಶ್ವಾಸವಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಈ ರೀತಿ ಈರುಳ್ಳಿಯನ್ನು ಸಂಗ್ರಹಿಸಿಡಿ… ತಿಂಗಳವರೆಗೆ ತಾಜಾವಾಗಿರುತ್ತೆ!
ಲಾಲ್ ಚಂದ್ ರಜಪೂತ್ ಭಾರತದ ಕೋಚ್ ಆಗಿದ್ದಾಗ, ತಂಡವು 2007 ರಲ್ಲಿ ಮೊದಲ ಟಿ20 ವಿಶ್ವಕಪ್ ಅನ್ನು ಗೆದ್ದುಕೊಂಡಿತು. 2016-17 ರ ನಡುವೆ ಅಫ್ಘಾನಿಸ್ತಾನದ ಕೋಚ್ ಆಗಿದ್ದರು. ಈ ಸಮಯದಲ್ಲಿ ಐಸಿಸಿ ಈ ದೇಶಕ್ಕೆ ಟೆಸ್ಟ್ ಸ್ಥಾನಮಾನವನ್ನು ನೀಡಿತ್ತು. ಕೋಚ್ ಆಗಿ ಅವರ ಹಿಂದಿನ ಅವಧಿ ಜಿಂಬಾಬ್ವೆ (2018-22) ಜೊತೆಯಾಗಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.