Piyush Chawla Rohit Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಗ್ಗೆ ಅದೆಷ್ಟೋ ಕ್ರಿಕೆಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಇದೇ ರೋಹಿತ್ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ 2024 ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಷ್ಟೇ ಅಲ್ಲದೆ, 2023 ರ ODI ವಿಶ್ವಕಪ್‌ʼನ ಫೈನಲ್‌ʼವರೆಗಿನ ಪ್ರಯಾಣವನ್ನು ಸಹ ಒಳಗೊಂಡಿದೆ. ಇನ್ನು ರೋಹಿತ್ ತಮ್ಮ ಸಹ ಆಟಗಾರರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂಬುದು ಅನೇಕ ಬಾರಿ ಬಹಿರಂಗವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಹಣ್ಣು ತಿಂದರೆ ಸಾಕು ಎಷ್ಟೇ ಮಂದದೃಷ್ಟಿಯಿದ್ದರೂ ಕಣ್ಣು ಶಾರ್ಪ್‌ ಆಗುತ್ತೆ!


ಇತ್ತೀಚೆಗಷ್ಟೇ ಭಾರತದ ಮಾಜಿ ಕ್ರಿಕೆಟಿಗ ಪಿಯೂಷ್ ಚಾವ್ಲಾ ರೋಹಿತ್ ಬಗ್ಗೆ ಮಹತ್ವದ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ರೋಹಿತ್ ತಂಡಕ್ಕಾಗಿ ಹೇಗೆ ಯೋಚಿಸುತ್ತಾರೆ ಎಂಬುದನ್ನು ಚಾವ್ಲಾ ಹೇಳಿದ್ದಾರೆ.


ರೋಹಿತ್ ಬಗ್ಗೆ ಪಿಯೂಷ್ ಚಾವಲ್ ಮಾತನಾಡಿದ್ದು, "ರಾತ್ರಿ 2.30 ರ ಸುಮಾರಿಗೆ ಅವರು ನನಗೆ ಒಮ್ಮೆ ಮೆಸೇಜ್‌ ಕಳುಹಿಸಿ ರೂಂಗೆ ಬನ್ನಿ ಎಂದರು. ಅಲ್ಲಿ ಪೇಪರ್ ಮೇಲೆ ಪಿಚ್ ಮಾಡುವ ಮೂಲಕ ಫೀಲ್ಡಿಂಗ್ ಹೊಂದಿಸುವ ಕುರಿತು ಅವರು ನನ್ನೊಂದಿಗೆ ಮಾತನಾಡಿದರು" ಎಂದಿದ್ದಾರೆ.


"ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುವ ರೀತಿ ಎಲ್ಲವನ್ನೂ ಮುಂಚಿತವಾಗಿ ಹೊಂದಿಸುತ್ತಾರೆ. ಅವರ ಜತೆ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ನಾವು ಕೇವಲ ಮೈದಾನದಲ್ಲಿ ಭೇಟಿಯಾಗುವುದಿಲ್ಲ, ಬದಲಾಗಿ ಚರ್ಚೆಗಳು ಮೈದಾನದ ಹೊರಗೆ ಅಥವಾ ತಂಡದ ಕೊಠಡಿಯಲ್ಲಿ ನಡೆಯುತ್ತವೆ" ಎಂದಿದ್ದಾರೆ.


ಇದನ್ನೂ ಓದಿ: ಬ್ಯಾಟರ್‌ ಸುತ್ತುವರೆದ 10 ಆಟಗಾರರು... ಹತ್ತೇ ನಿಮಿಷಕ್ಕೆ ಮುಗಿಯಿತು ಮ್ಯಾಚ್!!‌


ರೋಹಿತ್ ಮತ್ತು ಪಿಯೂಷ್ ಚಾವ್ಲಾ ಸಾಕಷ್ಟು ಪಂದ್ಯಗಳನ್ನು ಒಟ್ಟಿಗೆ ಆಡಿದ್ದಾರೆ. ಮುಖ್ಯವಾಗಿ ಮುಂಬೈ ಇಂಡಿಯನ್ಸ್ ಪರ ಒಟ್ಟಿಗೆ ಆಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ