Javed Miandad: ಪಾಕಿಸ್ತಾನದ ಅನುಭವಿ ಬ್ಯಾಟ್ಸ್‌ ಮನ್ ಜಾವೇದ್ ಮಿಯಾಂದಾದ್ ಮತ್ತೊಮ್ಮೆ ಭಾರತದ ಬಗ್ಗೆ ವಿಷಕಾರಿದ್ದಾರೆ. ಜಾವೇದ್ ಮಿಯಾಂದಾದ್ ಕಾಮೆಂಟ್ ಒಂದನ್ನು ಮಾಡಿದ್ದ, ಇದನ್ನು ಕೇಳಿ ಭಾರತೀಯ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:ಬ್ಯಾಕ್ ಟು ಬ್ಯಾಕ್ 8 ವಿವಾದಕ್ಕೆ ಗುರಿಯಾದ ಸೌರವ್ ಗಂಗೂಲಿ!


“ಭಾರತ ಕ್ರಿಕೆಟ್ ಮಂಡಳಿ (ಬಿಸಿಸಿಐ) ತನ್ನ ತಂಡವನ್ನು ಮೊದಲು ತಮ್ಮ ದೇಶಕ್ಕೆ ಕಳುಹಿಸುವವರೆಗೆ ಪಾಕಿಸ್ತಾನವು ಇತರ ಪಂದ್ಯಗಳನ್ನು ಒಳಗೊಂಡಂತೆ ಈ ವರ್ಷದ ಐಸಿಸಿ ವಿಶ್ವಕಪ್ 2023 ಗಾಗಿ ನೆರೆಯ ದೇಶಕ್ಕೆ ಹೋಗಬಾರದು, ಅದಕ್ಕೆ ಒಪ್ಪಿಗೆ ನೀಡುವುದಿಲ್ಲ” ಎಂದು ಭಾರತದ ವಿರುದ್ಧ ಹೇಳಿಕೆ ನೀಡಿದ್ದಾರೆ.


ಐಸಿಸಿ ಸಿದ್ಧಪಡಿಸಿರುವ ಐಸಿಸಿ ವಿಶ್ವಕಪ್ 2023 ರ ಕರಡು ವೇಳಾಪಟ್ಟಿಯ ಪ್ರಕಾರ, ಪಾಕಿಸ್ತಾನವು ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬಹುನಿರೀಕ್ಷಿತ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ. ಆದರೆ, 66ರ ಹರೆಯದ ಪಾಕಿಸ್ತಾನದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಇಂತಹ ಹೇಳಿಕೆ ನೀಡಿದ್ದಾರೆ. ಜಾವೇದ್ ಮಿಯಾಂದಾದ್, “ಪಾಕಿಸ್ತಾನ 2012 ರಲ್ಲಿ ಮತ್ತು 2016 ರಲ್ಲೂ ಭಾರತಕ್ಕೆ ಹೋಗಿತ್ತು. ಈಗ ಇಲ್ಲಿಗೆ ಬರುವ ಸರದಿ ಭಾರತೀಯರದ್ದಾಗಿದೆ” ಎಂದು ಹೇಳಿದರು.


ಮಾತು ಮುಂದುವರೆಸಿದ ಜಾವೇದ್ ಮಿಯಾಂದಾದ್, “ನಾನು ಯಾವುದೇ ಪಂದ್ಯವನ್ನು ಆಡಲು ಭಾರತಕ್ಕೆ ಹೋಗುವುದಿಲ್ಲ, ವಿಶ್ವಕಪ್ ಕೂಡ. ನಾವು ಅವರೊಂದಿಗೆ (ಭಾರತ) ಆಡಲು ಯಾವಾಗಲೂ ಸಿದ್ಧರಿದ್ದೇವೆ. ಆದರೆ ಅವರು ಎಂದಿಗೂ ಅದೇ ರೀತಿ ಪ್ರತಿಕ್ರಿಯಿಸುವುದಿಲ್ಲ” ಎಂದು ಮಿಯಾಂದಾದ್ ಹೇಳಿದರು.


'ಪಾಕಿಸ್ತಾನದ ಕ್ರಿಕೆಟ್ ವಿಶಾಲವಾಗಿದೆ. ನಾವು ಇನ್ನೂ ಗುಣಮಟ್ಟದ ಆಟಗಾರರನ್ನು ಹೊಂದಿದ್ದೇವೆ. ಹಾಗಾಗಿ ನಾವು ಭಾರತಕ್ಕೆ ಹೋಗದಿದ್ದರೆ ನಮಗೆ ಯಾವುದೇ ವ್ಯತ್ಯಾಸವಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.


ಭಾರತ 2008ರಲ್ಲಿ 50 ಓವರ್‌ ಗಳ ಏಷ್ಯಾಕಪ್‌ ಗಾಗಿ ಕೊನೆಯದಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. ಅಂದಿನಿಂದ, ಉಭಯ ದೇಶಗಳ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳನ್ನು ಸ್ಥಗಿತಗೊಳಿಸಲಾಗಿದೆ. ಕ್ರೀಡೆಯನ್ನು ರಾಜಕೀಯದೊಂದಿಗೆ ಬೆರೆಸಬಾರದು ಎಂದು ಮಿಯಾಂದಾದ್ ನಂಬಿದ್ದಾರೆ. ಜಾವೇದ್ ಮಿಯಾಂದಾದ್, “ಕ್ರಿಕೆಟ್ ಜನರನ್ನು ಹತ್ತಿರ ತರುವ ಮತ್ತು ದೇಶಗಳ ನಡುವಿನ ತಪ್ಪು ತಿಳುವಳಿಕೆ ಮತ್ತು ಕುಂದುಕೊರತೆಗಳನ್ನು ಹೋಗಲಾಡಿಸುವ ಆಟ ಎಂದು ನಾನು ಯಾವಾಗಲೂ ಹೇಳುತ್ತೇನೆ” ಎಂದಿದ್ದಾರೆ.


ಇದನ್ನೂ ಓದಿ: 1000 ಕೋಟಿ ದಾಟಿತು ವಿರಾಟ್ ಆಸ್ತಿ ಮೌಲ್ಯ… ‘ಕಿಂಗ್ ಕೊಹ್ಲಿ’ Instagram ಪೋಸ್ಟ್ ಒಂದಕ್ಕೆ ಎಷ್ಟು ಬೆಲೆ ಗೊತ್ತಾ?


ಮುಂಬರುವ ಏಷ್ಯಾ ಕಪ್ ಅನ್ನು 'ಹೈಬ್ರಿಡ್ ಮಾಡೆಲ್' ಅಡಿಯಲ್ಲಿ ಭಾರತವು ಶ್ರೀಲಂಕಾದಲ್ಲಿ ಆಡುವ ಮೂಲಕ ಆತಿಥ್ಯ ವಹಿಸಲು ಪಾಕಿಸ್ತಾನವನ್ನು ಒತ್ತಾಯಿಸುತ್ತಿರುವ ಸಮಯದಲ್ಲಿ ಮಿಯಾಂದಾದ್ ಅವರ ಈ ಪ್ರತಿಕ್ರಿಯೆ ಬಂದಿದೆ. ಈ ನಿರ್ಧಾರದಿಂದ ಅವರು ಸಂತಸಗೊಂಡಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ