Dean Elgar Announces Retirement From Test: ದಕ್ಷಿಣ ಆಫ್ರಿಕಾದ ಮಾಜಿ ಟೆಸ್ಟ್ ನಾಯಕ ಡೀನ್ ಎಲ್ಗರ್ ಅವರು ಟೆಸ್ಟ್ ಸ್ವರೂಪದಿಂದ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್ ಪಂದ್ಯವನ್ನು ಭಾರತದ ವಿರುದ್ಧ ಆಡಲಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿಶ್ವ ಕ್ರಿಕೆಟ್‌ನಲ್ಲಿ ತಂತ್ರಜ್ಞಾನ ಹಾಗೂ ನಿಯಮ ಬದಲಾವಣೆಗಳ ಪ್ರಕಟಣೆ


ಸುಮಾರು 12 ವರ್ಷಗಳ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 84 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 13 ಶತಕಗಳು ಮತ್ತು 23 ಅರ್ಧ ಶತಕಗಳು ದಾಖಲಾಗಿವೆ. ಎಲ್ಗರ್ ಡಿಸೆಂಬರ್ 26 ರಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯಲ್ಲಿ ಪಂದ್ಯವನ್ನಾಡಲಿದ್ದಾರೆ.


ಕ್ರಿಕ್‌ ಇನ್ಫೋದಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಎಲ್ಗರ್ ಟೆಸ್ಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಕೇಪ್ ಟೌನ್‌’ನಲ್ಲಿ ಭಾರತದ ವಿರುದ್ಧ ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. "ಕ್ರಿಕೆಟ್ ಆಡುವುದು ಒಂದು ಕನಸಾಗಿತ್ತು. ಅದರಲ್ಲೂ ನಮ್ಮ ದೇಶಕ್ಕಾಗಿ ಆಡುವುದು ದೊಡ್ಡ ವಿಷಯ. 12 ವರ್ಷಗಳ ಕಾಲ ದೇಶಕ್ಕಾಗಿ ಆಡುವುದು ದೊಡ್ಡ ಕನಸಿದ್ದಂತೆ. ಕೇಪ್ ಟೌನ್‌’ನಲ್ಲಿ ವೃತ್ತಿಜೀವನದ ಕೊನೆಯ ಟೆಸ್ಟ್ ಪಂದ್ಯವನ್ನು ಆಡಲಿದ್ದೇನೆ. ಇದು ನನ್ನ ನೆಚ್ಚಿನ ಕ್ರೀಡಾಂಗಣ” ಎಂದು ಹೇಳಿದ್ದಾರೆ.


ಎಲ್ಗರ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 84 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ 13 ಶತಕ ಮತ್ತು 23 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇವರ ಅತ್ಯುತ್ತಮ ಟೆಸ್ಟ್ ಸ್ಕೋರ್ 199 ರನ್. ಈ ಸ್ವರೂಪದಲ್ಲಿ 5146 ರನ್ ಗಳಿಸಿದ್ದಾರೆ. ಇನ್ನು ಬೌಲಿಂಗ್‌’ನಲ್ಲಿಯೂ ಕೈಚಳಕ ತೋರಿದ್ದ ಎಲ್ಗರ್, 45 ಟೆಸ್ಟ್ ಇನ್ನಿಂಗ್ಸ್‌’ಗಳಲ್ಲಿ 15 ವಿಕೆಟ್ ಪಡೆದಿದ್ದಾರೆ. ಈ ಅವಧಿಯಲ್ಲಿ ಒಂದು ಇನ್ನಿಂಗ್ಸ್‌’ನಲ್ಲಿ 22 ರನ್‌ಗಳಿಗೆ 4 ವಿಕೆಟ್‌’ಗಳನ್ನು ಕಬಳಿಸಿರುವುದು ಅತ್ಯುತ್ತಮ ಪ್ರದರ್ಶನವಾಗಿದೆ. ಎಲ್ಗರ್ 8 ಏಕದಿನ ಪಂದ್ಯಗಳನ್ನಾಡಿದ್ದರೂ ಸಹ, ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ.


ಇದನ್ನೂ ಓದಿ: ಬೆಂಗಳೂರಿನಲ್ಲಿ ನಡೆದ ದುರ್ಘಟನೆ: ಗ್ಯಾಸ್ ಸೋರಿಕೆಯಾಗಿ ಗರ್ಭಿಣಿ ಸಾವು


ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಮೊದಲ ಪಂದ್ಯ ಡಿಸೆಂಬರ್ 26 ರಿಂದ  ಸೆಂಚುರಿಯನ್‌’ನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜನವರಿ 3 ರಂದು ಕೇಪ್‌ಟೌನ್‌’ನಲ್ಲಿ ನಡೆಯಲಿದೆ. ಇದು ಎಲ್ಗರ್ ವೃತ್ತಿ ಜೀವನದ ಕೊನೆಯ ಪಂದ್ಯವಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.