Paddy Upton: ಭಾರತ ಕ್ರಿಕೆಟ್ ತಂಡದ ಮಾಜಿ ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ಅವರು ತಮ್ಮ 'ದಿ ಬೇರ್‌ಫೂಟ್ ಕೋಚ್' ಪುಸ್ತಕದಲ್ಲಿ ಶಾಕಿಂಗ್‌ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಪಂದ್ಯಕ್ಕೂ ಮುನ್ನ ದೈಹಿಕ ಸಂಬಂಧ ಹೊಂದುವಂತೆ ಭಾರತೀಯ ಆಟಗಾರರಿಗೆ ಸಲಹೆ ನೀಡಿದ್ದೆ ಎಂದು ಪುಸ್ತಕದಲ್ಲಿ ಬರೆದುಕೊಂಡಿದ್ದು, ಆಗಿನ ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ ಅವರ ಮಾತಿನಿಂದ ಕೋಪಗೊಂಡಿದ್ದರು ಎಂದೂ ಸಹ ಉಲ್ಲೇಖಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬೆಳಗಿನ ಜಾವ ಈ ಎಲೆಯನ್ನ ಅರಿದು ರಸ ಮಾಡಿ ಕುಡಿದ್ರೆ ಸೆಕೆಂಡುಗಳಲ್ಲಿ ನಾರ್ಮಲ್‌ ಆಗುತ್ತೆ ಶುಗರ್‌! ಮಾರಕ ಕ್ಯಾನ್ಸರ್‌ ರೋಗವನ್ನೂ ವಾಸಿಮಾಡುವ ಸಂಜೀವಿನಿ ಇದು!!


ಪ್ಯಾಡಿ ಆಪ್ಟನ್ ಅವರು ತಮ್ಮ ‘ದಿ ಬೇರ್‌ಫೂಟ್ ಕೋಚ್’ ಪುಸ್ತಕದಲ್ಲಿಈ ವಿಚಾರದ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ. "ಆ ಸಮಯದಲ್ಲಿ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್ ಅವರಂತಹ ಆಟಗಾರರಿಗೆ ಸಂಪೂರ್ಣ ಮಾಹಿತಿ ಮತ್ತು ಅದರ ಪ್ರಯೋಜನಗಳೊಂದಿಗೆ ಈ ಸಲಹೆಯನ್ನು ನೀಡಿದ್ದೇನೆ" ಎಂದು ಹೇಳಿದ್ದಾರೆ.


2009 ರ ಚಾಂಪಿಯನ್ಸ್ ಟ್ರೋಫಿಗೆ ತಯಾರಿ ನಡೆಸುವಾಗ ಆಟಗಾರರಿಗೆ ಈ ಸಲಹೆಯನ್ನು ನೀಡಿದ್ದರಂತೆ. ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ ಅವರ ನಾಯಕತ್ವದಲ್ಲಿ, ಆಟಗಾರರಿಗೆ ನೀಡಿದ ಈ ಸಲಹೆಗಾಗಿ ಪ್ಯಾಡಿ ಆಪ್ಟನ್ ಕ್ಷಮೆಯಾಚಿಸಬೇಕಾದ ಪರಿಸ್ಥಿತಿ ಕೂಡ ಬಂದಿತ್ತು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಭಾರತದ ಆಟಗಾರರಿಗೆ ಇಂತಹ ಸಲಹೆ ನೀಡಿದ್ದು ತನ್ನ ತಪ್ಪೆಂದು ಪ್ಯಾಡಿ ಒಪ್ಪಿಕೊಂಡಿದ್ದಾರೆ.


ಪ್ಯಾಡಿ ಆಪ್ಟನ್ 2009 ರಲ್ಲಿ ಮೆಂಟಲ್ ಕಂಡೀಷನಿಂಗ್ ಕೋಚ್ ಆಗಿ ನೇಮಕಗೊಂಡಿದ್ದರು. 2011 ರವರೆಗೆ ಈ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದ ಅವರು, ಭಾರತ ಏಕದಿನ ವಿಶ್ವಕಪ್ ಗೆದ್ದಾಗ ತಂಡದ ಭಾಗವಾಗಿದ್ದರು. ಆದರೆ, ಅವರ ಒಪ್ಪಂದದ ಅವಧಿ ಮುಗಿದ ನಂತರ ಅವರನ್ನು ಮರುಸೇರ್ಪಡೆ ಮಾಡಲಾಗಿಲ್ಲ. ಇದಲ್ಲದೆ, ಅವರು ರಾಜಸ್ಥಾನ್ ರಾಯಲ್ಸ್‌ನ ಸಹಾಯಕ ಕೋಚ್‌ ಆಗಿದ್ದರು.


ಮೆಕ್ಸಿಕೋ ವಿಶ್ವವಿದ್ಯಾನಿಲಯದ ಕ್ರೀಡಾ ವಿಭಾಗದ ಜನರಲ್ ಸಂಯೋಜಕರಾದ ಜುವಾನ್ ಕಾರ್ಲೋಸ್ ಮೆಡಿನಾ, ಯಾವುದೇ ಕ್ರೀಡಾ ಸ್ಪರ್ಧೆಯ ಮೊದಲು ಆಟಗಾರರು ದೈಹಿಕ ಸಂಬಂಧವನ್ನು ಹೊಂದುವ ಮೂಲಕ ಪ್ರಯೋಜನ ಪಡೆಯುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದರಿಂದ ಆಟಗಾರರು ಮಾನಸಿಕವಾಗಿ ನಿರಾಳರಾಗಿ, ಸಂತೃಪ್ತರಾಗಿ, ಸಂತಸದಿಂದ ಇರುತ್ತಾರೆ. ಇದು ಅವರ ಮನಸ್ಸಿನಿಂದ ಒತ್ತಡವನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ ಎಂಬುದು ಅವರ ಅಭಿಪ್ರಾಯ.


ಇನ್ನು ಮೆಕ್ಸಿಕೊದ ರಾಷ್ಟ್ರೀಯ ಸ್ವಾಯತ್ತ ವಿಶ್ವವಿದ್ಯಾನಿಲಯದ (UNAM) ಕ್ರೀಡಾ ಔಷಧದ ನಿರ್ದೇಶಕರಾದ ಮಾರಿಯಾ ಕ್ರಿಸ್ಟಿನಾ ರೊಡ್ರಿಗಸ್ ಕೂಡ ಈ ಹೇಳಿಕೆಯನ್ನು ಒಪ್ಪಿಕೊಂಡಿದ್ದಾರೆ. ದೈಹಿಕ ಸಂಬಂಧಗಳನ್ನು ಹೊಂದಿದ ನಂತರ, ಆಟಗಾರರಿಗೆ ಸಹಾಯ ಮಾಡುತ್ತದೆ. ಬದಲಾಗಿ ಸಮಸ್ಯೆಯನ್ನುಂಟು ಮಾಡುವುದಿಲ್ಲ ಎಂದಿದ್ದಾರೆ.


ಇದನ್ನೂ ಓದಿ: ಒಂದೂ ಒಳ್ಳೆ ಅಭ್ಯಾಸ ಇಲ್ಲ.. ನೀರಿನ ಬದಲಿಗೆ ಈಕೆ ಕುಡಿಯೋದು ಡ್ರಿಂಕ್ಸ್‌ ಮಾತ್ರ!! ಎರಡು ಮಕ್ಕಳ ತಾಯಿಯಾಗಿದ್ರು ಈಕೆಯ ಸೌಂದರ್ಯದ ಗುಟ್ಟು ತುಂಬಾ ಸಿಂಪಲ್‌?!


ಇವರ ಹೇಳಿಕೆ ಬಗ್ಗೆ ಸಿಎನ್‌ಎನ್ ವರದಿ ಮಾಡಿದ್ದು, "ದೈಹಿಕ ಸಂಬಂಧ ಹೊಂದುವುದರಿಂದ ದೇಹವು ಕೇವಲ 200 ರಿಂದ 300 ಕಿಲೋ ಕ್ಯಾಲೊರಿಗಳನ್ನು ಸುಡುತ್ತದೆ. ಆದರೆ ಇದು ನಿಮ್ಮ ಮನಸ್ಸು ಮತ್ತು ದೇಹವನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ. ಜೊತೆಗೆ ಸಂಪೂರ್ಣವಾಗಿ ಶಾಂತಗೊಳಿಸುತ್ತದೆ. ಇನ್ನು ಚಾಕೊಲೇಟ್ ಅಥವಾ ಬಿಸ್ಕತ್ತುಗಳನ್ನು ತಿನ್ನುವ ಮೂಲಕ ಬರ್ನ್ಡ್ ಕ್ಯಾಲೊರಿಗಳನ್ನು ಹೆಚ್ಚಿಸಬಹುದು" ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ