Shoaib Malik fixing allegations: ಪಾಕಿಸ್ತಾನದ ಅನುಭವಿ ಆಲ್‌ ರೌಂಡರ್ ಶೋಯೆಬ್ ಮಲಿಕ್ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ʼನಲ್ಲಿ ಫಾರ್ಚೂನ್ ಬಾರಿಶಾಲ್ ಜೊತೆಗಿನ ಒಪ್ಪಂದವನ್ನು ಕಳೆದುಕೊಂಡಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಅನುಮಾನಗಳ ಕಾರಣ ಫ್ರಾಂಚೈಸಿ ಮಲಿಕ್ ಜೊತೆಗಿನ ಒಪ್ಪಂದವನ್ನು ಅಂತ್ಯಗೊಳಿಸಲು ನಿರ್ಧರಿಸಿದೆ. BPL 2024 ರ ಮಿರ್ಪುರ್ ಹಂತದಲ್ಲಿ ಫಾರ್ಚೂನ್ ಬಾರಿಶಾಲ್ʼಗಾಗಿ ಮಲಿಕ್ ಮೂರು ಪಂದ್ಯಗಳನ್ನು ಆಡಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಧೋನಿ ಗರಡಿಯಲ್ಲಿ ಪಳಗಿದ ನಾಲ್ವರು ಕ್ರಿಕೆಟಿಗರು: ಇಂದಿಗೂ ಟೀಂ ಇಂಡಿಯಾ ಪರ ಆಡುತ್ತಿದ್ದಾರೆ ಇವರು!


ಫಾರ್ಚೂನ್ ಬಾರಿಶಾಲ್ ತಂಡದ ಮಾಲೀಕ ಮಿಜಾನೂರ್ ರೆಹಮಾನ್ ಅವರು ಮಲಿಕ್ ಜೊತೆಗಿನ ಒಪ್ಪಂದ ಕೊನೆಗೊಳಿಸುವ ಬಗ್ಗೆ ಖಚಿತಪಡಿಸಿದ್ದಾರೆ. ಕಳೆದ ದಿನ ಅಂದರೆ ಆಗಸ್ಟ್‌ 16ರಂದು ಫಾರ್ಚೂನ್ ಬಾರಿಶಾಲ್ ಶೋಯೆಬ್ ಮಲಿಕ್ ಬದಲಿಗೆ ಅಹ್ಮದ್ ಶೆಹಜಾದ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಪಾಕಿಸ್ತಾನದ ಆಲ್‌ ರೌಂಡರ್ ಪಂದ್ಯಾವಳಿಯಲ್ಲಿ ಇನ್ಮುಂದೆ ಇರುವುದಿಲ್ಲ ಎಂದು ಖಚಿತಪಡಿಸಿದ್ದಾರೆ.


ಇದನ್ನೂ ಓದಿ: ಕೆಮಿಕಲ್‌ ತೊಟ್ಟಿಗೆ ಬಿದ್ದ ಬಳಿಕ ಈ ನಟನ ತಲೆಯಲ್ಲಿ ಬೆಳೆಯಲಿಲ್ಲ ಒಂದೇ ಒಂದು ಕೂದಲು!


ಫಿಕ್ಸಿಂಗ್ ಮಾಡಿದ್ದಾರಾ?
ಪಾಕಿಸ್ತಾನದ ಸ್ಟಾರ್ ಆಲ್ ರೌಂಡರ್ ಶೋಯೆಬ್ ಮಲಿಕ್ ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಶೋಯೆಬ್ ಮಲಿಕ್ ಜೊತೆಗಿನ ಒಪ್ಪಂದವನ್ನು ಫಾರ್ಚೂನ್ ಬಾರಿಶಾಲ್ ರದ್ದುಗೊಳಿಸಿದೆ. ಪಾಕಿಸ್ತಾನದ ಆಲ್‌ರೌಂಡರ್ ಮಲಿಕ್ ಕಳೆದ ಪಂದ್ಯದಲ್ಲಿ ಖುಲ್ನಾ ರೈಡರ್ಸ್ ವಿರುದ್ಧ ಒಂದೇ ಓವರ್‌ʼನಲ್ಲಿ ಮೂರು ನೋಬಾಲ್‌ʼಗಳನ್ನು ಎಸೆದಿದ್ದರು. ಇದರಿಂದಾಗಿ ಅನುಮಾನಕ್ಕೆ ಒಳಗಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ