Jake Fraser McGurk: ಆಸ್ಟ್ರೇಲಿಯಾದ 22 ವರ್ಷದ ಬ್ಯಾಟ್ಸ್‌ಮನ್ ಜೇಕ್ ಫ್ರೇಸರ್ ಮೆಕ್‌ ಗುರ್ಕ್ ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡುತ್ತಿದ್ದಾರೆ. ಅಂದಹಾಗೆ ಇಂದು ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೆಕ್ ಗುರ್ಕ್ ಬೆಂಕಿ ಬ್ಯಾಟಿಂಗ್ ಮಾಡಿದ್ದು, ಸಿಕ್ಸರ್-ಬೌಂಡರಿಗಳ ಸುರಿಮಳೆಗೈದಿದ್ದಾರೆ,


COMMERCIAL BREAK
SCROLL TO CONTINUE READING

ಈ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಫ್ರೇಸರ್ ಮೆಕ್‌ ಗುರ್ಕ್, 27 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್‌’ಗಳನ್ನು ಒಳಗೊಂಡಂತೆ ಒಟ್ಟು 84 ರನ್‌ ಕಲೆ ಹಾಕಿದ್ದಾರೆ. ಈ ಇನ್ನಿಂಗ್ಸ್ ಸಮಯದಲ್ಲಿ, ಅನುಭವಿ ಬ್ಯಾಟ್ಸ್‌ಮನ್‌’ಗಳಾದ ವೀರೇಂದ್ರ ಸೆಹ್ವಾಗ್ ಮತ್ತು ಆಡಮ್ ಗಿಲ್‌ ಕ್ರಿಸ್ಟ್ ದಾಖಲೆಗಳನ್ನು ಹಿಂದಿಕ್ಕಿದ್ದಾರೆ.


ಇದನ್ನೂ ಓದಿ: ಅಲ್ಪ ಮೊತ್ತದ ಬರ ಪರಿಹಾರ ಬಿಡುಗಡೆ ಮಾಡುವ ಮೂಲಕ ಕೇಂದ್ರದಿಂದ ಕರ್ನಾಟಕದ ರೈತರಿಗೆ ಅನ್ಯಾಯ


ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಬಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫ್ರೇಸರ್ ಮೆಕ್‌ ಗುರ್ಕ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿತ್ತು. ಮೊದಲ ಎಸೆತದಲ್ಲಿಯೇ ಬೌಂಡರಿ ಮತ್ತು ಸಿಕ್ಸರ್ ಬಾರಿಸಲು ಆರಂಭಿಸಿದ ಮೆಕ್‌ ಗುರ್ಕ್, ಲ್ಯೂಕ್ ವುಡ್ ಅವರ ಮೊದಲ ಓವರ್‌’ನಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿ 19 ರನ್ ಗಳಿಸಿದರು. ಎರಡನೇ ಓವರ್’ಗೆ ಬಂದ ಜಸ್ಪ್ರೀತ್ ಬುಮ್ರಾ ಅವರ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದರೆ, ಬಳಿಕ ಎರಡು ಬೌಂಡರಿಗಳನ್ನೂ ಸಿಡಿಸಿದರು. ಮೂರನೇ ಓವರ್‌’ನಲ್ಲಿ ನುವಾನ್ ತುಷಾರ ಎಸೆತಗಳಲ್ಲಿ 3 ಬೌಂಡರಿ ಬಾರಿಸಿದ ಮೆಕ್, ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂದಹಾಗೆ ಫ್ರೇಸರ್ ಮೆಕ್‌ ಗುರ್ಕ್ ಇದೇ ಸೀಸನ್’ನಲ್ಲಿ ಹೈದರಾಬಾದ್ ವಿರುದ್ಧ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.


ಸೆಹ್ವಾಗ್ ದಾಖಲೆ ಬ್ರೇಕ್:


ಫ್ರೇಸರ್ ಮೆಕ್‌ ಗುರ್ಕ್ ಡೆಲ್ಲಿ ಕ್ಯಾಪಿಟಲ್ಸ್ ಪರ ಇನ್ನಿಂಗ್ಸ್‌’ನ ಮೊದಲ ಓವರ್‌’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ವೀರೇಂದ್ರ ಸೆಹ್ವಾಗ್ ಅವರನ್ನು ಹಿಂದಿಕ್ಕಿದ್ದಾರೆ. 2008ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್ ಗಳಿಸಿದ್ದ ವೀರೇಂದ್ರ ಸೆಹ್ವಾಗ್ ಎರಡನೇ ಸ್ಥಾನದಲ್ಲಿದ್ದು, ಈ ಪಟ್ಟಿಯಲ್ಲಿ ಪೃಥ್ವಿ ಶಾ ಅಗ್ರಸ್ಥಾನದಲ್ಲಿದ್ದಾರೆ. ಅವರು 2021 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಇನಿಂಗ್ಸ್‌ನ ಮೊದಲ ಓವರ್‌’ನಲ್ಲಿ 24 ರನ್ ಗಳಿಸಿದರು.


ಇದನ್ನೂ ಓದಿ:ಮುಂಜಾನೆ ಎದ್ದಂತೆ ಮೊಸರಿಗೆ ಈ ಕಪ್ಪು ಬೀಜ ಬೆರೆಸಿ ತಿನ್ನಿ: ದಿನಪೂರ್ತಿ ನಾರ್ಮಲ್ ಇರುತ್ತೆ ಬ್ಲಡ್ ಶುಗರ್! ಯಾವ ಔಷಧಿಯೂ ಬೇಕಿಲ್ಲ


ಗಿಲ್‌ ಕ್ರಿಸ್ಟ್‌ ರೆಕಾರ್ಡ್:


ಪ್ರಸಿದ್ಧ ಬ್ಯಾಟ್ಸ್‌ಮನ್ ಆಡಮ್ ಗಿಲ್‌ ಕ್ರಿಸ್ಟ್ ಅವರ ಮಹತ್ವದ ದಾಖಲೆಯನ್ನೂ ಫ್ರೇಸರ್ ಬ್ರೇಕ್ ಮಾಡಿದ್ದಾರೆ. ಸುರೇಶ್ ರೈನಾ ಐಪಿಎಲ್‌ನಲ್ಲಿ ಪವರ್‌ ಪ್ಲೇನಲ್ಲಿ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಅಂದರೆ ಒಂದು ಪಂದ್ಯದಲ್ಲಿ 87 ರನ್ ಗಳಿಸಿದ್ದರು. ಇನ್ನು ಈ ಪಟ್ಟಿಯಲ್ಲಿ ಟ್ರಾವಿಸ್ ಹೆಡ್ 84 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಫ್ರೇಸರ್ ಮೂರನೇ ಸ್ಥಾನದಲ್ಲಿದ್ದು, ಗಿಲ್‌ಕ್ರಿಸ್ಟ್‌ ಅವರನ್ನು ಹಿಂದೆಕ್ಕಿದ್ದಾರೆ. ಈ ಪಂದ್ಯದಲ್ಲಿ ಫ್ರೇಸರ್ ಪವರ್‌ ಪ್ಲೇಯಲ್ಲಿ 78 ರನ್ ಗಳಿಸಿದ್ದು, ಗಿಲ್‌ಕ್ರಿಸ್ಟ್ ಪವರ್‌ಪ್ಲೇನಲ್ಲಿ 74 ರನ್‌ ಗಳಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ