Raghavendra Dwigi: ಭಾರತ ವಿಶ್ವಕಪ್ ಗೆದ್ದಾಗ ಮೈದಾನದಲ್ಲಿ ನೋಡಿದ ವ್ಯಕ್ತಿಯ ಬಗ್ಗೆ ಕುತೂಹಲವಿತ್ತು. ಹಣೆಯ ಮೇಲೆ ಕುಂಕುಮವನ್ನಿಟ್ಟ ಇವರು ಸಾಮಾನ್ಯ ವ್ಯಕ್ತಿಯಂತೆ ಕಂಡರೂ ಕರ್ನಾಟಕದ ಅಸಾಧಾರಣ ಪ್ರತಿಭೆ. ಕೇವಲ 21 ರೂಪಾಯಿಯೊಂದಿಗೆ ಮನೆಯಿಂದ ಹೊರಬಂದ ಬಾಲಕ ಈಗ ಭಾರತದ ವಿಶ್ವಕಪ್ ಗೆಲುವಿನ ಹಿಂದಿನ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದಾನೆ̤


COMMERCIAL BREAK
SCROLL TO CONTINUE READING

ಅಷ್ಟಕ್ಕು ಈ ವ್ಯಕ್ತಿ ಯಾರು ಎಂಬ ಅನುಮಾನ ಕಡುತ್ತಿದೆಯಾ?  ಕ್ರಿಕೆಟಿಗನಾಗಬೇಕೆಂದು ಕನಸು ಕಂಡಿದ್ದ ಈತನ ಕೈ ಮುರಿದಿತ್ತು, ಈತ ಕಂಡ ಕ್ರಿಕೆಟ್ ಕನಸು ಭಗ್ನಗೊಂಡಿತ್ತು. ಕಳೆದುಕೊಂಡನ್ನು ಬೇರೆಡೆ ಹುಡುಕಲು ಹೊರಟ ಈತ, ಇಂದು  ಭಾರತದ ಟಿ20 ವಿಶ್ವಕಪ್ ವಿಜಯದ ವಾಸ್ತುಶಿಲ್ಪಿಗಳಲ್ಲಿ ಒಬ್ಬರು. ಸರಿಸುಮಾರು 24 ವರ್ಷಗಳ ಹಿಂದೆ ಈ ಹುಡುಗ ಕ್ರಿಕೆಟ್ ಆಡಲು ಕೇವಲ 21 ರೂಪಾಯಿಯೊಂದಿಗೆ ಮನೆಬಿಟ್ಟು ಬಂದಿದ್ದ. ಆ ಪಯಣ ಈಗ ಭಾರತದ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವಲ್ಲಿ ಅಂತ್ಯಗೊಂಡಿದೆ. ಹೇಗೆ ಎನ್ನುವ ಪ್ರಶ್ನೆ ಕಾಡ್ತಾ ಇದೆಯಾ? ಮುಂದೆ ಓದಿ...


2017ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಸಂದರ್ಭದಲ್ಲಿ ವಿರಾಟ್ ಕೊಹ್ಲಿ , "ನನ್ನ ಯಶಸ್ಸಿನಲ್ಲಿ ಈ ವ್ಯಕ್ತಿಯ ಪಾತ್ರ ಅಪಾರವಾಗಿದೆ, ಆದರೆ ಅವನ ಕಠಿಣ ಪರಿಶ್ರಮ ಪ್ರಪಂಚದ ಗಮನಕ್ಕೆ ಬರುವುದಿಲ್ಲ." ಎಂದು ಹೇಳಿದ್ದರು. ಅದು ಬೇರೆ ಯಾರು ಅಲ್ಲ ನಾವು ನಿಮಗೆ ಹೇಳಲು ಹೊರಟಿರುವ ಅದೇ ವ್ಯಕ್ತಿ. ಟೀಮ್ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದ್ವಿಗಿ.


ಇದನ್ನೂ ಓದಿ: ಟೀಂ ಇಂಡಿಯಾದ ವೇಳಾಪಟ್ಟಿ ರಿಲೀಸ್‌..? 8 ತಿಂಗಳಲ್ಲಿ 33 ಪಂದ್ಯಗಳನ್ನು ಆಡಲಿದ್ದಾರೆ ಬ್ಯೂ ಬಾಯ್ಸ್‌..!


ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾದ ರಾಘವೇಂದ್ರ ಅವರು ಭಾರತ ಕ್ರಿಕೆಟ್ ತಂಡದ ಬೆನ್ನೆಲುಬು ಎಂದೇ ಕರೆಯಲ್ಪಡುತ್ತಾರೆ. ಕಳೆದ 13 ವರ್ಷಗಳಿಂದ ತಂಡಕ್ಕಾಗಿ ರಕ್ತ ಸುರಿಸಿದವರು ಯಾರಾದರೂ ಇದ್ದರೆ ಅದು ರಾಘವೇಂದ್ರ ಮಾತ್ರ.


ರಘು ಅವರು 2011 ರಲ್ಲಿ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಭಾರತೀಯ ತಂಡವನ್ನು ಸೇರಿಕೊಳುತ್ತಾರೆ  ಕಳೆದ ಒಂದು ದಶಕದಲ್ಲಿ ಅಭ್ಯಾಸದ ಅವಧಿಯಲ್ಲಿ ಕನಿಷ್ಠ 1 ಮಿಲಿಯನ್ ಎಸೆತಗಳನ್ನು ಬೌಲ್ ಮಾಡಿದ್ದಾರೆ. ಬೌಲ್ ಮಾಡಿದ ಚೆಂಡುಗಳನ್ನು ತನ್ನ ತೋಳಿನ ಬಲದಿಂದ ಎದುರಿಸುವುದು ಸುಲಭದ ಮಾತಲ್ಲ. 


ವಿರಾಟ್ ಮತ್ತು ರೋಹಿತ್ ಅವರಂತಹ ಆಟಗಾರರ ಶಕ್ತಿ ಮತ್ತು ಪರಾಕ್ರಮ. ಅವರ ಶಕ್ತಿ ಮತ್ತು ಪರಾಕ್ರಮಕ್ಕೆ ಪರಿಪೂರ್ಣತೆಯನ್ನು ತಂದುಕೊಟ್ಟವರು ನಮ್ಮವರೇ ಆದ ಕನ್ನಡಿಗ ರಾಘವೇಂದ್ರ.
"ನಾವು ನೆಟ್ಸ್‌ನಲ್ಲಿ 150 ಕಿಲೋಮೀಟರ್ ವೇಗದಲ್ಲಿ ರಘು ಎಸೆದ ಚೆಂಡುಗಳನ್ನು ಎದುರಿಸಲು ಎಷ್ಟು ಅಭ್ಯಾಸ ಮಾಡಿಕೊಂಡಿದ್ದೇವೆ ಎಂದರೆ ಪಂದ್ಯದಲ್ಲಿ ಭಯಭೀತ ವೇಗದ ಬೌಲರ್‌ಗಳು ಮಧ್ಯಮ ವೇಗಿಗಳಂತೆ ಕಾಣುತ್ತಾರೆ" ಎಂದು ವಿರಾಟ್ ಕೊಹ್ಲಿ ಒಮ್ಮೆ ಹೇಳಿದ್ದರು.


ಇದನ್ನೂ ಓದಿ: "ಭಾರತ ಸೋತಿದ್ದರೆ ಕೊಹ್ಲಿ ವಿಲನ್‌ ಆಗುತ್ತಿದ್ದರು, ಪ್ರಶಸ್ತಿಗೆ ಆತ ಅನರ್ಹ...": ಸಂಜಯ್ ಮಂಜ್ರೇಕರ್..!


ಜೀವನದಲ್ಲಿ ಎಲ್ಲವೂ ಮುಗಿಯಿತು ಎಂದುಕೊಳ್ಳುವವರು ರಾಘವೇಂದ್ರ ಅವರ ಸ್ಫೂರ್ತಿದಾಯಕ ಕಥೆಯನ್ನು ಕೇಳಲೇ ಬೇಕು.


ರಾಘವೇಂದ್ರ ಅವರಿಗೆ ಕ್ರಿಕೆಟ್ ಬಗ್ಗೆ ಅಪಾರ ಒಲವು ಇತ್ತು. ಅವರ ತಂದೆಗೆ "ಕ್ರಿಕೆಟ್" ಎಂಬ ಪದವನ್ನು ಕೇಳಿದ್ರೆನೆ ಅಲರ್ಜಿ. ಮಗನಿಗೆ ಆಟದ ಮೇಲಿನ ವ್ಯಾಮೋಹವನ್ನು ಕಂಡ ತಂದೆ ಒಮ್ಮೆ ‘ನಿನಗೆ ವಿದ್ಯಾಭ್ಯಾಸ ಮತ್ತು ಜೀವನ ಮುಖ್ಯವೋ, ಕ್ರಿಕೆಟ್‌ ಮುಖ್ಯವೋ?’ ಎಂದು ಕೇಳಿದರು ಅಷ್ಟೇ ಕೈಯಲ್ಲಿ ಕೇವಲ ಒಂದು ಚೀಲ ಮತ್ತು ಜೇಬಿನಲ್ಲಿ 21 ರೂಪಾಯಿಯೊಂದಿಗೆ ರಾಘವೇಂದ್ರ ಮನೆಯಿಂದ ಹೊರಟು ಹೋಗಿಯೇ ಬಿಟ್ಟರು.


ಸ್ಮಶಾನದಲ್ಲಿ ಕೈಬಿಟ್ಟ ಕಟ್ಟಡ ಅವನ ಮನೆಯಾಯಿತು. ಕ್ರಿಕೆಟ್ ಮೈದಾನದಿಂದ ತಂದ ಚಾಪೆಯನ್ನೇ ಹಾಸಿಗೆಯಾಗಿ ಬಳಸಿಕೊಂಡರು. ಸುಮಾರು ನಾಲ್ಕೂವರೆ ವರ್ಷಗಳ ಕಾಲ ರಾಘವೇಂದ್ರ ಸ್ಮಶಾನದಲ್ಲಿ ಮಲಗಿದ್ದರು. ಈ ನಡುವೆ ಬಲಗೈ ಮೂಳೆ ಮುರಿತಕ್ಕೆ ತುತ್ತಾಗಿ ಕ್ರಿಕೆಟ್ ಆಡುವ ಕನಸು ಭಗ್ನಗೊಂಡಿತ್ತು. ಮನೆಯಿಂದ ಹೊರಬಂದ ಅವರು ಎಂದಿಗೂ ಹಿಂತಿರುಗಬಾರದು ಎಂದು ನಿರ್ಧರಿಸಿದರು ಮತ್ತು ಕ್ರಿಕೆಟ್ ತರಬೇತಿಯತ್ತ ಗಮನ ಹರಿಸಿದರು.


ಆರಂಭದಲ್ಲಿ ಹುಬ್ಬಳ್ಳಿಯಲ್ಲಿ ಕ್ರಿಕೆಟಿಗರಿಗೆ ಕೈಯಿಂದ ಚೆಂಡು ಎಸೆದು ಅಭ್ಯಾಸದಲ್ಲಿ ನೆರವಾಗಿದ್ದರು. ಆಗ ಗೆಳೆಯರೊಬ್ಬರು ಬೆಂಗಳೂರಿಗೆ ದಾರಿ ತೋರಿಸಿದರು. ಬೆಂಗಳೂರಿನಲ್ಲಿ ಕರ್ನಾಟಕ ಕ್ರಿಕೆಟ್ ಸಂಸ್ಥೆ ಆಶ್ರಯ ನೀಡಿತ್ತು. ಅಭ್ಯಾಸಕ್ಕೆ ಬಂದ ಕರ್ನಾಟಕದ ಕ್ರಿಕೆಟಿಗರಿಗೆ ಚೆಂಡು ಎಸೆಯುವುದು, ಬೌಲಿಂಗ್ ಮಷಿನ್ ಗೆ ನೆರವು ನೀಡುವುದು ಇವರ ಕೆಲಸವಾಗಿತ್ತು.


ಒಂದು ದಿನ, ಕರ್ನಾಟಕದ ಮಾಜಿ ವಿಕೆಟ್ ಕೀಪರ್ ಮತ್ತು ಪ್ರಸ್ತುತ 19 ವರ್ಷದೊಳಗಿನವರ ಆಯ್ಕೆ ಸಮಿತಿಯ ಮುಖ್ಯಸ್ಥ ತಿಲಕ್ ನಾಯ್ಡು ಅವರನ್ನು ಗಮನಿಸಿದರು. ಅವರ ಕೆಲಸದಿಂದ ಪ್ರಭಾವಿತರಾದ ತಿಲಕ್ ನಾಯ್ಡು ಅವರನ್ನು ಕರ್ನಾಟಕದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರಿಗೆ ಪರಿಚಯಿಸಿದರು.


ಇದನ್ನೂ ಓದಿ: T20 World Cup 2024: ಭಾರತದ ಗೆಲುವಿಗೆ ವಿಷ ಉಗುಳಿದ ಆಸೀಸ್‌ ಮಾಧ್ಯಮ..!


ಅದು ರಾಘವೇಂದ್ರರ ಜೀವನದಲ್ಲಿ ಮಹತ್ವದ ತಿರುವು. ಯುವಕನ ಸಮರ್ಪಣೆಯನ್ನು ಗಮನಿಸಿದ ಶ್ರೀನಾಥ್ ಅವರನ್ನು ಕರ್ನಾಟಕ ರಣಜಿ ತಂಡಕ್ಕೆ ಸೇರಲು ಆಹ್ವಾನಿಸಿದರು. ಕ್ರಿಕೆಟ್ ಋತುವಿನಲ್ಲಿ, ಅವರು ಕರ್ನಾಟಕ ತಂಡದೊಂದಿಗೆ ಕೆಲಸ ಮಾಡಿದರು ಮತ್ತು ಆಫ್-ಸೀಸನ್ನಲ್ಲಿ, ಅವರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿನಲ್ಲಿ ಕೆಲಸ ಮಾಡಿದರು. 


NCA ಯಲ್ಲಿದ್ದಾಗ, ಅವರು BCCI ಲೆವೆಲ್-1 ಕೋಚಿಂಗ್ ಕೋರ್ಸ್ ಅನ್ನು ಪೂರ್ಣಗೊಳಿಸಿದರು. ಎನ್‌ಸಿಎಯಲ್ಲಿ ಅಭ್ಯಾಸಕ್ಕೆ ಬಂದ ಭಾರತೀಯ ತಂಡದ ಕ್ರಿಕೆಟಿಗರಿಗೆ ಸಹಾಯ ಮಾಡಿದ ಅವರು ಅವರ ನೆಚ್ಚಿನವರಾದರು.


ಸಚಿನ್ ತೆಂಡೂಲ್ಕರ್ ರಾಘವೇಂದ್ರ ಅವರ ಪ್ರತಿಭೆಯನ್ನು ಶೀಘ್ರವಾಗಿ ಗುರುತಿಸಿ. ಇದರ ಫಲವಾಗಿ 2011ರಲ್ಲಿ ತರಬೇತಿ ಸಹಾಯಕರಾಗಿ ಭಾರತ ತಂಡವನ್ನು ಸೇರಿಕೊಂಡರು. ಕಳೆದ 13 ವರ್ಷಗಳಿಂದ ರಾಘವೇಂದ್ರ ಭಾರತ ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರ ಅವಿರತ ಶ್ರಮಕ್ಕೆ ಟಿ20 ವಿಶ್ವಕಪ್ ಗೆಲುವಿನೊಂದಿಗೆ ಸಮೃದ್ಧವಾಗಿ ಪ್ರತಿಫಲ ಸಿಕ್ಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.