Team india players international cricket: ಟೀಂ ಇಂಡಿಯಾದಲ್ಲಿ ಪೈಪೋಟಿ ನಿರಂತರವಾಗಿ ಹೆಚ್ಚುತ್ತಲೇ ಇದೆ. ಇದರಿಂದಾಗಿ ಮೂವರು ಸ್ಟಾರ್ ಕ್ರಿಕೆಟಿಗರ ಅಂತಾರಾಷ್ಟ್ರೀಯ ವೃತ್ತಿಜೀವನ ಅಂತ್ಯಗೊಳ್ಳುವ ಹಂತದಲ್ಲಿದೆ. ಪ್ರತಿಯೊಬ್ಬ ಕ್ರಿಕೆಟಿಗನು ತನ್ನ ದೇಶಕ್ಕಾಗಿ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಲು ಬಯಸುತ್ತಾನೆ. ಆದರೆ, ಕೆಲವೇ ಆಟಗಾರರು ಇದನ್ನು ಮಾಡಬಹುದು. ಇಂತಹ ಪಟ್ಟಿಯಲ್ಲಿ ಭಾರತದ ಮೂವರು ಕ್ರಿಕೆಟಿಗರಿದ್ದಾರೆ. ಒಂದು ಮಾದರಿಯಲ್ಲಿಯೂ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ವಯೋಮಿತಿ ಮತ್ತು ಕಳಪೆ ಪ್ರದರ್ಶನದಿಂದಾಗಿ ಈ ಮೂವರು ಅನುಭವಿಗಳು ಟೀಂ ಇಂಡಿಯಾಗೆ ಮರಳುವುದು ಬಹುತೇಕ ಅಸಾಧ್ಯವಾಗಿದೆ. ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿರುವ ಟೀಮ್ ಇಂಡಿಯಾದ ಮೂವರು ಆಟಗಾರರನ್ನು ನೋಡೋಣ.


COMMERCIAL BREAK
SCROLL TO CONTINUE READING

1. ಅಜಿಂಕ್ಯ ರಹಾನೆ: 
ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಅಜಿಂಕ್ಯ ರಹಾನೆ ಟೀಮ್ ಇಂಡಿಯಾ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅಜಿಂಕ್ಯ ರಹಾನೆ ಭಾರತ ಪರ ಇದುವರೆಗೆ 85 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಅವರು 38.46 ಸರಾಸರಿಯಲ್ಲಿ 5077 ರನ್ ಗಳಿಸಿದರು. ಅಜಿಂಕ್ಯ ರಹಾನೆ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 12 ಶತಕ ಮತ್ತು 26 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇವರಿಗೆ ಈಗ 36 ವರ್ಷ ವಯಸ್ಸಾಗಿದ್ದು, ಟೀಂ ಇಂಡಿಯಾದಿಂದ ಹೊರಬಿದ್ದಿದ್ದಾರೆ. 


ಇದನ್ನೂ ಓದಿ-ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತದ ಟೆಸ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಹೊಸ ದಾಖಲೆ ಸೃಷ್ಟಿ!


2. ವೃದ್ಧಿಮಾನ್ ಸಹಾ:
ಭಾರತ ಟೆಸ್ಟ್ ತಂಡಕ್ಕೆ ವೃದ್ಧಿಮಾನ್ ಸಹಾ ಮರಳುವುದು ಈಗ ಬಹುತೇಕ ಅಸಾಧ್ಯವಾಗಿದೆ. ವೃದ್ಧಿಮಾನ್ ಸಹಾ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಎರಡರಲ್ಲೂ ಉತ್ತಮ ಅನುಭವ ಹೊಂದಿದ್ದಾರೆ. ಆದರೆ, ಈಗ ರಿಷಭ್ ಪಂತ್ ಮತ್ತು ಧ್ರುವ್ ಜುರೆಲ್ ಅವರಂತಹ ವಿಕೆಟ್ ಕೀಪರ್‌ಗಳಿರುವುದರಿಂದ, ವೃದ್ಧಿಮಾನ್ ಸಹಾಗೆ ಟೀಮ್ ಇಂಡಿಯಾದ ಬಾಗಿಲು ಬಹುತೇಕ ಮುಚ್ಚಲ್ಪಟ್ಟಿದೆ. ವೃದ್ಧಿಮಾನ್ ಸಹಾ 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. 39 ವರ್ಷದ ವೃದ್ಧಿಮಾನ್ ಸಹಾ ಕೇವಲ 40 ಟೆಸ್ಟ್‌ಗಳನ್ನು ಮಾತ್ರ ಆಡಿದ್ದಾರೆ.. ವೃದ್ಧಿಮಾನ್ ಸಹಾ ಅವರ ಟೆಸ್ಟ್ ವೃತ್ತಿಜೀವನ ನೋಡುವುದಾದರೇ ಅವರು 40 ಟೆಸ್ಟ್‌ಗಳಲ್ಲಿ 29.41 ಸರಾಸರಿಯಲ್ಲಿ 1353 ರನ್ ಗಳಿಸಿದ್ದಾರೆ.  


3. ಇಶಾಂತ್ ಶರ್ಮಾ:
ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾಗೆ ಮತ್ತೆ ಭಾರತ ಕ್ರಿಕೆಟ್ ತಂಡದಲ್ಲಿ ಅವಕಾಶ ಸಿಗುವುದು ಕಷ್ಟವಾಗಿದೆ. ಇಶಾಂತ್ ಶರ್ಮಾ 2021ರ ನವೆಂಬರ್‌ನಲ್ಲಿ ಟೀಂ ಇಂಡಿಯಾ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಕಳಪೆ ಫಾರ್ಮ್ ಮತ್ತು ಫಿಟ್ನೆಸ್ ಕಾರಣದಿಂದ ಇಶಾಂತ್ ಶರ್ಮಾ ಅವರನ್ನು ಟೀಂ ಇಂಡಿಯಾದಿಂದ ಕೈಬಿಡಲಾಗಿತ್ತು. ಟೀಂ ಇಂಡಿಯಾದ ದಿಗ್ಗಜ ವೇಗದ ಬೌಲರ್ ಇಶಾಂತ್ ಶರ್ಮಾಗೆ ಭಾರತ ಕ್ರಿಕೆಟ್ ತಂಡದ ಬಾಗಿಲು ಬಹುತೇಕ ಮುಚ್ಚಿದೆ. ಇಶಾಂತ್ ಶರ್ಮಾ 105 ಟೆಸ್ಟ್ ಪಂದ್ಯಗಳನ್ನಾಡಿದ್ದು 311 ವಿಕೆಟ್ ಪಡೆದಿದ್ದಾರೆ. ಇಶಾಂತ್ ಶರ್ಮಾ ಏಕದಿನದಲ್ಲಿ 115 ವಿಕೆಟ್ ಹಾಗೂ ಟಿ20ಯಲ್ಲಿ 8 ವಿಕೆಟ್ ಪಡೆದಿದ್ದಾರೆ.


ಇದನ್ನೂ ಓದಿ-Viral Video: ನಾಗಿನ್‌ ಡ್ಯಾನ್ಸ್‌ ಮೂಲಕ ಬಾಂಗ್ಲಾ ತಂಡಕ್ಕೆ ಲೇವಡಿ ಮಾಡಿದ ವಿರಾಟ್ ಕೊಹ್ಲಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.