Gary Kirsten Pakistan Cricket Team coach: 2024 ರ ಟಿ20 ವಿಶ್ವಕಪ್‌ ಆರಂಭಕ್ಕೂ ಮೊದಲು, ಪಾಕಿಸ್ತಾನ ತಂಡ ತನ್ನ ಕೋಚ್ ಅನ್ನು ಬದಲಾಯಿಸಿದೆ. ಗ್ಯಾರಿ ಕರ್ಸ್ಟನ್ ವೈಟ್ ಬಾಲ್ ಫಾರ್ಮ್ಯಾಟ್‌’ಗಳಲ್ಲಿ (ODI ಮತ್ತು T20) ಪಾಕಿಸ್ತಾನ ತಂಡಕ್ಕೆ ಹೊಸ ಕೋಚ್ ಆಗಿ ನೇಮಕಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಒಣಹಣ್ಣಷ್ಟೇ ಸಾಕು: ಬೆಳಗೆದ್ದು ಹಳಸಿದ ಬಾಯಲ್ಲಿ ತಿಂದರೆ ಸೊಂಟದ ಸುತ್ತ ಸಂಗ್ರಹವಾದ ಕೆಟ್ಟ ಬೊಜ್ಜು ಸುಲಭವಾಗಿ ಕರಗುತ್ತೆ! ಯಾವ ಶ್ರಮವೂ ಬೇಕಿಲ್ಲ


ಗ್ಯಾರಿ ಕರ್ಸ್ಟನ್ ಮುಂದಾಳತ್ವದಲ್ಲಿ ಭಾರತವು 28 ವರ್ಷಗಳ ನಂತರ 2011 ರ ODI ವಿಶ್ವಕಪ್ ಗೆದ್ದಿತ್ತು. ಇನ್ನು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಜೇಸನ್ ಗಿಲ್ಲೆಸ್ಪಿ ಅವರನ್ನು ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿ ಮಾಡಲಾಗಿದೆ.


T20 ವಿಶ್ವಕಪ್ 2024 ಜೂನ್ 1 ರಿಂದ ವೆಸ್ಟ್ ಇಂಡೀಸ್ ಮತ್ತು ಅಮೇರಿಕಾದಲ್ಲಿ ನಡೆಯಲಿದೆ. ಈ ಮೆಗಾ ಈವೆಂಟ್‌’ಗೆ ಮೊದಲು, 56 ವರ್ಷದ ಗ್ಯಾರಿ ಕರ್ಸ್ಟನ್ ಅವರನ್ನು ಪಾಕಿಸ್ತಾನದ ಕೋಚ್ ಆಗಿ ನೇಮಿಸಲಾಗಿದೆ. ಮಿಕ್ಕಿ ಆರ್ಥರ್ ನಿರ್ಗಮನದ ನಂತರ, ಪಾಕಿಸ್ತಾನ ತಂಡವು ಎಲ್ಲಾ ಮೂರು ಸ್ವರೂಪಗಳಲ್ಲಿ ಮುಖ್ಯ ಕೋಚ್‌’ಗಾಗಿ ಹುಡುಕುತ್ತಿತ್ತು, ಆದರೆ ಈಗ ಈ ಹುಡುಕಾಟವನ್ನು ಪಿಸಿಬಿ ಪೂರ್ಣಗೊಳಿಸಿದೆ.


2011ರಲ್ಲಿ ಗ್ಯಾರಿ ಕರ್ಸ್ಟನ್ ಕೋಚ್ ಆಗಿದ್ದ ಎಂಎಸ್ ಧೋನಿ ನೇತೃತ್ವದ ಭಾರತ ತಂಡ 28 ವರ್ಷಗಳ ನಂತರ ವಿಶ್ವಕಪ್ ಗೆಲ್ಲುವ ಬರವನ್ನು ಕೊನೆಗೊಳಿಸಿತ್ತು. ಕರ್ಸ್ಟನ್ ಅವರ ಅಧಿಕಾರಾವಧಿಯಲ್ಲಿ ಭಾರತವು ಏಕದಿನ ವಿಶ್ವಕಪ್ ಗೆದ್ದುಕೊಂಡಿದ್ದಲ್ಲದೆ, ಟೆಸ್ಟ್ ಮತ್ತು ODI ಶ್ರೇಯಾಂಕದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತ್ತು. ಭಾರತದ ನಂತರ, ಗ್ಯಾರಿ ಕರ್ಸ್ಟನ್ ದಕ್ಷಿಣ ಆಫ್ರಿಕಾದ ಮುಖ್ಯ ಕೋಚ್ ಆಗಿದ್ದರು. ಈಗ 56 ನೇ ವಯಸ್ಸಿನಲ್ಲಿ, ಐಪಿಎಲ್ 2024ರಲ್ಲಿ ಗುಜರಾತ್ ಟೈಟಾನ್ಸ್‌’ನ ಮಾರ್ಗದರ್ಶಕ ಮತ್ತು ಬ್ಯಾಟಿಂಗ್ ಕೋಚ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಟೀಂ ಇಂಡಿಯಾದ ದಿಗ್ಗಜ ಜಹೀರ್ ಖಾನ್ ಪತ್ನಿ ಯಾರು ಗೊತ್ತಾ? ಈಕೆ ಖ್ಯಾತ ನಟಿಯೂ…ಭಾರತದ ಸ್ಟಾರ್ ಹಾಕಿ ಪ್ಲೇಯರ್ ಕೂಡ ಹೌದು!


ಗ್ಯಾರಿ ಕರ್ಸ್ಟನ್ ಮೊದಲ ಬಾರಿಗೆ ಪಾಕಿಸ್ತಾನ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. 2024ರ ಟಿ20 ವಿಶ್ವಕಪ್‌ಗೂ ಮುನ್ನ ಪಿಸಿಬಿ ಅವರಿಗೆ ದೊಡ್ಡ ಜವಾಬ್ದಾರಿ ನೀಡಿದ್ದು, ಜೂನ್ 9 ರಂದು ನ್ಯೂಯಾರ್ಕ್‌’ನಲ್ಲಿ ಪಾಕಿಸ್ತಾನ ತಂಡ ಭಾರತವನ್ನು ಎದುರಿಸಲಿದೆ. ಟಿ20 ವಿಶ್ವಕಪ್‌’ನಲ್ಲಿ ಭಾರತವನ್ನು ಸೋಲಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗಿದ್ದು ಒಂದೇ ಒಂದು ಬಾರಿ ಎಂಬುದು ಇಲ್ಲ ಉಲ್ಲೇಖನೀಯ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.