T20 Team India Captain: ಟಿ20 ವಿಶ್ವಕಪ್ 2026 ಅನ್ನು ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾ ಹೊಸ ನಾಯಕನನ್ನು ಸಿದ್ಧಪಡಿಸುತ್ತಿದೆ. ನೂತನ ಕೋಚ್ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆದಾರರು ತೀವ್ರ ಚರ್ಚೆ ನಡೆಸಿ ಹಾರ್ದಿಕ್ ಪಾಂಡ್ಯ ಅವರನ್ನು ಭವಿಷ್ಯದ ನಾಯಕತ್ವ ಯೋಜನೆಯಿಂದ ಹೊರಗಿಟ್ಟಿದ್ದಾರೆ. ಇತ್ತೀಚೆಗಷ್ಟೇ ಭಾರತ ಟಿ20 ವಿಶ್ವಕಪ್ ಗೆದ್ದಿದ್ದು ಗೊತ್ತೇ ಇದೆ. ಅಂತಿಮ ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ20ಗೆ ವಿದಾಯ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದರೊಂದಿಗೆ ಟಿ20 ಮಾದರಿಯಲ್ಲಿ ಭಾರತ ತಂಡದ ನಾಯಕನ ಸ್ಥಾನ ಖಾಲಿಯಾಗಿದೆ. ಆದರೆ ರೋಹಿತ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಇಲ್ಲಿಯವರೆಗೆ ಟಿ20 ಸರಣಿಗೆ ನಾಯಕರಾಗಿದ್ದರು. ರೋಹಿತ್ ನಂತರ ಹಾರ್ದಿಕ್ ಭವಿಷ್ಯದ ನಾಯಕ ಎಂದು ಎಲ್ಲರೂ ಫಿಕ್ಸ್ ಆಗಿದ್ದರು. ಆದರೆ ಇದೀಗ ನಾಯಕತ್ವದ ರೇಸ್‌ನಲ್ಲಿ ಹೊಸ ಹೆಸರು ಬಂದಿದೆ. ಸೂರ್ಯಕುಮಾರ್ ಯಾದವ್ ಅವರನ್ನು ನಾಯಕನಾಗಿ ಮಾಡುವ ನಿರ್ಧಾರಕ್ಕೆ ಗಂಭೀರ್ ಹಾಗೂ ಕೋಚ್‌ಗಳು ಬಂದಿರುವಂತಿದೆ.


ರೋಹಿತ್ ಮತ್ತು ಹಾರ್ದಿಕ್ ಅನುಪಸ್ಥಿತಿಯಲ್ಲಿ, ಸೂರ್ಯಕುಮಾರ್ ಯಾದವ್ ಈಗಾಗಲೇ ಟಿ20 ಸರಣಿಗೆ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಟಿ20 ವಿಶ್ವಕಪ್ 2026 ರವರೆಗೆ ಸೂರ್ಯ ಟಿ20 ನಾಯಕನಾಗಿ ಮುಂದುವರಿಯಬೇಕೆಂದು ಬಿಸಿಸಿಐ(BCCI) ಬಯಸಿದೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. 


ಇದನ್ನೂ ಓದಿ: IND vs SL: ರೋಹಿತ್‌, ಹಾರ್ದಿಕ್‌ ಅಲ್ಲ.. ಶ್ರೀಲಂಕಾ ಪ್ರವಾಸಕ್ಕೆ ಇವರೇ ನಾಯಕ..!


ರೋಹಿತ್ ಶರ್ಮಾ ಟಿ20ಯಿಂದ ನಿವೃತ್ತಿ ಘೋಷಿಸಿದ ನಂತರ ನಾಯಕತ್ವದ ರೇಸ್‌ನಲ್ಲಿ ಹಲವು ಹೆಸರುಗಳು ಕೇಳಿಬಂದಿದ್ದವು. ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್ ಮತ್ತು ಶುಭಮನ್ ಗಿಲ್ ಹೆಸರು ರೇಸ್‌ನ ಪಟ್ಟಿಯಲ್ಲಿವೆ. 


ನಾಯಕತ್ವದ ವಿಷಯದಲ್ಲಿ ಬುಮ್ರಾ ಸೂರ್ಯಾಗೆ ಕಠಿಣ ಪೈಪೋಟಿ ಕೊಡುತ್ತಿದ್ದಾರೆ. ಏಕದಿನ ವಿಶ್ವಕಪ್‌ಗೂ ಮುನ್ನ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಬುಮ್ರಾ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ ಕೆಲಸದ ಹೊರೆಯೊಂದಿಗೆ ಬುಮ್ರಾ ಮೇಲೆ ನಾಯಕತ್ವದ ಒತ್ತಡವನ್ನು ತರಬಾರದು ಎಂದು ಬಿಸಿಸಿಐ ಸೂರ್ಯ ಅವರನ್ನು ಆಯ್ಕೆ ಮಾಡುತ್ತಿದೆ ಎಂದು ತೋರುತ್ತದೆ. ಇದಲ್ಲದೆ, ಸೂರ್ಯ ಕಳೆದ ಕೆಲವು ವರ್ಷಗಳಿಂದ ಟಿ20 ಬ್ಯಾಟ್ಸ್‌ಮನ್‌ಗಳ ಪೈಕಿ ಟಾಪ್-2 ನಲ್ಲಿದ್ದಾರೆ. ಅವರು ಟಿ20ಯಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್‌ನ ಬೆನ್ನೆಲುಬು. ಇದರೊಂದಿಗೆ ಹಾರ್ದಿಕ್‌ ಬದಲಿಗೆ ಸೂರ್ಯಕುಮಾರ್‌ ನಾಯಕನ ಸ್ಥಾನ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ