ಗಂಭೀರ್ ಹೆಚ್ಚು ಕಾಲ ಕೋಚ್ ಆಗಿ ಉಳಿಯಲು ಸಾಧ್ಯವಿಲ್ಲ..ಅಚ್ಚರಿ ಹೇಳಿಕೆ ಕೊಟ್ಟ ಟೀಂ ಇಂಡಿಯಾದ ಸ್ಟಾರ್ ಆಟಗಾರ..?
Jogsinder Sharma Questions Tenure: ಶ್ರೀಲಂಕಾ ಪ್ರವಾಸದಿಂದ ಅವರು ತಂಡದ ಕೋಚ್ ಜವಬ್ದಾರಿ ವಹಿಸಿಕೊಂಡಿದ್ದು, ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಮಾಡಿದ್ದರಿಂದ ಗೌತಮ್ ಗಂಭೀರ್ ತಮ್ಮ ಕೋಚ್ ವೃತ್ತಿಜೀವನದಲ್ಲಿ ತಮ್ಮ ಮೊದಲ ಸರಣಿ ಗೆಲುವಿನ ರುಚಿ ಕಂಡಿದ್ದಾರೆ. ಆದರೆ, ಇದೆಲ್ಲದರ ನಡುವೆ ಟೀಂ ಇಂಡಿಯಾ ವಿಶ್ವಕಪ್ ಗೆಲುವಿನ ಹೀರೋ ಆಗಿದ್ದ ಆಟಗಾರನೊಬ್ಬನ ಶಾಕಿಂಗ್ ಹೇಳಿಕೆ ವೈರಲ್ ಆಗುತ್ತಿದೆ.
Jogsinder Sharma Questions Tenure: ಟೀಂ ಇಂಡಿಯಾದ ಕೋಚ್ ಆಗಿ ಟಿ20 ವಿಸ್ವಕಪ್ ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸದ್ದ ರಾಹುಲ್ ದ್ರಾವಿಡ್ ಅವರ ಅಧಿಕಾರಕ್ಕೆ ಗುಡ್ ಬೈ ಹೇಳಿದ ನಂತರ ಗೌತಮ್ ಗಂಭೀರ್ ಇದೀಗ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಎಂಟ್ರಿ ಕೊಟ್ಟಿರುವುದು ಗೊತ್ತಿರುವ ವಿಷಯ. ಶ್ರೀಲಂಕಾ ಪ್ರವಾಸದಿಂದ ಅವರು ತಂಡದ ಕೋಚ್ ಜವಬ್ದಾರಿ ವಹಿಸಿಕೊಂಡಿದ್ದು, ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಮಾಡಿದ್ದರಿಂದ ಗೌತಮ್ ಗಂಭೀರ್ ತಮ್ಮ ಕೋಚ್ ವೃತ್ತಿಜೀವನದಲ್ಲಿ ತಮ್ಮ ಮೊದಲ ಸರಣಿ ಗೆಲುವಿನ ರುಚಿ ಕಂಡಿದ್ದಾರೆ. ಆದರೆ, ಇದೆಲ್ಲದರ ನಡುವೆ ಟೀಂ ಇಂಡಿಯಾ ವಿಶ್ವಕಪ್ ಗೆಲುವಿನ ಹೀರೋ ಆಗಿದ್ದ ಆಟಗಾರನೊಬ್ಬನ ಶಾಕಿಂಗ್ ಹೇಳಿಕೆ ವೈರಲ್ ಆಗುತ್ತಿದೆ.
ಗೌತಮ್ ಗಂಭೀರ್ ಬಗ್ಗೆ ಹೀಗೊಂದು ಹೇಳಿಕೆ ನೀಡಲು ಹೊರಟಿರುವವರು 2007ರಲ್ಲಿ ಮೊದಲ ಟಿ20ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಹೀರೋ ಆಗಿದ್ದ ಜೋಗಿಂದರ್ ಶರ್ಮಾ. ಆ ಐಸಿಸಿ ಟೂರ್ನಮೆಂಟ್ ಗೆದ್ದ ತಂಡದಲ್ಲಿ ಗೌತಮ್ ಗಂಭೀರ್ ಕೂಡ ಒಬ್ಬರಾಗಿದ್ದರು. ಗಂಭೀರ್ ಬಗ್ಗೆ ನನಗೆ ತಿಳಿದಿರುವ ಪ್ರಕಾರ, ಅವರು ಭಾರತ ತಂಡದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಜೋಗಿಂದರ್ ಶರ್ಮಾ ಹೇಳಿತ್ತಾರೆ.
ಇದನ್ನೂ ಓದಿ: "ಒಬ್ಬರ ಜೊತೆ ಒಬ್ಬರು ಮಾತನಾಡದಿದ್ದರು, ನಮ್ಮಿಬ್ಬರ ಸ್ನೇಹ ತುಂಬಾ ಸ್ಪೆಷಲ್"..ಕೊಹ್ಲಿ ಕುರಿತು ಧೋನಿ ಹೀಗಂದಿದ್ಧೇಕೆ..?
ಜೋಗಿಂದರ್ ಶರ್ಮಾ ಅವರ ಈ ಅಚ್ಚರಿಯ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಆವೇಗವನ್ನು ಪಡೆಯುತ್ತಿದೆ, ಇದರ ಹಿಂದೆ ಅವರು 3 ಕಾರಣಗಳನ್ನು ನೀಡಿದ್ದಾರೆ. ಗೌತಮ್ ಗಂಭೀರ್ ಅವರ ಕೆಲವು ನಿರ್ಧಾರಗಳು ಹೆಚ್ಚು ಜನರಿಗೆ ಇಷ್ಟವಾಗುವುದಿಲ್ಲ ಎಂದಿದ್ದಾರೆ.
ಜೋಗಿಂದರ್ ಶರ್ಮಾ ಪ್ರಕಾರ, ಎರಡನೆಯ ವಿಷಯವೆಂದರೆ ಗಂಭೀರ್ ಯಾರ ಬಳಿಯೂ ಹೋಗುವುದಿಲ್ಲ. ಆಟಗಾರರನ್ನು ಹೊಗಳುವುದು ಅಂತೂ ಅವರಿಗೆ ಅಭ್ಯಾಸವೇ ಇಲ್ಲ ಎಂದಿದ್ದಾರೆ. ಅವರು ನೀಡಿದ ಮೂರನೇ ಮತ್ತು ಕೊನೆಯ ಕಾರಣವೆಂದರೆ ಗಂಭೀರ್ ಅವರು ತಮ್ಮ ಕೆಲಸವನ್ನು ಮಾಡುವುದನ್ನು ನಂಬುತ್ತಾರೆ ಮತ್ತು ಅದರ ಕ್ರೆಡಿಟ್ ಪಡೆಯಲು ಬಯಸುವುದಿಲ್ಲ ಎಂಬ ಮೂರು ಕಾರಣಗಳನ್ನು ನೀಡಿದ್ದಾರೆ.
ರಾಹುಲ್ ದ್ರಾವಿಡ್ ಬದಲಿಗೆ ಗೌತಮ್ ಗಂಭೀರ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಟಿ20 ವಿಶ್ವಕಪ್ 2024 ರ ಗೆಲುವಿನೊಂದಿಗೆ, ಟೀಂ ಇಂಡಿಯಾದೊಂದಿಗಿನ ರಾಹುಲ್ ದ್ರಾವಿಡ್ ಅವರ ಅವಧಿಯೂ ಕೊನೆಗೊಂಡಿತು, ನಂತರ ಗೌತಮ್ ಗಂಭೀರ್ ಜವಾಬ್ದಾರಿಯನ್ನು ಪಡೆದರು. ಪ್ರಸ್ತುತ, ಭಾರತ ತಂಡವು ಗೌತಮ್ ಗಂಭೀರ್ ಅವರ ಕೋಚಿಂಗ್‌ನಲ್ಲಿ ಶ್ರೀಲಂಕಾ ಪ್ರವಾಸದಲ್ಲಿದ್ದು, ಅಲ್ಲಿ ಏಕದಿನ ಸರಣಿಯನ್ನು ಆಡಲಾಗುತ್ತಿದೆ. ಟಿ20 ಸರಣಿ ಗೆದ್ದ ನಂತರ ಏಕದಿನ ಸರಣಿಯಲ್ಲೂ ಗೆಲುವಿನ ಮೇಲೆ ಗಂಭೀರ್ ಕಣ್ಣಿಟ್ಟಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.