ನವದೆಹಲಿ: ಅಂಬಾಟಿ ರಾಯುಡು ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ನಂತರ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದಾರೆ.


COMMERCIAL BREAK
SCROLL TO CONTINUE READING

ವಿಶ್ವಕಪ್ ಗೂ ಮೊದಲು ಅಂಬಟಿ ರಾಯಡು ಅವರಿಗೆ ಆಯ್ಕೆ ಸಮಿತಿ ಮಣೆ ಹಾಕಿರಲಿಲ್ಲ ಅವರ ಬದಲಿಗೆ ಆಲ್ ರೌಂಡರ್ ವಿಜಯ್ ಶಂಕರ್ ಗೆ ಮಣೆ ಹಾಕಲಾಗಿತ್ತು. ಇನ್ನೊಂದೆಡೆಗೆ ಶಿಖರ್ ಧವನ್ ಗಾಯಗೊಂಡ ಹಿನ್ನಲೆಯಲ್ಲಿ ರಿಶಬ್ ಪಂತ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಈಗ ವಿಜಯ್ ಶಂಕರ್ ಗಾಯಗೊಂಡ ಹಿನ್ನಲೆಯಲ್ಲಿ 15 ತಂಡದ ಆಟಗಾರರಲ್ಲಿ ಆಯ್ಕೆ ಸಮಿತಿ ಈಗ ಮಾಯಾಂಕ್ ಅಗರವಾಲ್ ಅವರಿಗೆ ಮಣೆ ಹಾಕಿದೆ. ಇದರಿಂದ ವಿಶ್ವಕಪ್ ತಂಡದಲ್ಲಿ ಸ್ಥಾನ ದೊರೆಯದ ಹಿನ್ನಲೆಯಲ್ಲಿ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾಗಿದೆ.


ಈಗ ಅಂಬಟಿ ರಾಯ್ದು ನಿರ್ಧಾರದ ಬಗ್ಗೆ ಮಾತನಾಡಿದ ಗಂಭೀರ್, ಇದು ಭಾರತೀಯ ಕ್ರಿಕೆಟ್‌ಗೆ ವಿಷಾದಕರ ಕ್ಷಣವಾಗಿದೆ ಎಂದು ಹೇಳಿದ್ದಾರೆ. ಐಪಿಎಲ್ ಮತ್ತು ರಾಷ್ಟ್ರಕ್ಕಾಗಿ ಅಷ್ಟು ಉತ್ತಮವಾಗಿ ಆಡಿದ ಅವರಂತಹ ಕ್ರಿಕೆಟಿಗರು 3 ಶತಕ 10 ಅರ್ಧಶತಕವನ್ನು ಗಳಿಸಿದ್ದಾರೆ, ಮತ್ತು ಅದರ ಹೊರತಾಗಿಯೂ ಒಬ್ಬ ಆಟಗಾರ ನಿವೃತ್ತಿ ಹೊಂದಬೇಕಾದರೆ - ಇದು ಭಾರತೀಯ ಕ್ರಿಕೆಟ್‌ಗೆ ವಿಷಾದಕರ ಕ್ಷಣವಾಗಿದೆ" ಎಂದು ಗಂಭೀರ್ ಉಲ್ಲೇಖಿಸಿದ್ದಾರೆ.


ಇನ್ನು ಮುಂದುವರೆದು  'ಐದು ಆಯ್ಕೆದಾರರು ಸೇರಿದರು ಸೇರಿದರೂ ರಾಯುಡು ಅವರು ತಮ್ಮ ವೃತ್ತಿಜೀವನದಲ್ಲಿ ಗಳಿಸಿದಷ್ಟು ರನ್ ಸಾಧ್ಯವಾಗುತ್ತಿರಲಿಲ್ಲ. ಈ ನಿವೃತ್ತಿಯ ಬಗ್ಗೆ ನನಗೆ ತುಂಬಾ ಬೇಸರವಾಗಿದೆ. ರಾಯುಡು ಅವರ ಸ್ಥಾನದಲ್ಲಿದ್ದರೆ ಯಾರಿಗೆ ಅದರೂ ಅಷ್ಟೇ ಕೆಟ್ಟವೆನಿಸುತ್ತು ಎಂದು ಗಂಭೀರ್ ಹೇಳಿದ್ದಾರೆ.