ನವದೆಹಲಿ: ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾತ್ ಅವರ ಯುಗದ ಶ್ರೇಷ್ಠ  ಬೌಲರ್ ಆಗಿದ್ದವರು. ಅವರ ಕಾಲಾವಧಿಯಲ್ಲಿ ಕೆಲವೇ ಆಟಗಾರರನ್ನು ಹೊರತುಪಡಿಸಿದರೆ ಉಳಿದವರು ಅವರ ಎಸೆತಗಳನ್ನು ಎದುರಿಸುವಲ್ಲಿ ಸಾಕಷ್ಟು ಕಷ್ಟಪಡುತ್ತಿದ್ದರು.


COMMERCIAL BREAK
SCROLL TO CONTINUE READING

ಈಗ ಇಎಸ್ಪಿಎನ್ಕ್ರಿಕ್ಇನ್ಫೊ ಅವರೊಂದಿಗಿನ ಚಾಟ್ ಶೋನಲ್ಲಿ, ಅವರು ತಮ್ಮ ಕನಸಿನ ಹ್ಯಾಟ್ರಿಕ್ನಲ್ಲಿ ಔಟ್ ಮಾಡಲು ಬಯಸುವ ಬ್ಯಾಟ್ಸ್‌ಮನ್‌ಗಳನ್ನು ಆಯ್ಕೆ ಮಾಡಿದ್ದಾರೆ.ವಿಶೇಷವೆಂದರೆ ಈ ಹ್ಯಾಟ್ರಿಕ್ ನಲ್ಲಿ ಇಬ್ಬರು ಭಾರತೀಯ ಕ್ರಿಕೆಟಿಗರಿದ್ದಾರೆ. ಗ್ಲೆನ್ ಮೆಕ್ ಗ್ರಾತ್ ಅವರು ಬ್ರಿಯಾನ್ ಲಾರಾ, ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರನ್ನು ಹ್ಯಾಟ್ರಿಕ್ ಪಡೆಯುವುದಾಗಿ ಹೇಳಿಕೊಂಡಿದ್ದಾರೆ.


ಈ ಮೂವರು ಆಟಗಾರರನ್ನು ಔಟ್ ಮಾಡಲು ಬಳಸುವ ಅಸ್ತ್ರ ಯಾವುದು ಎಂದು ಕೇಳಿದಾಗ, ಗಂಟೆಗೆ 100 ಮೈಲಿ ದೂರ ಎಸೆಯುವುದು ಎಂದು ಹೇಳಿದರು. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಈ ಹಿಂದೆ ಮೆಕ್‌ಗ್ರಾತ್ ಮತ್ತು ಸಚಿನ್ ಮತ್ತು ಅಖ್ತರ್ ಮತ್ತು ಸಚಿನ್ ನಡುವಿನ ಕದನಗಳ ನಡುವಿನ ವ್ಯತ್ಯಾಸವನ್ನು ಕುರಿತು ಮಾತನಾಡಿದ್ದರು.


ಟ್ವಿಟ್ಟರ್ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಹಾಗ್ 'ಸಚಿನ್ ಮತ್ತು ಮೆಕ್‌ಗ್ರಾತ್ ನಡುವಿನ ಕದನದಲ್ಲಿ ಮೆಕ್‌ಗ್ರಾತ್ ತಾಳ್ಮೆ ಆಟವನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದರು. ಆದರೆ ಸಚಿನ್ ಮತ್ತು  ಅಖ್ತರ್ ನಡುವಿನ ಕದನದಲ್ಲಿ ಅಖ್ತರ್ ತಮ್ಮ ವೇಗದ ಬೌಲಿಂಗ್ ಮೂಲಕ ಔಟ್ ಮಾಡಲು ಪ್ರಯತ್ನಿಸುತ್ತಾರೆ. ಇದಕ್ಕೆ ಇನ್ನು ಹೆಚ್ಚಿನ ಮೆರಗನ್ನು ನೀಡುವುದು ಭಾರತ ಮತ್ತು ಪಾಕ್ ನಡುವಿನ ತುರುಸಿನ ಪಂದ್ಯ ಎಂದು ಅವರು ಹೇಳಿದರು.